Kannada News: ಕಬ್ಜ ಸಿನಿಮಾಗಾಗಿ ಖರ್ಚು ಮಾಡಿರುವುದು ಎಷ್ಟು ಗೊತ್ತೇ? ಯಪ್ಪಾ ತಿಳಿದರೆ, ನೀವು ಇಂದೇ ಸಿನಿಮಾ ಮಾಡುವ ಆಲೋಚನೆ ಮಾಡ್ತೀರಾ.
Kannada News: ಕಳೆದ ವರ್ಷ ನಮ್ಮ ಕನ್ನಡ ಚಿತ್ರರಂಗದಿಂದ ದಿ ಬೆಸ್ಟ್ ಸಿನಿಮಾಗಳು ಬಂದಿವೆ ಎಂದು ಹೇಳಬಹುದು. ಕೆಜಿಎಫ್2, ಚಾರ್ಲಿ, ವಿಕ್ರಾಂತ್ ರೋಣ, ಕಾಂತಾರ ಈ ಸಿನಿಮಾಗಳು ಕನ್ನಡ ಚಿತ್ರರಂಗವನ್ನು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗಿದೆ. ಇದಾದ ಬಳಿಕ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಹಿಟ್ ಸಿನಿಮಾ ಬಿಡುಗಡೆ ಆಗಿಲ್ಲ. ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಕಬ್ಜ ಸಿನಿಮಾ. ಬಿಡುಗಡೆ ಆಗುವುದಕ್ಕೆ ತಯಾರಾಗಿದೆ. ಇದು ಉಪೇಂದ್ರ ಅವರು, ಸುದೀಪ್ ಅವರು ಮತ್ತು ಶ್ರೀಯಾ ಸರನ್ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಸಿನಿಮಾ.
ಈಗಾಗಲೇ ಟೀಸರ್ ಮತ್ತು ಹಾಡುಗಳಿಂದ ಭಾರಿ ಸದ್ದು ಮಾಡುತ್ತಿದೆ ಕಬ್ಜ. ಮಾರ್ಚ್ 17ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಪ್ರೊಮೋಷನ್ ಗಳು ಜೋರಾಗಿಯೇ ನಡೆಯುತ್ತಿದೆ. ಸಿನಿಮಾ 70 ರ ದಶಕದಲ್ಲಿ ನಡೆಯುವ ಗ್ಯಾಂಗ್ಸ್ಟರ್ ಕಥೆಯಾಗಿದೆ. ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ 7 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾಗೆ ಬಾಲಿವುಡ್ ನ ಖ್ಯಾತ ನಿರ್ಮಾಪಕ ಆನಂದ್ ಪಂಡಿತ್ ಅವರು ಕೈಜೋಡಿಸಿರುವುದು ವಿಶೇಷ. ಸಹ ನಿರ್ಮಾಪಕರಾಗಿರುವ ಇವರು, ಮರಾಠಿ ತೆಲುಗು ಮತ್ತು ಹಿಂದಿ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಇದನ್ನು ಓದಿ..Kannada News: ನಿಜಕ್ಕೂ Dr ರಾಜ್ ಹಾಗೂ Dr ವಿಷ್ಣುವರ್ಧನ್ ರವರ ನಡುವೆ ಇತ್ತೇ ‘ಮಹಾ’ ದ್ವೇಷ?? ತೆರೆ ಹಿಂದೆ ನಿಜಕ್ಕೂ ನಡೆದದ್ದು ಏನು ಗೊತ್ತೇ??
ಹಾಗೆಯೇ ಇತ್ತೀಚೆಗೆ ಸಿನಿಮಾ ಬಗ್ಗೆ ಮಾತನಾಡಿ ಬಜೆಟ್ ಅನ್ನು ಕೂಡ ರಿವೀಲ್ ಮಾಡಿದ್ದಾರೆ, “ಇದು ಸಿನಿಮಾಗಾಗಿ ಮಾತ್ರ ಮಾಡಿರುವ ಸಿನಿಮಾ ಅಲ್ಲ, 120 ಕೋಟಿ ವೆಚ್ಚದಲ್ಲಿ ಪ್ಯಾಷನ್ ಗಾಗಿ ಮಾಡಿರುವ ಸಿನಿಮಾ..” ಎಂದು ಹೇಳಿದ್ದಾರೆ. ಈ ಮಾತುಗಳು ಈಗ ಭಾರಿ ವೈರಲ್ ಆಗುತ್ತಿದೆ. ಆರ್.ಚಂದ್ರು ಅವರು ಕಬ್ಜ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ತೆಗೆದಿದ್ದಾರೆ, ವರ್ಲ್ಡ್ ಕ್ಲಾಸ್ ಆಕ್ಷನ್ ಮತ್ತು ಸಿನಿಮಾಟೋಗ್ರಾಫಿ ಇದೆ ಎಂದು ಕೂಡ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕಬ್ಜ ಸಿನಿಮಾ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆಗಳು ಹೆಚ್ಚಾಗುತ್ತಿದ್ದು, ಸಿನಿಮಾ ಬಿಡುಗಡೆ ಆದಮೇಲೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..ಸಿನೆಮಾಗೆ ನಟಿ ಪೂಜಾ ಹೇಗೆ, ಆದರೆ ಬೇರೆ ಪಾತ್ರಕ್ಕೆ ಬಾಲಿವುಡ್ ನಿಂದ ಬೆಣ್ಣೆಯಂತಹ ನಟಿಯರನ್ನು ಕರೆತಂದ ಮಹೇಶ್. ನೋಡಿದರೆ, ಲವ್ ಆಗೋದು ಪಕ್ಕ. ಯಾರು ಗೊತ್ತೇ?
Comments are closed.