ಸಿಂಹದಂತೆ ಗುಟುರು ಹಾಕಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಸತ್ಯ ಸಿಂಹ ಇದ್ದ ಹಾಗೆ, ಯಾರ ರಕ್ಷಣೆ ಬೇಕಾಗಿಲ್ಲ ಎಂದು ಮತ್ತೆ ಗರಂ ಆಗಿದ್ದು ಯಾಕೆ ಗೊತ್ತೇ?
ನಟ ದರ್ಶನ್ ಅವರು ಕಳೆದ ಎರಡು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಂಡಿರಲಿಲ್ಲ, ಕೋವಿಡ್ ಹಾಗೂ ಅಪ್ಪು ಅವರು ಅಗಲಿದ ಕಾರಣಕ್ಕೆ ನಟ ದರ್ಶನ್ ಅವರು ಎಲ್ಲದಕ್ಕೂ ಬ್ರೇಕ್ ಹಾಕಿದ್ದರು. ಆದರೆ ಈ ವರ್ಷ ಡಿಬಾಸ್ ದರ್ಶನ್ ಅವರು ಜೋರಾಗಿಯೇ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಂಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್ ಅವರ ಮನೆಯ ಹತ್ತಿರ ನೆರೆದಿದ್ದರು. ದರ್ಶನ್ ಅವರ ಸಿನಿಮಾ ಅಪ್ಡೇಟ್ ಗಳು ಸಹ ಈ ದಿನ ಸಿಕ್ಕವು.
ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದ್ದಾಗ, ದರ್ಶನ್ ಅವರ ಹುಟ್ಟುಹಬ್ಬದ ಕುರಿತಾಗಿ ಅದೊಂದು ವಿವಾದ ಶುರುವಾಯಿತು. ಕಿರುತೆರೆ ನಟಿ ಮೇಘಾ ಶೆಟ್ಟಿ, ನಟಿ ಪವಿತ್ರಾ ಗೌಡ ಎಲ್ಲರೂ ಸೇರಿ ದರ್ಶನ್ ಅವರ ಹುಟ್ಟುಹಬ್ಬವನ್ನು ಪಾರ್ಟಿ ಮಾಡಿ ಆಚರಿಸಿದ್ದು, ಅದರ ಫೋಟೋ ಮತ್ತು ವಿಡಿಯೋಗಳನ್ನು ನಟಿ ಮೇಘಾ ಶೆಟ್ಟಿ ಶೇರ್ ಮಾಡಿಕೊಂಡಿದ್ದಾರೆ, ಇದರಿಂದ ಕೋಪಗೊಂಡ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು, ಮೇಘಾ ಶೆಟ್ಟಿ ಅವರಿಗೆ ಖಡಕ್ ಆಗಿ ವಾರ್ನಿಂಗ್ ನೀಡಿ, ಇಂಥದ್ದನ್ನೆಲ್ಲಾ ಶೇರ್ ಮಾಡಬೇಡಿ, ನನಗೆ ಮತ್ತು ನನ್ನ ಮಗನ ಮನಸ್ಸಿಗೆ ನೋವಾಗುತ್ತದೆ, ಒಂದು ಹೆಣ್ಣಾಗಿ ಹೀಗೆ ಮಾಡಬಾರದು, ಇದನ್ನೆಲ್ಲ ನಾನು ಸಹಿಸುವುದಿಲ್ಲ ಎಂದು ವಾರ್ನಿಂಗ್ ನೀಡಿದ್ದರು. ಇದನ್ನು ಓದಿ..ಎನ್ಟಿಆರ್ ಮಾಡದ ಕೆಲಸಕ್ಕೆ ಕೈ ಹಾಕಿ ತಾರಕರತ್ನ ತೀರಿಕೊಂಡ ಬೆನ್ನಲ್ಲೇ ಮೊದಲ ಗಟ್ಟಿ ನಿರ್ಧಾರ ಮಾಡಿದ ಬಾಲಕೃಷ್ಣ. ಏನು ಗೊತ್ತೇ??
ಆಗ ಮೇಘಾ ಶೆಟ್ಟಿ ಅವರು ಆ ವಿಡಿಯೋ ಡಿಲೀಟ್ ಮಾಡಿದ್ದರು. ಈ ಘಟನೆ ನಂತರ ವಿಜಯಲಕ್ಷ್ಮಿ ಅವರಿಂದ ಬರುವ ಹೊಸ ಅಪ್ಡೇಟ್ಸ್ ಗಾಗಿ ನೆಟ್ಟಿಗರು ಮತ್ತು ಅಭಿಮಾನಿಗಳು ಕಾಯುತ್ತಿದ್ದರು, ಇದೀಗ ವಿಜಯಲಕ್ಷ್ಮಿ ಅವರು ಹೊಸದೊಂದು ಸ್ಟೋರಿ ಅಪ್ಡೇಟ್ ಮಾಡಿದ್ದಾರೆ, “ಸತ್ಯ ಎನ್ನುವುದು ಒಂದು ಸಿಂಹದ ಹಾಗೆ, ಅದನ್ನು ಯಾರೂ ರಕ್ಷಣೆ ಮಾಡುವುದು ಬೇಕಿಲ್ಲ. ಆ ಸಿಂಹವನ್ನು ಹಾಗೆ ಬಿಟ್ಟರೆ, ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳುತ್ತದೆ..” ಎಂದು ಸ್ಟೋರಿ ಅಪ್ಡೇಟ್ ಮಾಡಿದ್ದಾರೆ. ಈ ವಿವಾದ ದಿನದಿಂದ ದಿನಕ್ಕೆ ಬೇರೆಯದೇ ರೂಪ ಪಡೆದುಕೊಳ್ಳುತ್ತಿದ್ದು, ಮುಂದೇನಾಗುತ್ತದೆ ಎಂದು ಕಾಯುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..ತೆಲುಗು ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ತಮನ್ನ. ಪ್ರೊಡ್ಯೂಸರ್ ನೇರವಾಗಿ ಗೆಸ್ಟ್ ಹೌಸ್ ಗೆ ಬಾ ಎಂದಿದ್ದು ಯಾಕೆ ಅಂತೇ ಗೊತ್ತೇ? ಅಂದು ಆಗಿದ್ದೇನು ಗೊತ್ತೇ?
Comments are closed.