Neer Dose Karnataka
Take a fresh look at your lifestyle.

Kannada News: ಕಾಂತಾರ ಮುಂದಿನ ಭಾಗದ ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟ ರಿಷಬ್. ಕತೆ ಹೇಗಿರಲಿದೆ ಅಂತೇ ಗೊತ್ತೇ??

Kannada News: ಕಾಂತಾರ ಸಿನಿಮಾ ಇಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ, ಜನರ ಮೆಚ್ಚುಗೆ ಪಡೆದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಿ ದೇಶಾದ್ಯಂತ ಬರೋಬ್ಬರಿ 500 ಕೋಟಿ ಹಣಗಳಿಕೆ ಮಾಡಿದೆ. ಇನ್ನು ಈ ಸಿನಿಮಾ ಬಿಡುಗಡೆಯಾಗಿ 100 ದಿನಗಳು ಕಳೆದಿದ್ದು, ಇತ್ತೀಚೆಗೆ 100 ಡೇಸ್ ಸಂಭ್ರಮ, ಆಚರಣೆ ನಡೆಯಿತು. ಅದರಲ್ಲಿ ಮೊದಲ ಬಾರಿಗೆ ಕಾಂತಾರ2 ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ ಅವರು ಯಾರೂ ಊಹಿಸದ ಟ್ವಿಸ್ಟ್ ಕೊಟ್ಟಿದ್ದಾರೆ. ಅದೇನು ಗೊತ್ತಾ?

ಇಷ್ಟು ದಿವಸಗಳ ಕಾಲ ರಿಷಬ್ ಶೆಟ್ಟಿ ಅವರು ಕಾಂತಾರ2 ಬಗ್ಗೆ ಯಾವುದೇ ಮಾತನಾಡಿರಲಿಲ್ಲ. ಇದೇ ಮೊದಲ ಬಾರಿಗೆ ಕಾಂತಾರ 100 ದಿನಗಳ ಸಂಭ್ರಮದಲ್ಲಿ ಮಾತನಾಡಿದ್ದಾರೆ, “ಕಾಂತಾರ ಸಿನಿಮಾ ಬಿಡುಗಡೆಯಾಗಿ ಅದೆಷ್ಟೋ ಥಿಯೇಟರ್ ನಲ್ಲಿ 100 ದಿನ ಪ್ರದರ್ಶನ ಕಂಡಿದೆ, ಇದಕ್ಕೆಲ್ಲ ಕಾರಣ ನೀವು, ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗೋದಕ್ಕೆ ವೀಕ್ಷಕರೇ ಕಾರಣ. ಅವರನ್ನ ಮರೆಯುವ ಹಾಗಿಲ್ಲ, ಹಾಗೆಯೇ ಮಾಧ್ಯಮದವರಿಗೂ ಧನ್ಯವಾದ. ಭಾರತ ಚಿತ್ರರಂಗದ ಇತಿಹಾಸದಲ್ಲಿ, ಒಂದು ಪ್ರಾದೇಶಿಕ ಸಿನಿಮಾ, ತನಗೆ ತಾನೇ ಪ್ಯಾನ್ ಇಂಡಿಯಾ ಸಿನಿಮಾ ಆಗಿ, ಇಷ್ಟು ದೊಡ್ಡ ಮಟ್ಟಕ್ಕೆ ಯಶಸ್ಸು ಪಡೆದು, ಬೆಳೆದಿದ್ದು ಇದೇ ಮೊದಲು ಅನ್ನಿಸುತ್ತೆ. ತುಳು ನಲ್ಲೂ ಸಿನಿಮಾ ಬಿಡುಗಡೆ ಆಯಿತು, ಇಂಗ್ಲಿಷ್ ನಲ್ಲೂ ಬರುತ್ತೆ ಅಂತ ನೆಟ್ ಫ್ಲಿಕ್ಸ್ ಅವರು ಹೇಳಿದ್ದಾರೆ, ಅದು ಆದರೆ ಸಿನಿಮಾ 7 ಭಾಷೆಗಳಲ್ಲಿ ಬಂದ ಹಾಗೆ ಆಗುತ್ತೆ.. ಇದನ್ನು ಓದಿ..Kannada News: ನೇರವಾಗಿ ದರ್ಶನ್ ಗೆ ವಯಸ್ಸಾಗಿದೆ ಎಂದವರಿಗೆ ಷಾಕಿಂಗ್ ಪ್ರತಿಕ್ರಿಯೆ ಕೊಟ್ಟ ವಿಜಯ ಲಕ್ಷ್ಮಿ ರವರು ಹೇಳಿದ್ದೇನು ಗೊತ್ತೇ??

ಕಾಂತಾರ ಪಾರ್ಟ್2 ಬರೋದು ಯಾವಾಗ ಅಂತ ಚರ್ಚೆ ನಡೀತಿದೆ. ಈಗ ನೀವು ನೋಡಿರೋದು ಪಾರ್ಟ್ 2, ಪಾರ್ಟ್ 1 ಶೀಘ್ರದಲ್ಲೇ ಬರುತ್ತೆ ಅಂತ ಹೇಳ್ತೀನಿ.. ನೀವೇ ನೋಡ್ತೀರಾ.. ಈ ಸಿನಿಮಾ ತಯಾರಾಗುವಾಗ ನಾವು ಅಂದುಕೊಂಡಿದ್ದಕ್ಕಿಂತ ಬಜೆಟ್ ಎರಡಷ್ಟಾಗಿತ್ತು, ಆಗ ಇದು ದೊಡ್ಡ ಸಿನಿಮಾ ಅಂತ ನನ್ನ ಪತ್ನಿಗೆ ಹೇಳಿದ್ದೆ, ಆದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಇಷ್ಟು ದೊಡ್ಡ ಯಶಸ್ಸು ಕಂಡಮೇಲೆ, ಬಜೆಟ್ ತುಂಬಾ ಚಿಕ್ಕದಾಯಿತು ಅನ್ನಿಸುತ್ತಿದೆ..” ಎಂದು ರಿಷಬ್ ಶೆಟ್ಟಿ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಕಾಂತಾರ2 ಗಾಗಿ ಕಾಯುತ್ತಿರುವವರಿಗೆ ಭಾರಿ ಟ್ವಿಸ್ಟ್ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ. ಇದನ್ನು ಓದಿ..Kannada News: ವಿಜಯ್ ಹಾಗೂ ರಶ್ಮಿಕಾ ಸಂಬಂಧ ಹೀಗೆ ಮುಂದುವರೆದರೆ ಏನಾಗುತ್ತದೆ ಅಂತೇ ಗೊತ್ತೇ?? ಷಾಕಿಂಗ್ ಹೇಳಿಕೆ ಕೊಟ್ಟ ವೇಣು ಸ್ವಾಮಿ. ಏನಾಗುತ್ತದೆ ಗೊತ್ತೇ??

Comments are closed.