Kannada News: ತಾರಕರತ್ನ ರವರ ಅಂತ್ಯಕ್ರಿಯೆ ಯಾವಾಗ ಗೊತ್ತೇ?? ಎಷ್ಟು ಕಾಯಬೇಕು ಗೊತ್ತೇ?? ಅಲ್ಲಿಯವರೆಗೂ ಏನಾಗುತ್ತದೆ ಗೊತ್ತೇ?
Kannada News: ತೆಲುಗು ಚಿತ್ರರಂಗದ ನಂದಮೂರಿ ಕುಟುಂಬದ ಖ್ಯಾತ ನಟ ನಂದಮೂರಿ ತಾರಕರತ್ನ ಅವರು ಇಹಲೋಕ ತ್ಯಜಿಸಿದ್ದು ಚಿತ್ರರಂಗಕ್ಕೆ ಬಹಳ ನೋವು ತಂದಿದೆ. ನಂದಮೂರಿ ಕುಟುಂಬದ ಕುಡಿ ಆದ ಇವರು ಒಕಟೋ ನಂಬರ್ ಕುರ್ರಾಡು, ಯುವರತ್ನ, ತಾರಕ್ ಇಂಥ ಹಲವು ಸಿನಿಮಾಗಳಲ್ಲಿ ನಟಿಸಿ, ಒಳ್ಳೆಯ ನಟನಾಗಿ ಗುರುತಿಸಿಕೊಂಡಿದ್ದವರು. ಬ್ರೇಕ್ ಪಡೆದು, ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ ನಂತರ 9ಅವರ್ಸ್ ವೆಬ್ ಸೀರೀಸ್ ನಲ್ಲಿ ನಟಿಸಿದ್ದರು. ಇವರಿಗೆ ದಿಢೀರ್ ಮರಣದಿಂದ ಅಭಿಮಾನಿಗಳಿಗೂ ಬಹಳ ನೋವಾಗಿದೆ. ಆಸ್ಪತ್ರೆಯಲ್ಲಿದ್ದ ಇವರು 23 ದಿನಗಳು ಚಿಕಿತ್ಸೆ ಪಡೆದು, ಅದು ಫಲ ನೀಡದೆ ಇಹಲೋಕ ತ್ಯಜಿಸಿದ್ದಾರೆ. ಈಗ ತಾರಕರತ್ನ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಹೈದರಾಬಾದ್ ಗೆ ತರಲಾಗಿದೆ.
ನಂದಮೂರಿ ತಾರಕರತ್ನ ಅವರು ಬಹಳಷ್ಟು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಇದ್ದರು. ಇತ್ತೀಚೆಗಷ್ಟೇ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದ ಇವರು ರಾಜಕೀಯದಲ್ಲೂ ನಿರತರಾಗಿದ್ದರು. ತೆಲುಗು ದೇಶಂ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಇತ್ತೀಚೆಗೆ ನಡೆದ ಲೋಕೇಶ್ ಯುವಗಲಂ ಅವರ ಪಾದಯಾತ್ರೆಯಲ್ಲಿ ಸಹ ಭಾಗವಹಿಸಿ, ಲೋಕೇಶ್ ಅವರಿಗೆ ಸಪೋರ್ಟ್ ಆಗಿ ನಿಂತಿದ್ದರು. ಈ ಪಾದಯಾತ್ರೆ ಸಮಯದಲ್ಲೇ ತಾರಕರತ್ನ ಅವರು ಅಸ್ವಸ್ಥರಾಗಿ 23 ದಿನಗಳ ಕಾಲ ಚಿಕಿತ್ಸೆ ಪಡೆದರು. 23 ದಿನಗಳು ಇವರು ಕೋಮಾದಲ್ಲಿ ಇದ್ದಾಗ ವಿದೇಶದಿಂದ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದನ್ನು ಓದಿ..Kannada News: ದಿಡೀರ್ ಎಂದು ಮೈ ತುಂಬಿಕೊಂಡು ದೊಡ್ಡವಳು ಆಗಲು, ಇಂಜೆಕ್ಷನ್ ಬಳಸಿದ್ದರೇ ಅಪ್ಪು ಜೊತೆ ನಟಿಸಿದ್ದ ನಟಿ: ತಾಯಿಯೇ ಎಲ್ಲವನ್ನು ಬಿಚ್ಚಿಟ್ಟು ಹೇಳಿದ್ದೇನು ಗೊತ್ತೇ?
ವೈದ್ಯರು ಕೊಡುತ್ತಿರುವ ಚಿಕಿತ್ಸೆಗೆ ತಾರಕರತ್ನ ಅವರ ದೇಹ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದು, ಶನಿವಾರ ಸಂಜೆ ತಾರಕರತ್ನ ಅವರು ಕೊನೆಯುಸಿರೆಳೆದಿದ್ದಾರೆ, ಅವರ ನಿಧನಕ್ಕೆ ಇಡೀ ತೆಲುಗು ಚಿತ್ರರಂಗ ನೋವಿನಲ್ಲಿ ಕಣ್ಣೀರು ಹಾಕಿದೆ. ಭಾನುವಾರ ಬೆಳಗ್ಗೆ ತಾರಕರತ್ನ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಹೈದರಾಬಾದ್ ನ ಅವರ ಮನೆಗೆ ತರಲಾಗಿದೆ. ಇಡೀ ಭಾನುವಾರ ಮನೆಯಲ್ಲಿದ್ದು, ಸೋಮವಾರ ಬೆಳಗ್ಗೆ ಫಿಲಂ ಚೇಂಬರ್ ಗೆ ತರಲಾಗಲಿದ್ದು, ಅಲ್ಲಿ ಎಲ್ಲಾ ಅಭಿಮಾನಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಸಂಜೆ ಫಿಲಂ ನಗರದಲ್ಲಿರುವ ಮಹಾಪ್ರಸ್ಥಾನರಲ್ಲಿ ನಂದಮೂರಿ ತಾರಕರತ್ನ ಅವರ ಅಂತಿಮ ಸಂಸ್ಕಾರಗಳು ನೆರವೇರಲಿದೆ. ಅವರ ತಂದೆ ಅಂತಿಮ ವಿಧಿವಿಧಾನಗಳನ್ನು ಮಾಡಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.. ಇದನ್ನು ಓದಿ..Kannada News: ನಯನತಾರ ಮಾಜಿ ಲವರ್ ಗಳಿಗೆ ಕೈ ಕೊಡಲು ಕಾರಣ ಏನಂತೆ ಗೊತ್ತೆ? ಅದು ಅಸಲಿಗೆ ಇಷ್ಟವಾಗಲಿಲ್ಲವಂತೆ. ಏನಾಗಿತ್ತು ಗೊತ್ತೇ??
Comments are closed.