Kannada News: ದರ್ಶನ್ ರವರ 56 ನೇ ಚಿತ್ರ ಕಾಟೇರ ಸಿನೆಮಾದ ಕಥೆ ಕೇಳಿದರೆ, ಇಂದೇ ಸಿನಿಮಾ ನೋಡಬೇಕು ಅಂತೀರಾ. ಪಕ್ಕ ಎಲ್ಲ ದಾಖಲೆಗಳು ಉಡೀಸ್. ಕಥೆ ಏನು ಗೊತ್ತೇ?
Kannada News: ಇಂದು ಡಿಬಾಸ್ ದರ್ಶನ್ (Darshan) ಅವರ ಹುಟ್ಟುಹಬ್ಬ, ಈ ಸಮಯದಲ್ಲಿ ಕ್ರಾಂತಿ (Kranti) ಸಿನಿಮಾ ಸೂಪರ್ ಹಿಟ್ ಆಗಿರುವ ಸಂತೋಷ ಒಂದು ಕಡೆಯಾದರೆ, ಡಿ56 ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ರಿವೀಲ್ ಆಗಿರುವುದು ಅಭಿಮಾನಿಗಳಿಗೆ ಹೊಸ ಕಿಕ್ ನೀಡಿದೆ. ಡಿ56 ಸಿನಿಮಾವನ್ನು ತರುಣ್ ಸುಧೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ (Rockline Venkatesh)cಅವರು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ದರ್ಶನ್ ಮತ್ತು ತರುಣ್ (Tarun Sudhir) ಕಾಂಬಿನೇಷನ್ ನಲ್ಲಿ ಮೂಡಿಬಂದ ರಾಬರ್ಟ್ (Roberrt) ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು ಎನ್ನುವುದು ಗೊತ್ತಿರುವ ವಿಚಾರ. ಈ ಹಿಟ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾದ ಕಥೆ ಹೇಗಿದೆ ಗೊತ್ತಾ?
ನಟ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡುವುದಕ್ಕೆ ಡಿ56 ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಅನ್ನು ಇಂದು ಮಧ್ಯರಾತ್ರಿ 12ಗಂಟೆಗೆ ಸರಿಯಾಗಿ ಬಿಡುಗಡೆ ಮಾಡಲಾಯಿತು. ಡಿ56 ಸಿನಿಮಾಗೆ ಕಾಟೇರ (Katera) ಎಂದು ಹೆಸರಿಡಲಾಗಿದೆ, ಈ ಮೊದಲೇ ಟೈಟಲ್ ಅನ್ನು ಕೆಲವರು ಗೆಸ್ ಮಾಡಿದ್ದರು, ಈಗ ಅದೇ ಟೈಟಲ್ ಫಿಕ್ಸ್ ಆಗಿದೆ. ಕಾಟೇರ ಸಿನಿಮಾಗೆ ವಿ.ಹರಿಕೃಷ್ಣ (V Harikrishna) ಅವರ ಮ್ಯೂಸಿಕ್ ಇರಲಿದೆ. ಸುಧಾಕರ್ ಅವರ ಸಿನಿಮಾಟೋಗ್ರಫಿ ಇರಲಿದೆ. ಈ ಸಿನಿಮಾದ ನಾಯಕಿ ರಾಧನಾ ರಾಮ್ (Radhana Ram). ಕಾಟೇರ ಸಿನಿಮಾ 70ರ ದಶಕದಲ್ಲಿ ನಡೆಯುವ ಕಥೆ ಎಂದು ಗೊತ್ತಾಗಿದೆ. ಫಸ್ಟ್ ಲುಕ್ ನಲ್ಲಿ ಟೀಸರ್ ನಲ್ಲಿ ದರ್ಶನ್ ಅವರು ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ದರ್ಶನ್ ಅವರನ್ನು ಈ ಹಿಂದೆ ತೋರಿಸದಂತಹ ಪಾತ್ರ ಇದು ಎಂದು ಹೇಳಲಾಗುತ್ತಿದೆ. “ಪ್ರತಿ ಮಚ್ಚು ಎರಡು ದಪ ಕೆಂಪಾಗ್ತೈತೆ, ಬೆಂಕಿಲಿ ಬೆಂದಾಗ ರಕ್ತದಲ್ಲಿ ನೆಂದಾಗ” ಎಂದು ದರ್ಶನ್ ಅವರು ಹೇಳಿರುವ ಡೈಲಾಗ್ ಟ್ರೆಂಡ್ ಸೃಷ್ಟಿಸಿದೆ. ಟೀಸರ್ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಕಾಟೇರ ಸಿನಿಮಾ 1974ರಲ್ಲಿ ನಡೆಯುವ ಕಥೆ ಆಗಿದ್ದು, ಕಥೆ ಹೇಗಿದೆ ಎಂದು ನೋಡುವುದಾದರೆ, ತನ್ನ ಊರಿಗೆ ಮತ್ತು ತನ್ನ ಜನರಿಗೆ ಏನೇ ತೊಂದರೆ ಬಂದರು ಯಾವುದಕ್ಕೂ ಹೆದರದೆ ಜನರ ಸಮಸ್ಯೆ ಸರಿ ಮಾಡಿ, ಹೋರಾಟದ ಮೂಲಕ ದುಷ್ಟರನ್ನು ಸೋಲಿಸಿ, ಜನರು ಸುರಕಕ್ಷಿತವಾಗಿ ನೋಡಿಕೊಳ್ಳುವ ನಾಯಕನ ಪಾತ್ರದಲ್ಲಿ ಡಿಬಾಸ್ ಮಿಂಚಲಿದ್ದಾರೆ. ಇದೀಗ ಈ ಕಥೆ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದು, ಕಾಟೇರ ಸಿನಿಮಾ ಈ ವರ್ಷದ ಅಂತ್ಯಕ್ಕೆ ತೆರೆಕಾಣಬಹುದು ಎನ್ನಲಾಗುತ್ತಿದೆ.
Comments are closed.