Kannada News: ನಾನು ಮಾಡಿದ ಅದೊಂದು ತಪ್ಪಿನಿಂದ 1000 ಸಾವಿರ ಕೋಟಿ ಕಳೆದುಕೊಂಡೇ ಎಂದ ಜಗಪತಿ ಬಾಬು. ಅಂತಹ ಕಾಸ್ಟ್ಲಿ ತಪ್ಪು ಏನು ಗೊತ್ತೇ?
Kannada News: ತೆಲುಗಿನ ಸ್ಟಾರ್ ನಟ ಜಗಪತಿ ಬಾಬು ಅವರ ಬಗ್ಗೆ ಕನ್ನಡ ಚಿತ್ರರಂಗದಲ್ಲು ಎಲ್ಲರಿಗೂ ಗೊತ್ತಿದೆ, ಏಕೆಂದರೆ ಇವರು ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಿಬಾಸ್ ದರ್ಶನ್ ಅವರ ರಾಬರ್ಟ್ ಸಿನಿಮಾದಲ್ಲಿ ವಿಲ್ಲನ್ ಪಾತ್ರ, ಜಾಗ್ವಾರ್ ಸಿನಿಮಾದಲ್ಲಿ, ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಗಪತಿ ಬಾಬು ಅವರಿಗೆ ಇದು ಸೆಕೆಂಡ್ ಇನ್ನಿಂಗ್ಸ್, 90ರ ದಶಕದಲ್ಲಿ ಫ್ಯಾಮಿಲಿ ಹೀರೋ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದ ಇವರು ಸೆಕೆಂಡ್ ಇನ್ನಿಂಗ್ಸ್ ನಲ್ಲಿ ವಿಲ್ಲನ್ ಆಗಿ, ತಂದೆ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ..
ತೆಲುಗು, ಕನ್ನಡ, ತಮಿಳು ಭಾಷೆಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜಗಪತಿ ಬಾಬು ಅವರು ಈಗ ತಮ್ಮದೇ ಆದ ಛಾಪು ಮೂಡಿಸಿದ್ದಾರೆ, ಇವರಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ. ಜಗಪತಿ ಬಾಬು ಅವರು ಸಿನಿಮಾ ಬ್ಯಾಗ್ರೌಂಡ್ ಇಂದ ಬಂದವರು, ಅವರ ತಂದೆ ನಿರ್ದೇಶಕ ಮತ್ತು ನಿರ್ಮಾಪಕನಾಗಿ ಗುರುತಿಸಿಕೊಂಡವರು, ತಾವು ಸಂಪಾದನೆ ಮಾಡಿದ ಹಣದಿಂದ ಜಗಪತಿ ಆರ್ಟ್ಸ್ ಬ್ಯಾನರ್ ಶುರು ಮಾಡಿ, ಅದರ ಮೂಲಕ ಹಲವು ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಜಗಪತಿ ಬಾಬು ಅವರು ಕೂಡ ಇದೇ ಬ್ಯಾನರ್ ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದರು.. ಇದನ್ನು ಓದಿ..Kannada News: ಯುವ ನಟಿಯೇ ಬೇಕೇ ಬೇಕು ಎಂದು ಹಿಂದೆ ಬಿದ್ದ ನಿರ್ಮಾಪಕ: ಹೊಸ ನಟಿಯಾದರು ಕೋಟಿ ಖರ್ಚು ಮಾಡಲು ಸಿದ್ದವಾಗಿದ್ದು ಯಾವ ಬೆಡಗಿಗೆ ಗೊತ್ತೆ?
ಆದರೆ ಜಗಪತಿ ಬಾಬು ಅವರು ತಮ್ಮ ಆಸ್ತಿಯನ್ನು ಕಳೆದುಕೊಂಡರು, ಇದಕ್ಕೆ ಕಾರಣ ಏನು ಎಂದು ತಮ್ಮ ಹುಟ್ಟುಹಬ್ಬದ ವಿಶೇಷವಾಗಿ ಪಾಲ್ಗೊಂಡ ಸಂದರ್ಶನದಲ್ಲಿ ಆಸ್ತಿ ಕಳೆದುಕೊಳ್ಳುವುದಕ್ಕೆ ಕಾರಣ ಏನು ಎಂದು ತಿಳಿಸಿದ್ದಾರೆ, “ಒಂದು ಕಾಲದಲ್ಲಿ ನನ್ನ ಆಸ್ತಿ ಮೌಲ್ಯ 1000 ಕೋಟಿವರೆಗು ಇತ್ತು, ಆದರೆ ಎಲ್ಲವನ್ನು ಕಳೆದುಕೊಂಡೆ, ನಾನು ಕೆಸಿನೋ ಆಡಿ ಕಳೆದುಕೊಂಡಿಲ್ಲ, ಅದನ್ನು ಮನರಂಜನೆಗಾಗಿ ಆಡುತ್ತೇನೆ. ಪೋಕರ್ ಆಡಿ ಕಳೆದುಕೊಂಡಿಲ್ಲ, ಅದರ ಅಭ್ಯಾಸವು ನನಗಿಲ್ಲ. ನಾನು ಹಣ ಕಳೆದುಕೊಂಡಿದ್ದು, ನನಗೆ ಅದನ್ನು ಸರಿಯಾಗಿ ಇಟ್ಟುಕೊಳ್ಳಲು ಬರಲಿಲ್ಲ, ಸುರಕ್ಷಿತವಾಗಿ ಆಸ್ತಿಯನ್ನು ಕಾಪಾಡಿಕೊಳ್ಳಲು ಬರದ ಕಾರಣಕ್ಕೆ ಆಸ್ತಿಯನ್ನು ಕಳೆದುಕೊಂಡೆ..”ಎಂದು ಹೇಳಿದ್ದಾರೆ ನಟ ಜಗಪತಿ ಬಾಬು. ಇದನ್ನು ಓದಿ..Kannada News: ಟ್ಯಾಟೂ ಹಾಕಿಸಿಕೊಂಡ ದರ್ಶನ್ ವಿರುದ್ಧ ಕೊಂಕು ತೆಗೆದ ಅಪ್ಪು ಅಭಿಮಾನಿಗಳು. ಎಲ್ಲವೂ ತಣ್ಣಗಾಗಿದ್ದಾಗ, ದರ್ಶನ್ ವಿರುದ್ದ ಮತ್ತೊಂದು ಆರೋಪ. ಏನು ಗೊತ್ತೆ?
Comments are closed.