Cricket News: ಏನು ಪ್ರಯೋಜನಕ್ಕೆ ಬಾರದೆ ಇದ್ದರೂ ಸ್ಥಾನ ಪಡೆಯುತ್ತಿದ್ದ ರಾಹುಲ್ ಗೆ ಕೊನೆಗೂ ಬ್ರೇಕ್: ಷಾಕಿಂಗ್ ಹೇಳಿಕೆ ಕೊಟ್ಟ ಬಿಸಿಸಿಐ ಅಧಿಕಾರಿ. ಹೇಳಿದ್ದೇನು ಗೊತ್ತೇ?
Cricket News: ಪ್ರಸ್ತುತ ನಾಗ್ಪುರದಲ್ಲಿ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ (India vs Australia) ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ, ಭಾರತ ತಂಡದ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನದಿಂದ 177 ರನ್ ಗಳಿಗೆ ಆಲೌಟ್ ಆಯಿತು. ಬಳಿಕ ಭಾರತ ತಂಡ ಉತ್ತಮ ಪ್ರದರ್ಶನವನ್ನು ನೀಡಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಶತಕ ಸಿಡಿಸುವ ಮೂಲಕ ಫಾರ್ಮ್ ಗೆ ಮರಳಿದ್ದಾರೆ. ಆದರೆ ಟೀಮ್ ಇಂಡಿಯಾದ (Team India) ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಅವರು ಮತ್ತೆ ಕಳಪೆ ಪ್ರದರ್ಶನ ನೀಡಿದ್ದಾರೆ.
ರಾಹುಲ್ (K L Rahul) ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಎದುರಿಸಿದ 70 ಎಸೆತಗಳಲ್ಲಿ ಗಳಿಸಿದ್ದು ಕೇವಲ 20 ರನ್, ಇತ್ತ ಶುಬ್ಮನ್ ಗಿಲ್ ಅವರು ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಎಷ್ಟೇ ಅವಕಾಶಗಳು ಸಿಗುತ್ತಿದ್ದರು ರಾಹುಲ್ ಅವರು ತಮ್ಮ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. 2022ರ ನಂತರ ಅವರು ಆಡಿದ 8 ಇನ್ನಿಂಗ್ಸ್ ಗಳಲ್ಲಿ ಗಳಿಸಿದ್ದು ಕೇವಲ 137 ರನ್ ಗಳು. ಹೀಗೆ ರಾಹುಲ್ ಅವರು ಫಾರ್ಮ್ ಗೆ ಬರದೆ ಇದ್ದರೆ ಅವರನ್ನು ತಂಡದಿಂದ ಕೈಬಿಡಬೇಕಾಗಬಹುದು ಎಂದು ಸ್ವತಃ ಬಿಸಿಸಿಐ ಅಧಿಕಾರಿಗಳೇ ತಿಳಿಸಿದ್ದಾರೆ. ನೆಟ್ಟಿಗರಲ್ಲಿ ಮತ್ತು ಕ್ರಿಕೆಟ್ ಪ್ರೇಮಿಗಳಲ್ಲಿ ಕೆ.ಎಲ್.ರಾಹುಲ್ ವೈಸ್ ಕ್ಯಾಪ್ಟನ್ ಎನ್ನುವ ಕಾರಣಕ್ಕೆ ಅವರಿಗೆ ವಿನಾಯಿತಿ ಸಿಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಓದಿ..Cricket News: ಮೈದಾನದ ಹೊರಗಡೆಯೂ ಈತ ಕಿಲಾಡಿ. ಈ ಬಾರಿ ಪಟಾಯಿಸಿದ್ದು ಯಾರನ್ನು ಗೊತ್ತೇ?? ದೊಡ್ಡವಳಾದರೂ ನಿಜಕ್ಕೂ ಅಪ್ಸರೆ, ಬಾಯ್ ಬಿಟ್ಟುಕೊಂಡು ನೋಡ್ತೀರಾ. ಯಾರು ಗೊತ್ತೇ??
ಅದಕ್ಕೆ ಬಿಸಿಸಿಐ (BCCI) ಅಧಿಕಾರಿಗಳು ಸ್ಪಷ್ಟನೆ ನೀಡಿ, ರಾಹುಲ್ ಅವರಿಗೆ ವಿನಾಯಿತಿ ಸಿಕ್ಕಿಲ್ಲ, ಕಳಪೆ ಪ್ರದರ್ಶನ ಮುಂದುವರೆದರೆ ಅವರನ್ನು ತಂಡದಿಂದ ಹೊರಗಿಡಬಹುದು ಎಂದು ಹೇಳಿದ್ದಾರೆ. “ವೈಸ್ ಕ್ಯಾಪ್ಟನ್ ಅನ್ನು ತಂಡದಿಂದ ಹೊರತೆಗೆಯಬಾರದು ಎಂದು ಯಾವ ನಿಯಮ ಕೂಡ ಇಲ್ಲ. ಕೆ.ಎಲ್.ರಾಹುಲ್ ಅವರು ಮುಂದೆ ಟೆಸ್ಟ್ ತಂಡಕ್ಕೆ ಕ್ಯಾಪ್ಟನ್ ಆಗುವ ಅಭ್ಯರ್ಥಿಗಳಲ್ಲಿ ಒಬ್ಬರು, ಆದರೆ ಲಿಸ್ಟ್ ನಲ್ಲಿ ಒಳ್ಳೆಯ ಫಾರ್ಮ್ ನಲ್ಲಿರುವ ಪ್ಲೇಯರ್ ಗಳು ಇದ್ದಾಗ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ..” ಎಂದು ಹಿರಿಯ ಬಿಸಿಸಿಐ ಅಧಿಕಾರಿಗಳು ಹೇಳಿದ್ದು., ಇದು ರಾಹುಲ್ ಅವರಿಗೆ ಎಚ್ಚರಿಕೆ ಗಂಟೆಯ ಹಾಗೆ ಆಗಿದೆ. ಇದನ್ನು ಓದಿ..Cricket News: ಒಂದು ಸಾಲದು ಎಂದು ಎರೆಡು ಅಥವಾ ಮೂರು ಬಾರಿ ಮದುವೆಯಾದ ಟಾಪ್ ಕ್ರಿಕೆಟಿಗರು ಯಾರ್ಯಾರು ಗೊತ್ತೇ??
Comments are closed.