Neer Dose Karnataka
Take a fresh look at your lifestyle.

ಕುದ್ದು ಅಂಬರೀಷ್ ರವರು ವಿಷ್ಣು ಸರ್ ರವರ ಮನೆಗೆ ಊಟಕ್ಕೆ ಬಂದಾಗ ಅಲ್ಲಿ ನಡೆದದ್ದು ಏನು ಗೊತ್ತೇ? ಅಂಬರೀಷ್ ಮಾತು ಕೇಳಿ, ವಿಷ್ಣು ಏನು ಮಾಡಿದ್ದರು ಗೊತ್ತೇ??

ಕನ್ನಡ ಚಿತ್ರರಂಗದಲ್ಲಿ ಸ್ನೇಹಕ್ಕೆ ಮತ್ತೊಂದು ಹೆಸರು ಎನ್ನುವ ಹಾಗೆ ಇದ್ದವರು ಸಾಹಸಸಿಂಹ ವಿಷ್ಣುವರ್ಧನ್ ಅವರು ಮತ್ತು ರೆಬೆಲ್ ಸ್ಟಾರ್ ಅಂಬರೀಶ್. ಇವರಿಬ್ಬರ ಸ್ನೇಹವನ್ನು ಇಡೀ ಕರ್ನಾಟಕ ನೋಡಿ ಮೆಚ್ಚಿಕೊಂಡಿದೆ, ಸ್ನೇಹ ಎಂದರೆ ಇವರಿಬ್ಬರ ಹಾಗೆ ಇರಬೇಕು ಎಂದು ಎಲ್ಲರೂ ಹೇಳುತ್ತಾರೆ. ವಿಷ್ಣುವರ್ಧನ್ ಅವರು ಮತ್ತು ಅಂಬರೀಶ್ ಅವರನ್ನು ನೋಡುವುದಾದರೆ, ಅವರಿಬ್ಬರದ್ದು ವಿರುದ್ಧ ಸ್ವಭಾವ ಮತ್ತು ವ್ಯಕ್ತಿತ್ವ. ವಿಷ್ಣುವರ್ಧನ್ ಅವರು ಶಾಂತ ಮತ್ತು ಸೌಮ್ಯ ಸ್ವಭಾವದ ಜೀವಿ, ಆದರೆ ಅಂಬರೀಶ್ ಅವರು ಬಹಳ ಒರಟು ಸ್ವಭಾವ ಆದರೆ ಹೃದಯ ಶ್ರೀಮಂತಿಕೆ ಇದ್ದವರು.

ಇವರಿಬ್ಬರು ಚಿತ್ರರಂಗಕ್ಕೆ ಮುಖ್ಯ ಪಾತ್ರಗಳ ಮೂಲಕ ಬಂದಿದ್ದು ಕೂಡ ಒಂದೇ ಸಿನಿಮಾ ಇಂದ, ನಾಗರಹಾವು ಸಿನಿಮಾ ಮೂಲಕ, ವಿಷ್ಣುವರ್ಧನ್ ಅವರದ್ದು ನಾಯಕ ರಾಮಾಚಾರಿ ಪಾತ್ರ, ಅಂಬರೀಶ್ ಅವರದ್ದು ವಿಲ್ಲನ್ ಜಲೀಲನ ಪಾತ್ರ. ಈ ಸಿನಿಮಾ ಇಂದ ಶುರುವಾದ ಇವರಿಬ್ಬರ ಸ್ನೇಹ ಇಬ್ಬರು ಬದುಕಿರುವವರೆಗೂ ಮುಂದುವರೆದಿತ್ತು. ವಿಷ್ಣುವರ್ಧನ್ ಅವರು ಅಂಬರೀಶ್ ಅವರನ್ನು ಎಷ್ಟು ಹಚ್ಚಿಕೊಂಡಿದ್ದರು ಎಂದರೆ, ಒಂದು ವೇಳೆ ತಾವು ಉಸಿರು ನಿಲ್ಲಿಸಿದರೆ ಅಂಬಿ ಎಲ್ಲಿದ್ದರು ಬರುತ್ತಾನೆ ಎಂದಿದ್ದರು. ಇಂಡಸ್ಟ್ರಿಯಲ್ಲಿ ಯಾರಿಲ್ಲದೆ ಹೋದರು, ಅಂಬಿ ನನ್ನ ಜೊತೆಗೆ ಇರುತ್ತಾನೆ ಎಂದಿದ್ದರು. ಇದನ್ನು ಓದಿ..Kannada News: ಬಿಗ್ ನ್ಯೂಸ್: ಸಂಭಾವನೆ ಇಲ್ಲದೆ ಸಿನಿಮಾ ಮಾಡಲು ಮುಂದಾದ ಪ್ರಭಾಸ್. ಆದರೆ ಯಾಕೆ ಈ ಗಟ್ಟಿ ನಿರ್ಧಾರ ಗೊತ್ತೆ? ತಿಳಿದರೆ ಶಾಕ್ ಆಗ್ತೀರಾ.

ಅಷ್ಟರ ಮಟ್ಟಿಗೆ ಇತ್ತು ಇವರಿಬ್ಬರ ಸ್ನೇಹ. ಅಂಬರೀಶ್ ಅವರು ಮತ್ತು ವಿಷ್ಣುವರ್ಧನ್ ಅವರ ಮನೆಗೆ ಆಗಾಗ ಊಟಕ್ಕೆ ಹೋಗುತ್ತಿದ್ದರು, ವಿಷ್ಣುವರ್ಧನ್ ಅವರ ಸಸ್ಯಾಹಾರಿ ಎಂದು ಗೊತ್ತಿದೆ, ಅಂಬರೀಶ್ ಅವರು ಒಮ್ಮೆ ಏನಯ್ಯ ನಿಮ್ಮ ಮನೆಯಲ್ಲಿ ಗುಂಡು ತುಂಡು ಇಲ್ವಾ ಎಂದಿದ್ದರು, ವಿಷ್ಣುವರ್ಧನ್ ಅವರಿಗೆ ಅದರ ಅಭ್ಯಾಸ ಇಲ್ಲದ ಕಾರಣ ಅವರ ಮನೆಯಲ್ಲಿ ಅದ್ಯಾವುದು ಕೂಡ ಇರಲಿಲ್ಲ. ಆದರೆ ತಮ್ಮ ಸ್ನೇಹಿತನಿಗೆ ಅದು ತುಂಬಾ ಇಷ್ಟ, ಅವನಿಗೆ ಇಷ್ಟವಾದದ್ದು ತಮ್ಮ ಮನೆಯಲ್ಲಿರಬೇಕು ಎಂದು ಅಂಬರೀಷ್ ಅವರಿಗೋಸ್ಕರ ತಮ್ಮ ಮನೆಯಲ್ಲಿ ಒಂದು ಬಾರ್ ಕೌಂಟರ್ ಓಪನ್ ಮಾಡಿದರು ವಿಷ್ಣುದಾದ. ಈ ವಿಚಾರ ಕೇಳಿದರೆ, ಅವರಿಬ್ಬರ ಸ್ನೇಹ ಎಷ್ಟು ಅದ್ಭುತವಾಗಿತ್ತು ಎಂದು ಗೊತ್ತಾಗುತ್ತದೆ. ಇದನ್ನು ಓದಿ..Kannada News: ದರ್ಶನ್ ಜೊತೆ ಹೊಸ ಸಿನಿಮಾದಲ್ಲಿ ನಟನೆ ಮಾಡಲು ಮಾಲಶ್ರೀ ಮಗಳಿಗೆ ಕೊಡುತ್ತಿರುವ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ??

Comments are closed.