Kannada News: ಮದುವೆ ಏನೋ ಆಯಿತು. ಈಗ ಕಿಯರಾ, ಸಿದ್ದಾರ್ಥ್ ಒಟ್ಟಿಗೆ ಇರುವ ಮನೆಯ ಬೆಲೆ ಕೇಳಿದರೆ, ಒಮ್ಮೆ ಆದ್ರೂ ಆ ಮನೆಯಲ್ಲಿ ಇರಬೇಕು ಅಂತೀರಾ. ಎಷ್ಟು ಕೋಟಿ ಗೊತ್ತೇ??
Kannada News: ಬಾಲಿವುಡ್ ನ ಸೆನ್ಸೇಷನ್ ಕಪಲ್ ಗಳಲ್ಲಿ ಕಿಯಾರಾ ಅಡ್ವಾಣಿ (Kiara Advani) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ಜೋಡಿ ಕೂಡ ಒಂದು. ಈ ಜೋಡಿ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು, ಪ್ರೀತಿ ಮಾಡುತ್ತಿದ್ದರು. ಇದರ ಬಗ್ಗೆ ಸುದ್ದಿಗಳು ವೈರಲ್ ಆದರೂ ಕೂಡ, ತಮ್ಮ ರಿಲೇಶನ್ಷಿಪ್ ಬಗ್ಗೆ ಇವರಿಬ್ಬರು ಹೆಚ್ಚಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅಧಿಕೃತವಾಗಿ ಘೋಷಣೆ ಕೂಡ ಮಾಡಿರಲಿಲ್ಲ. ಆದರೆ ಇವರಿಬ್ಬರ ಮದುವೆ ನಡೆಯುತ್ತಿದೆ ಎಂದು ಬಹಳಷ್ಟು ಸುದ್ದಿಗಳು ವೈರಲ್ ಆಗಿತ್ತು, ಅದೇ ರೀತಿ ನಿನ್ನೆಯಷ್ಟೇ ಈ ಜೋಡಿಯ ಮದುವೆ ರಾಜಸ್ತಾನ್ ನಲ್ಲಿರುವ ಜೈಸಲ್ಮೇರ್ ಕೋಟೆಯಲ್ಲಿ ನಡೆದಿದೆ.
ಇವರಿಬ್ಬರ ಮದುವೆ ಫೆಬ್ರವರಿ 6ರಂದು ನಡೆಯುತ್ತದೆ ಎನ್ನಲಾಗಿತ್ತು, ಆದರೆ ಮದುವೆ ನಡೆದಿರುವುದು ನಿನ್ನೆ, ಫೆಬ್ರವರಿ 7ರಂದು. ಈ ಜೋಡಿ ತಮ್ಮ ಮದುವೆಯ ಸುಂದರವಾದ ಫೋಟೋಸ್ ಗಳನ್ನು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಮದುವೆ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ಇವರ ಅಭಿಮಾನಿಗಳಿಗೂ ಬಹಳ ಸಂತೋಷವಾಗಿದೆ. ಕಿಯಾರಾ ಮತ್ತು ಸಿಧಾರ್ಥ್ ಮಲ್ಹೋತ್ರ ಅವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಮಾತ್ರವಲ್ಲ, ಅವರಿಬ್ಬರ ಮದುವೆ ಬಗ್ಗೆ ಇನ್ನಷ್ಟು ಸುದ್ದಿಗಳು ಸಹ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಕಾಂತಾರ ಮುಂದಿನ ಭಾಗದ ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟ ರಿಷಬ್. ಕತೆ ಹೇಗಿರಲಿದೆ ಅಂತೇ ಗೊತ್ತೇ??
ಮದುವೆ ಬಳಿಕ ಈ ಜೋಡಿ ಯಾವ ಮನೆಯಲ್ಲಿ ಇರುತ್ತಾರೆ ಎನ್ನುವ ಬಗ್ಗೆ ಈಗ ಸುದ್ದಿಯೊಂದು ಕೇಳಿಬರುತ್ತಿದೆ. ಸಾಮಾನ್ಯವಾಗಿ, ಬಾಲಿವುಡ್ ಸೆಲೆಬ್ರಿಟಿಗಳು ಜುಹು ಪ್ರದೇಶದಲ್ಲಿ ಐಷಾರಾಮಿ ಮನೆಯನ್ನು ಕೊಂಡುಕೊಳ್ಳುತ್ತಾರೆ. ಅದೇ ರೀತಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಜೋಡಿ ಸಹ ಜುಹುನಲ್ಲಿ ಭವ್ಯವಾದ ಮನೆಯನ್ನು ಖರೀದಿ ಮಾಡಿದ್ದು, ಈ ಮನೆಯ ಬೆಲೆ ಸುಮಾರು 70 ಕೋಟಿ ರೂಪಾಯಿ ಮೌಲ್ಯ ಹೊಂದಿದೆ ಎಂದು ಮಾಹಿತಿ ಸಿಕ್ಕಿದೆ. 3500 ಸ್ಕ್ವೇರ್ ಫೀಟ್ ವುಸ್ತೀರ್ಣ ಇರುವ ಈ ಮನೆಯಲ್ಲಿ ಎಲ್ಲಾ ಸೌಕರ್ಯಗಳು ಕೂಡ ಇದೆಯಂತೆ. ಮದುವೆ ಬಳಿಕ ಈ ಜೋಡಿ ಈ ಹೊಸ ಮನೆಯಲ್ಲೇ ಇರಲಿದ್ದಾರಂತೆ. ಸಧ್ಯಕ್ಕೆ ಈ ವಿಚಾರ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದನ್ನು ಓದಿ..Kannada News: 12 KM ರಸ್ತೆಗೆ ಅಪ್ಪು ಹೆಸರಿಡುವ ಕುರಿತು ಇಷ್ಟು ದಿನ ಸುಮ್ಮನಿದ್ದ ಸುಮಲತಾ ರವರು ಕೊನೆ ಕ್ಷಣದಲ್ಲಿ ಹೇಳಿದ್ದೇನು ಗೊತ್ತೇ??
Comments are closed.