Kannada News: ಅಷ್ಟೇನು ಸಿನಿಮಾ ಮಾಡಿಲ್ಲ, ಆದರೂ ಕೂಡ ತಾರಕರತ್ನ ರವರನ್ನು ಕಂಡು ಜನರು ಕಣ್ಣೀರು ಹಾಕುತ್ತಿರುವುದು ಯಾಕೆ ಗೊತ್ತೇ??
Kannada News: ನಂದಮೂರಿ ಕುಟುಂಬದ ತಾರಕರತ್ನ ಅವರು ಇತ್ತೀಚೆಗೆ ಮರಣ ಹೊಂದಿದರು. ಬಹಳ ಚಿಕ್ಕ ವಯಸ್ಸಿಗೆ, 39ನೇ ವಯಸ್ಸಿಗೆ ತಾರಕರತ್ನ ಅವರು ವಿಧಿವಶರಾದರು, ಆದರೆ ಇದು ಹೊಸ ಹೊಸ ವಿಷಯ ಅಲ್ಲ, ಈ ಹಿಂದೆ ಕೂಡ ಹಲವು ಕಲಾವಿದರು ಚಿಕ್ಕ ವಯಸ್ಸಿಗೆ ವಿಧಿವಶರಾಗಿದ್ದಾರೆ. ಆದರೆ ಅವರೆಲ್ಲರಿಗಿಂತ ತಾರಕರತ್ನ ಅವರನ್ನು ನೋಡಿ ಮಾಧ್ಯಮದವರು ಮತ್ತು ಸಿನಿಪ್ರಿಯರು ಎಮೋಷನಲ್ ಆಗುತ್ತಿರುವುದು ಯಾಕೆ ಎಂದು ಎಲ್ಲರಲ್ಲೂ ಪ್ರಶ್ನೆಗಳು ಶುರುವಾಗಿದೆ. ಅದಕ್ಕೆ ಕಾರಣ ಏನು ಎಂದು ತಿಳಿಸುತ್ತೇವೆ ನೋಡಿ..
ತಾರಕರತ್ನ ಅವರ ಮೇಲೆ ಎಲ್ಲರಿಗೂ ಯಾಕೆ ಅಷ್ಟು ಒಳ್ಳೆಯ ಭಾವನೆ, ಎಮೋಷನಲ್ ಆಗುತ್ತಿದ್ದಾರೆ ಎಂದರೆ..ಸಾಮಾನ್ಯವಾಗಿ ದೊಡ್ಡ ಮನೆ ಮಕ್ಕಳು ಎಂದರೆ ಅವರಿಗೆ ಅಹಂಕಾರ ಇರುತ್ತದೆ, ನಂದಮೂರಿ ಕುಟುಂಬದಲ್ಲೂ ಇದನ್ನು ನೋಡಿದ್ದಾರೆ, ಆದರೆ ತಾರಕರತ್ನ ಅವರು ಒಂದು ಸಾರಿ ಕೂಡ ಅಹಂಕಾರ ತೋರಿಸಿಲ್ಲ. ಬಹಳ ಸರಳವಾಗಿ ಇದ್ದವರು, ಎಲ್ಲರನ್ನು ಬಹಳ ಸಂತೋಷದಿಂದ ನಗುನಗುತ್ತಾ ಬರಮಾಡಿಕೊಳ್ಳುತ್ತಿದ್ದರು. ಮನೆಯವರೆಲ್ಲ ಇವರನ್ನು ದೂರ ಇಟ್ಟರು ಕೂಡ ಒಂದು ಸಲವು ಮನೆಯವರ ಬಗ್ಗೆ ಅಸಮಾಧಾನ ಮಾಡಿಕೊಂಡವರಲ್ಲ, ಮೀಡಿಯಾ ಮುಂದೆ ಬಂದು ನನಗೆ ಈ ಥರ ಅವಮಾನ ಆಗಿದೆ ಎಂದು ಕೂಡ ಹೇಳಿದವರಲ್ಲ. ಇದನ್ನು ಓದಿ..ತೆಲುಗು ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ತಮನ್ನ. ಪ್ರೊಡ್ಯೂಸರ್ ನೇರವಾಗಿ ಗೆಸ್ಟ್ ಹೌಸ್ ಗೆ ಬಾ ಎಂದಿದ್ದು ಯಾಕೆ ಅಂತೇ ಗೊತ್ತೇ? ಅಂದು ಆಗಿದ್ದೇನು ಗೊತ್ತೇ?
ಒಬ್ಬರ ಹತ್ತಿರವೂ ನನಗೆ ಸಿನಿಮಾ ಚಾನ್ಸ್ ಕೊಡಿ ಎಂದು ಕೂಡ ಕೇಳಿಲ್ಲ ತಾರಕರತ್ನ ಅವರು. ಈಗ ಎಲ್ಲರೂ ಅವರ ಒಳ್ಳೆಯ ಗುಣಗಳ ಬಗ್ಗೆ ಮಾತನಾಡುತ್ತಾ ಇದ್ದಾರೆ, ಇದೇ ಕಾರಣಕ್ಕೆ ಬಾಲಯ್ಯ ಅವರು ಕೂಡ ತಾರಕರತ್ನ ಅವರಿಗೆ ಸಪೋರ್ಟ್ ಮಾಡುತ್ತಿದ್ದರು. ಇಷ್ಟು ಚಿಕ್ಕ ವಯಸ್ಸಿಗೆ ತಾರಕ ರತ್ನ ಅವರಿಗೆ ಹೀಗಾಗಿದ್ದು, ಎಲ್ಲರಿಗೂ ಬಹಳ ನೋವಾಗಿದೆ. ಈಗ ಎಲ್ಲರೂ ಅವರವರ ಮನೆಗೆ ಹೋಗಿದ್ದಾರೆ, ಆದರೆ ತಾರಕರತ್ನ ಅವರ ಮನೆಯಲ್ಲಿ ಈಗ ಅವರ ಹೆಂಡತಿ ಮತ್ತು ಮಕ್ಕಳು ಇಬ್ಬರೇ ಒಂಟಿಯಾಗಿದ್ದಾರೆ. ತಾರಕರತ್ನ ಅವರ ಪಾರ್ಥಿವ ಶರೀರದ ಮುಂದೆ ಅವರ ಪುಟ್ಟ ಮಗುವಿಗೆ ಹೆಂಡತಿ ಅಲೇಖ್ಯ ಅವರು ಬ್ರೆಡ್ ತಿನ್ನಿಸುತ್ತಿದ್ದ ದೃಶ್ಯ ವೈರಲ್ ಆಗಿತ್ತು, ಇದನ್ನು ನೋಡಿ ಎಲ್ಲರ ಕಣ್ಣು ಒದ್ದೆಯಾಗಿತ್ತು. ಇದನ್ನು ಓದಿ..ಸಿಂಹದಂತೆ ಗುಟುರು ಹಾಕಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಸತ್ಯ ಸಿಂಹ ಇದ್ದ ಹಾಗೆ, ಯಾರ ರಕ್ಷಣೆ ಬೇಕಾಗಿಲ್ಲ ಎಂದು ಮತ್ತೆ ಗರಂ ಆಗಿದ್ದು ಯಾಕೆ ಗೊತ್ತೇ?
Comments are closed.