Neer Dose Karnataka
Take a fresh look at your lifestyle.

Kannada News: ಮತ್ತೆ ಮುನ್ನೆಲೆಗೆ ಬಂದ ಪ್ರಥಮ್, ಈ ಬಾರಿ ಮತ್ತೊಮ್ಮೆ ದರ್ಶನ್ ರವರಿಗೆ ಹೇಳಿದ್ದೇನು ಗೊತ್ತೇ?? ದರ್ಶನ್ ಫ್ಯಾನ್ಸ್ ಅಂತೂ ಫುಲ್ ಗರಂ ಆಗಿದ್ದು ಯಾಕೆ ಗೊತ್ತೇ??

Kannada News: ನಮ್ಮ ಸ್ಯಾಂಡಲ್ ವುಡ್ ನಲ್ಲಿ ಮಾಸ್ ಹೀರೊ ಎಂಬ ಪಟ್ಟವನ್ನು ಇಬ್ಬರು ನಟರು ಕಸಿದುಕೊಂಡಿದ್ದಾರೆ.ಆ ನಟರು ಯಾರೆಂಬುದು ಹೊಸದಾಗಿ ಹೇಳಬೇಕಾಗಿಲ್ಲ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡಿಗರ ಮಾಸ್ ಹೀರೋ ಎಂದರೆ ಅದು ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು.ನಮ್ಮ ಅಂಬರೀಷ್ ಅವರ ಅಗಲಿಕೆಯ ನಂತರ ಮಾಸ್ ಸಿನಿಮಾ ಗಳ ಜವಾಬ್ದಾರಿ ಹೊತ್ತಿರುವುದು ನಮ್ಮ ಡಿ ಬಾಸ್ ಎಂದರೆ ತಪ್ಪಾಗಲಾರದು.ನೆನ್ನೆಯಷ್ಟೆ ಡಿ ಬಾಸ್ ತಮ್ಮ 46ನೇ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಕಲಾವಿದರ ಹುಟ್ಟು ಹಬ್ಬದ ಪೈಕಿ ಬಹಳ ಅರ್ಥ ಪೂರ್ಣ ಹುಟ್ಟಿದ ದಿನವನ್ನು ಆಚರಿಸುವ ನಟ ಎಂದರೆ ಅದು ದರ್ಶನ್.ಇವರ ಹುಟ್ಟಿದ ದಿನ ಅದೆಷ್ಟೋ ಅನಾಥಾಶ್ರಮ ಹಾಗೂ ವೃದ್ಧಾಶ್ರಮ ದವಸ ಧಾನ್ಯಗಳಿಂದ ತುಂಬುತ್ತದೆ ಎಂದರೆ ತಪ್ಪಾಗಲಾರದು.ಇನ್ನೂ ಇವರ ಅಭಿಮಾನಿಗಳು ಕೂಡ ವಿಜೃಂಭಣೆಯನ್ನೂ ಬಿಟ್ಟು ಮಾನವೀಯತೆಗೆ ಹೆಚ್ಚು ಪ್ರಾಮುಕ್ಯತೆ ನೀಡುತ್ತಾರೆ.ಅದ್ರಲ್ಲೂ ಕರೋನ ಕಾರಣದಿಂದ ಸತತ ಎರಡು ವರ್ಷಗಳಿಂದ ಇವರ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಾಗಲಿಲ್ಲ.ಹಾಗಾಗಿ ಈ ಬಾರಿ ಯಾವ ಷರತ್ತು ಹಾಗೂ ತೊಂದರೆ ಇಲ್ಲದೆ ಡಿ ಬಾಸ್ ಅಭಿಮಾನಿಗಳು ಮನಸೋ ಇಚ್ಚೆ ಆಚರಿಸಿದ್ದಾರೆ ಎಂದರೆ ತಪ್ಪಾಗಲಾರದು.ಹುಟ್ಟು ಹಬ್ಬ ದರ್ಶನ್ ಅವರದ್ದು ಆದರೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವುದು ಮಾತ್ರ ಒಳ್ಳೆ ಹುಡುಗ ಪ್ರತಮ್.ಇದಕ್ಕೆ ಕಾರಣ ಏನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ. ಇದನ್ನು ಓದಿ..Pooja Hegde News: ಆತನಿಂದಾಗಿ ಪೂಜಾ ಹೆಗ್ಡೆ ರವರು ಅದೆಂತಹ ಪರಿಸ್ಥಿಗೆ ಬಂದಿದ್ದಾರೆ ಗೊತ್ತೇ?? ಕನ್ನಡತಿಗೆ ಇವೆಲ್ಲ ಬೇಕಿತ್ತಾ??

ಡಿ ಬಾಸ್ ಹುಟ್ಟು ಹಬ್ಬಕ್ಕೆ ವಿಜೃಂಭಣೆ ದೃಶ್ಯಗಳು ಸಾಕ್ಷಿ ಅಲ್ಲದೆ.ಸಾಕಷ್ಟು ಅಭಿಮಾನಿಗಳು ಹಾಗೂ ಸೇಲಬ್ರೆಟಿ ಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿಶ್ ಮಾಡಿದ್ದರು.ಹಾಗೆಯೇ ಪ್ರಥಮ್ ಕೂಡ ವಿಶ್ ಮಾಡಿ ಅದರೊಟ್ಟಿಗೆ ಎರಡು ಸಲಹೆಗಳನ್ನು ಕೂಡ ಬರೆದುಕೊಂಡಿದ್ದಾರೆ.ಅವರ ಮಾತು ಏನಾಗಿತ್ತು ಎಂದರೆ ಮೊದಲನೆಯದಾಗಿ ನಿಮಗೆ ದೊಡ್ಡ ತಾರ ಬಳಗ ಹಾಗೂ ಅಭಿಮಾನಿಗಳ ಬಳಗ ಇದೆ ಹಾಗಾಗಿ ನೀವು ಆರಾಮಾಗಿ ಇರಿ ಇನ್ನೂ ಎರಡನೆಯದಾಗಿ ನಿಮ್ಮ ಹಾಗೂ ಮಾದ್ಯಮ ಮಿತ್ರರ ಮನಸ್ತಾಪ ಆದಷ್ಟು ಬೇಗ ಮುಗಿಯಲಿ. ಈ ವಿಚಾರದ ಕುರಿತು ಗಂಭೀರವಾಗಿ ಯೋಚಿಸಿ ಎಂದು ಬರೆದುಕೊಂಡಿದ್ದಾರೆ.ಇವರ ಟ್ವಿಟ್ ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ.ಇನ್ನೂ ಡಿ ಬಾಸ್ ಅಭಿಮಾನಿಗಳು ಇವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಆದರೆ ಈ ಟ್ವಿಟ್ ಬಗ್ಗೆ ಡಿ ಬಾಸ್ ಯಾವ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ಓದಿ..Kannada News: ಮದುವೆಗೂ ಮುನ್ನವೇ ಎಲ್ಲವೂ ಮುಗಿಸಿ, ಪ್ರೇಗ್ನೆಂಟ್ ಆದ ಸೆಲೆಬ್ರೆಟಿಗಳು ಯಾರ್ಯಾರು ಗೊತ್ತೇ?? ಅದ್ಯಾಕೆ ಗೊತ್ತೇ??

Comments are closed.