CSK IPL 2023: ಐಪಿಎಲ್ ಆರಂಭವಾಗುವ ಮುನ್ನವೇ ಚೆನ್ನೈ ತಂಡಕ್ಕೆ ಬಿಗ್ ಶಾಕ್: ಮಹತ್ವದ ಮಾಹಿತಿ ತಿಳಿಸಿಯೇ ಬಿಟ್ಟ ಧೋನಿ. ಏನಾಗಿದೆ ಗೊತ್ತೇ??
CSK IPL 2023: 2023ರ ಐಪಿಎಲ್ ಶುರುವಾಗಲು ಉಳಿದಿರುವುದು ಒಂದೆರಡೇ ತಿಂಗಳು ಮಾತ್ರ. ಈ ಸಮಯದಲ್ಲಿ ಐಪಿಎಲ್ ನ ಸಕ್ಸಸ್ ಫುಲ್ ತಂಡಗಳಲ್ಲಿ ಒಂದಾಗಿರುವ ಸಿ.ಎಸ್.ಕೆ ತಂಡದ ಕಡೆಯಿಂದ ಒಂದು ಬಹಳ ಮಹತ್ವದ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಕೇಳಿ ತಂಡದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಆ ವಿಚಾರ ಏನು ಎಂದರೆ, ಸಿ.ಎಸ್.ಕೆ ತಂಡವನ್ನು ಕ್ಯಾಪ್ಟನ್ ಆಗಿ ಇಷ್ಟು ವರ್ಷಗಳ ಕಾಲ ಮುನ್ನಡೆಸಿಕೊಂಡು ಬಂದಿರುವ ಎಂ.ಎಸ್.ಧೋನಿ ಅವರು ಆಡಲಿರುವ ಐಪಿಎಲ್ ನ ಕೊನೆಯ ಸೀಸನ್ ಇದು ಎಂದು ಹೇಳಲಾಗಿದೆ.
ಧೋನಿ ಅವರು ಸಿ.ಎಸ್.ಕೆ ತಂಡಕ್ಕೆ ಅತ್ಯದ್ಭುತ ನಾಯಕ ಆಗಿದ್ದವರು. ಇವರ ಕ್ಯಾಪ್ಟನ್ಸಿಯಲ್ಲಿ ಸಿ.ಎಸ್.ಕೆ ತಂಡ ನಾಲ್ಕು ಸಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಧೋನಿ ಅವರಂತಹ ಕ್ಯಾಪ್ಟನ್ ಇಂದಲೇ ಇದು ಸಾಧ್ಯವಾದದ್ದು ಎನ್ನುವ ಮಾತಿದೆ. ಧೋನಿ ಅವರು ಈ ವರ್ಷದ ಐಪಿಎಲ್ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್ ಇಂದ ನಿವೃತ್ತಿ ಪಡೆಯುವುದು ಖಚಿತ ಎಂದು ಸಿ.ಎಸ್.ಕೆ ಮೂಲಗಳಿಂದಲೇ ಮಾಹಿತಿ ಸಿಕ್ಕಿದೆ. ಇದರಿಂದ ಅಭಿಮಾನಿಗಳಿಗೆ ಬಹಳ ಬೇಸರ ಆಗಿದೆ. ಇದನ್ನು ಓದಿ..Cricket News: ಏನು ಪ್ರಯೋಜನಕ್ಕೆ ಬಾರದೆ ಇದ್ದರೂ ಸ್ಥಾನ ಪಡೆಯುತ್ತಿದ್ದ ರಾಹುಲ್ ಗೆ ಕೊನೆಗೂ ಬ್ರೇಕ್: ಷಾಕಿಂಗ್ ಹೇಳಿಕೆ ಕೊಟ್ಟ ಬಿಸಿಸಿಐ ಅಧಿಕಾರಿ. ಹೇಳಿದ್ದೇನು ಗೊತ್ತೇ?
ಧೋನಿ ಅವರಿಗೆ ತಾವು ಸಿ.ಎಸ್.ಕೆ ಪರವಾಗಿ ಆಡುವ ಕೊನೆಯ ಪಂದ್ಯ ತವರಿನಲ್ಲಿ, ಚೆನ್ನೈನಲ್ಲಿ ಆಡಬೇಕು ಎನ್ನುವ ಆಸೆ ಇತ್ತು, ಈಗ ಅದು ನೆರವೇರಲಿದೆ. ಈ ವರ್ಷದ ಐಪಿಎಲ್ ಸೀಸನ್ ಭಾರತದಲ್ಲೇ ನಡೆಯಲಿದ್ದು, ಈ ಮೂಲಕ ಧೋನಿ ಅವರು ಚೆನ್ನೈನಲ್ಲೇ ಆಡಲಿದ್ದಾರೆ. ಇನ್ನು ಧೋನಿ ಅವರ ಬಳಿಕ ಬೆನ್ ಸ್ಟೋಕ್ಸ್ ಅವರು ಸಿ.ಎಸ್.ಕೆ ತಂಡದ ಕ್ಯಾಪ್ಟನ್ ಆಗಬಹುದು ಎಂದು ಹೇಳಲಾಗುತ್ತಿದ್ದು, ಇದರ ಬಗ್ಗೆ ಸ್ವತಃ ಧೋನಿ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಧೋನಿ ಅವರ ಬಗ್ಗೆ ಸಿಕ್ಕಿರುವ ಈ ಸುದ್ದಿಯಿಂದ ತೀವ್ರವಾದ ನಿರಾಸೆಗೆ ಒಳಗಾಗಿದ್ದಾರೆ ಸಿ.ಎಸ್.ಕೆ ಅಭಿಮಾನಿಗಳು. ಇದನ್ನು ಓದಿ..Cricket News: ರಾಹುಲ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಕನ್ನಡಿಗ ವೆಂಕಟೇಶ್ ಪ್ರಸಾದ್. ಮತ್ತೊಬ್ಬ ಕನ್ನಡಿಗನ ಬಗ್ಗೆ ಹೇಳಿದ್ದೇನು ಗೊತ್ತೇ??
Comments are closed.