Kannada News: ಅಪ್ಪು ಯಶ್ ಮಾಡಲ್ಲ ಎಂದ ಸಿನಿಮಾ ಕಥೆಯನ್ನು ಒಪ್ಪಿಕೊಂಡ ಮತ್ತೊಬ್ಬ ನಟ; ಯಾರು ಗೊತ್ತೇ?? ಸಿನಿಮಾ ಕಥೆ ಏನು ಗೊತ್ತೇ??
Kannada News: ಚಿತ್ರರಂಗದಲ್ಲಿ ಒಬ್ಬ ನಿರ್ದೇಶಕ ತಯಾರಿಸಿದ ಎಲ್ಲಾ ಕಥೆಗಳು ಸಿನಿಮಾ ಆಗುವುದಿಲ್ಲ. ಕೆಲವೊಮ್ಮೆ ಸಿನಿಮಾಗೆ ಸರಿಯಾದ ನಿರ್ಮಾಪಕ ಸಿಗದೆ ಸಿನಿಮಾ ಸೆಟ್ಟೇರುವುದೇ ಇಲ್ಲ, ಇನ್ನು ಕೆಲವೊಮ್ಮೆ ಕಲಾವಿದರ ಕಾರಣ, ಇನ್ನು ಕೆಲವು ಸಾರಿ ಬೇರೆ ಬೇರೆ ಕಾರಣಗಳು ಕೂಡ ಇರುತ್ತದೆ. ಹಲವು ಕಾರಣಗಳಿಂದ ಒಂದು ಸಿನಿಮಾ ಸೆಟ್ಟೇರದೆ ಇರಬಹುದು, ಅಥವಾ ಹಲವು ವರ್ಷಗಳ ನಂತರ ಅದೇ ಸಿನಿಮಾ ಶುರುವಾಗಬಹುದು. ಇಂಥದ್ದೇ ಒಂದು ಘಟನೆ ಇರುವ ಸಿನಿಮಾ ಸಪ್ತಸಾಗರದಾಚೆ ಎಲ್ಲೋ.
ಇದು ರಕ್ಷಿತ್ ಶೆಟ್ಟಿ ಅವರು ನಾಯಕನಾಗಿ ನಟಿಸಿ, ರುಕ್ಮಿಣಿ ವಸಂತ್ ಅವರು ನಾಯಕಿಯಾಗಿದ್ದು, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ನಿರ್ದೇಶಕ ಹೇಮಂತ್ ಕುಮಾರ್ ಅವರು ನಿರ್ದೇಶನ ಮಾಡಿರುವ ಸಿನಿಮಾ. ಈ ಸಿನಿಮಾ ಇನ್ನೇನು ಮುಗಿಯುವ ಹಂತದಲ್ಲಿದೆ. ಮೊದಲಿಗೆ ಈ ಸಿನಿಮಾ ರಕ್ಷಿತ್ ಶೆಟ್ಟಿ ಅವರ ಪಾಲಿಗೆ ಹೋಗಿರಲಿಲ್ಲ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕಥೆಯನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಮತ್ತು ಯಶ್ ಅವರಿಗೆ ಹೇಳಲಾಗಿತ್ತು, ಆದರೆ ಅವರಿಬ್ಬರು ಒಪ್ಪದ ಕಾರಣ ಈ ಸಿನಿಮಾ ನಿಂತಿತ್ತು. ಈಗ ಪ್ಯಾನ್ ಇಂಡಿಯಾ ಕಾಲದಲ್ಲಿ ಸ್ಟಾರ್ ನಟರ ಸಿನಿಮಾಗಳಿಗೆ ಬೇಕಿರುವ ಅಂಶ ಈ ಸಿನಿಮಾದಲ್ಲಿ ಇಲ್ಲದೆ ಒಪ್ಪಿರಲಿಲ್ಲವೇನೋ ಎಂದು ಹಲವರು ಅಂದುಕೊಂಡಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ಗಟ್ಟಿ ನಿರ್ಧಾರ ಮಾಡಿ ಬಿಟ್ಟರೆ ಸಮಂತಾ; ಮದುವೆ ಬೇಡ ಎನ್ನುತ್ತಿದ್ದ ಸಮಂತಾಗೆ ಏನಾಗಿದೆ ಗೊತ್ತೇ??
ಆದರೆ ಅಸಲಿ ವಿಚಾರ ಬೇರೆಯೇ ಇದೆ, ಇದನ್ನು ಖುದ್ದು ನಿರ್ದೇಶಕ ಹೇಮಂತ್ ಕುಮಾರ್ ಅವರೇ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ, ಅಪ್ಪು ಅವರು ಮತ್ತು ಯಶ್ ಅವರು ಒಪ್ಪದೇ ಇರಲು ಕಾರಣ, ಆಗ ಹೇಮಂತ್ ಅವರ ಬಳಿ ಕಥೆ ಇತ್ತು ಆದರೆ ನಿರ್ಮಾಪಕರು ಇರಲಿಲ್ಲ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗಿಂತ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಕಥೆಯನ್ನು ರೆಡಿ ಮಾಡಿದ್ದರು ಹೇಮಂತ್. ಆದರೆ ಸರಿಯಾದ ನಿರ್ಮಾಪಕರು ಇಲ್ಲದೆ, ಪುನೀತ್ ರಾಜ್ ಕುಮಾರ್ ಅವರು ಯಶ್ ಅವರು ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಈ ಸಿನಿಮಾ ರಕ್ಷಿತ್ ಶೆಟ್ಟಿ ಅವರಿಗೆ ಸಿಕ್ಕಿ, ತಯಾರಾಗಿದೆ. ಇದನ್ನು ಓದಿ..Kannada News: ದರ್ಶನ್ ರವರ 56 ನೇ ಚಿತ್ರ ಕಾಟೇರ ಸಿನೆಮಾದ ಕಥೆ ಕೇಳಿದರೆ, ಇಂದೇ ಸಿನಿಮಾ ನೋಡಬೇಕು ಅಂತೀರಾ. ಪಕ್ಕ ಎಲ್ಲ ದಾಖಲೆಗಳು ಉಡೀಸ್. ಕಥೆ ಏನು ಗೊತ್ತೇ?
Comments are closed.