Neer Dose Karnataka
Take a fresh look at your lifestyle.

Kannada News: ದರ್ಶನ್ ವಿರುದ್ಧ ತೊಡೆತಟ್ಟುತಿರುವ ಅಪ್ಪು ಫ್ಯಾನ್ಸ್ ಸೇರಿಂದಂತೆ ಡಿ ಬಾಸ್ ಫ್ಯಾನ್ಸ್ ಗೆ ಕೂಡ ರಾಘಣ್ಣ ನೇರವಾಗಿ ಹೇಳಿದ್ದೇನು ಗೊತ್ತೇ??

761

Kannada News: ಚಂದನವನದಲ್ಲಿ ಈಗ ನಡೆಯುತ್ತಿರುವ ಈ ಫ್ಯಾನ್ ವಾರ್ ಎನ್ನುವ ವಿಷಯ ದೊಡ್ಡದಾಗುತ್ತಲೇ ಇದೆ ಹೊರತು ಕಡಿಕೆ ಅಂತು ಆಗುತ್ತಿಲ್ಲ. ಹೊರ ಪ್ರಪಂಚದಲ್ಲಿ ಎಲ್ಲಾ ನಟ ನಟಿಯರು ಸ್ನೇಹಿತರಾಗಿ ಚೆನ್ನಾಗಿದ್ದಾರೆ, ಆದರೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತಮ್ಮ ಮೆಚ್ಚಿನ ಕಲಾವಿದೆ ಹೆಚ್ಚು ಎಂದು ಜಗಳ ಆಡಿಕೊಳ್ಳುತ್ತಿದ್ದಾರೆ. ಇದರಿಂದ ನಟ ನಟಿಯರು ತೀವ್ರವಾಗಿ ಟ್ರೋಲ್ ಆಗುತ್ತಿದ್ದಾರೆ. ಬರೆಯಲು ಅಥವಾ ಹೇಳಲು ಆಗದಂತಹ ಪದಗಳನ್ನು ಬಳಸಿ ಕಲಾವಿದರನ್ನು ಟ್ರೋಲ್ ಮಾಡಲಾಗುತ್ತಿದೆ. ಕಲಾವಿದರನ್ನು ಮಾತ್ರವಲ್ಲದೆ ಅವರ ಮನೆಯವರನ್ನು ಕೂಡ ಟ್ರೋಲ್ ಮಾಡಲಾಗುತ್ತಿದೆ.

ಕಲಾವಿದರ ಮನೆಯ ಹೆಣ್ಣುಮಕ್ಕಳನ್ನು ಸಹ ಎಳೆದು ತಂದು, ಅವರ ಫೋಟೋಗಳನ್ನು ಕೆಟ್ಟದಾಗಿ ಎಡಿಟ್ ಮಾಡಿ, ಕ್ಯಾಪ್ಶನ್ ಗಳನ್ನು ಬರೆಯಲಾಗುತ್ತಿದೆ. ಸಿನಿಮಾ ಕಲೆಕ್ಷನ್, ಜನಪ್ರಿಯತೆ, ರೆಕಾರ್ಡ್ ಬ್ರೇಕ್ ಮಾಡುವುದು ಇಂತಹ ವಿಚಾರಗಳಲ್ಲಿ ಅಭಿಮಾಮಿಗಳು ನಡೆದುಕೊಳ್ಳುತ್ತಿರುವ ರೀತಿ ಅಸಭ್ಯವಾಗಿದೆ. ಈಗಾಗಲೇ ಬಹಳಷ್ಟು ಕಲಾವಿದರು ಈ ಫ್ಯಾನ್ ವಾರ್ ನಿಲ್ಲಿಸಬೇಕು ಎಂದು ಸಂದೇಶ ನೀಡಿದ್ದರು ಸಹ ಅದು ಕಡಿಮೆ ಆಗುತ್ತಿಲ್ಲ. ಈಗ ಅಪ್ಪು ಅವರ ಮತ್ತು ದರ್ಶನ್ ಅವರ ಅಭಿಮಾನಿಗಳ ವಿಚಾರದಲ್ಲಿ ಈ ಫ್ಯಾನ್ ವಾರ್ ಗಳು ಹೆಚ್ಚಾಗಿದೆ.

ಅಪ್ಪು ಅವರು ಇದ್ದಾಗ ಕೂಡ, ಈ ಫ್ಯಾನ್ ವಾರ್ ಇದೆಲ್ಲವನ್ನು ಬಿಟ್ಟು ಎಲ್ಲಾ ಕಲಾವಿದರನ್ನು ಒಂದೇ ಥರ ಕಾಣಬೇಕು, ಎಲ್ಲರಿಗೂ ಪ್ರೀತಿ ನೀಡಬೇಕು, ಕನ್ನಡ ಚಿತ್ರರಂಗವನ್ನ ಬೆಳೆಸಬೇಕು ಎಂದು ಹೇಳಿದ್ದರು. ಇದೀಗ ನಿನ್ನೆ ಪ್ರೇಮಿಗಳ ದಿನದಂದು ರಾಘಣ್ಣ ಅವರು ಕೂಡ ಇದೇ ಸಂದೇಶ ನೀಡಿದ್ದಾರೆ. ಅಪ್ಪು ಅವರ ಫೋಟೋ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ “ದ್ವೇಷ ಅಸೂಯೆ ಬಿಟ್ಟು ಎಲ್ಲರನ್ನು ಪರಿಶುದ್ಧ ಮನಸ್ಸಿನಿಂದ ಪ್ರೀತಿಸುವ ಪುನೀತರಾಗೋಣ..” ಎಂದು ಬರೆದು, ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ವಿಶ್ ಮಾಡಿ ಅಭಿಮಾನಿಗಳಿಗೆ ಮುಖ್ಯವಾದ ಸಂದೇಶ ನೀಡಿದ್ದಾರೆ. ರಾಘಣ್ಣ ಅವರ ಈ ಮಾತಿಗೆ ಈಗ ಎಲ್ಲರಿಂದಾ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave A Reply

Your email address will not be published.