Kannada News: 12 KM ರಸ್ತೆಗೆ ಅಪ್ಪು ಹೆಸರಿಡುವ ಕುರಿತು ಇಷ್ಟು ದಿನ ಸುಮ್ಮನಿದ್ದ ಸುಮಲತಾ ರವರು ಕೊನೆ ಕ್ಷಣದಲ್ಲಿ ಹೇಳಿದ್ದೇನು ಗೊತ್ತೇ??
Kannada News: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಆರಾಧ್ಯ ದೈವ ಆಗಿ ಉಳಿದಿದ್ದಾರೆ. ಅವರು ಹೋಗಿ ಒಂದೂವರೆ ಕಳೆದಿದ್ದರು ಅಭಿಮಾನಿಗಳು ಮಾತ್ರ ಅಪ್ಪು ಅವರನ್ನು ಮರೆತಿಲ್ಲ. ಅಪ್ಪು ಅವರ ನೆನಪು ಸದಾ ಹೀಗೆಯೇ ಇರಬೇಕು ಎಂದು ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವಾನ್ವಿತ ಡಾಕ್ಟರೇಟ್ ನೀಡಿತು, ಕರ್ನಾಟಕ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ನೀಡಿತು. ಅಷ್ಟೇ ಅಲ್ಲದೆ ಇದೀಗ 12 ಕಿಮೀ ರಿಂಗ್ ರಸ್ತೆಗೆ ಅಪ್ಪು ಅವರ ಹೆಸರನ್ನು ಇಡಲಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಅವರ ಹೆಸರನ್ನು ಈಗಾಗಲೇ ಬೆಂಗಳೂರಿನ ಹಲವು ರಸ್ತೆಗಳಿಗೆ ಸರ್ಕಲ್ ಗಳಿಗೆ ಇಡಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಪ್ಪು ಅವರ ಹೆಸರಿನಲ್ಲಿ ರಸ್ತೆಗಳಿವೆ. ಅಪ್ಪು ಅವರ ಅನೇಕ ಪುತ್ಥಳಿಗಳು ಸಹ ತಯಾರಾಗಿದೆ. ಇದೀಗ ಬೆಂಗಳೂರಿನ ಮೈಸೂರು ರಸ್ತೆಯಿಂದ ಬನ್ನೇರುಘಟ್ಟ ಕಡೆಗೆ ಸಾಗುವ 12ಕಿಮೀ ದೂರದ ರಿಂಗ್ ರೋಡ್ ಗೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಡುವುದಾಗಿ ಕೆಲವು ತಿಂಗಳುಗಳ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಇದೀಗ ಅದು ನೆರವೇರಿದೆ.. ಇದನ್ನು ಓದಿ..Kannada News: ವಿಜಯ್ ಹಾಗೂ ರಶ್ಮಿಕಾ ಸಂಬಂಧ ಹೀಗೆ ಮುಂದುವರೆದರೆ ಏನಾಗುತ್ತದೆ ಅಂತೇ ಗೊತ್ತೇ?? ಷಾಕಿಂಗ್ ಹೇಳಿಕೆ ಕೊಟ್ಟ ವೇಣು ಸ್ವಾಮಿ. ಏನಾಗುತ್ತದೆ ಗೊತ್ತೇ??
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಪ್ಪು ಅವರ ಹೆಸಸಿರುವ ರಿಂಗ್ ರೋಡ್ ಉದ್ಘಾಟನೆ ಮಾಡಿದ್ದು, ನಟಿ ಮತ್ತು ಸಂಸದೆ ಆಗಿರುವ ಸುಮಲತಾ ಅವರು ಇದೀಗ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ., “ಅಪ್ಪು ಹೆಸರನ್ನು 12 ಕಿ.ಮೀ ರಿಂಗ್ ರಸ್ತೆಗೆ ಇಡುತ್ತಿರುವ ಸರಕಾರದ ನಿರ್ಧಾರವನ್ನು ಹೃತ್ಪೂರ್ವಕವಾಗಿ ಪ್ರಶಂಸಿಸುವೆ.ಅಪ್ಪು ನಮ್ಮೆಲ್ಲರ ಹೃದಯಕ್ಕೆ ಹತ್ತಿರವಾಗಿದ್ದವರು, ಇದೀಗ ನಮ್ಮ ಮನೆಗೂ ಬಂದಿದ್ದಾರೆ. ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೆ ಮತ್ತು ಕಂದಾಯ ಸಚಿವರಾದ ಆರ್.ಅಶೋಕ್ ಅವರಿಗೆ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಸರ್ವರಿಗೂ ಧನ್ಯವಾದಗಳು..” ಎಂದು ಟ್ವೀಟ್ ಮಾಡಿದ್ದಾರೆ ಸುಮಲತಾ ಅಂಬರೀಶ್. ಇದನ್ನು ಓದಿ..Kannada News: ಕಾಂತಾರ ಮುಂದಿನ ಭಾಗದ ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟ ರಿಷಬ್. ಕತೆ ಹೇಗಿರಲಿದೆ ಅಂತೇ ಗೊತ್ತೇ??
ಅಪ್ಪು ಹೆಸರನ್ನು 12 ಕಿ.ಮೀ ರಿಂಗ್ ರಸ್ತೆಗೆ ಇಡುತ್ತಿರುವ ಸರಕಾರದ ನಿರ್ಧಾರವನ್ನು ಹೃತ್ಪೂರ್ವಕವಾಗಿ ಪ್ರಶಂಸಿಸುವೆ.ಅಪ್ಪು ನಮ್ಮೆಲ್ಲರ ಹೃದಯಕ್ಕೆ ಹತ್ತಿರವಾಗಿದ್ದವರು,ಇದೀಗ ನಮ್ಮ ಮನೆಗೂ ಬಂದಿದ್ದಾರೆ.
ಮುಖ್ಯ ಮಂತ್ರಿಗಳಾದ @BSBommai ಕಂದಾಯ ಸಚಿವರಾದ @RAshokaBJP ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಸರ್ವರಿಗೂ ಧನ್ಯವಾದಗಳು#Appu #PRK pic.twitter.com/lWJUoPbr9r— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) February 7, 2023
Comments are closed.