Kannada News: ಅಲ್ಲೂ ಅರ್ಜುನ್ ಗೆ ಬ್ರೇಕ್ ನೀಡಿದ ಆರ್ಯ ಸಿನೆಮಾವನ್ನು ಅವರಿಗಿಂತ ಮುನ್ನ ರಿಜೆಕ್ಟ್ ಮಾಡಿದ್ದ ನಟ ಯಾರು ಗೊತ್ತೇ??
Kannada News: ನಟ ಅಲ್ಲು ಅರ್ಜುನ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರಿತಿಸಿಕೊಂಡಿದ್ದಾರೆ. ಪುಷ್ಪ ಸಿನಿಮಾ ಇವರಿಗೆ ಎಷ್ಟು ದೊಡ್ಡ ಹೆಸರು ತಂದುಕೊಟ್ಟಿದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಈಗ ಅಲ್ಲು ಅರ್ಜುನ್ ಅವರು ಪುಷ್ಪ2 ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಅಲ್ಲು ಅರ್ಜುನ್ ಅವರ ಕೆರಿಯರ್ ನಲ್ಲಿ ಬಹಳ ಮುಖ್ಯವಾದ ಸಿನಿಮಾಗಳಲ್ಲಿ ಒಂದು ಆರ್ಯ. ಈ ಸಿನಿಮಾವನ್ನು ಸುಕುಮಾರ್ ಅವರು ನಿರ್ದೇಶನ ಮಾಡಿದರು.
ಇದು ಅಲ್ಲು ಅರ್ಜುನ್ ಅವರಿಗೆ ಬಹುದೊಡ್ಡ ಬ್ರೇಕ್ ನೀಡಿದ ಸಿನಿಮಾ, ಆರ್ಯ ಎಷ್ಟು ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು ಎಂದರೆ, ಆ ಸಿನಿಮಾ ಸಕ್ಸಸ್ ಇಂದ ಅಲ್ಲು ಅರ್ಜುನ್ ಅವರ ಕೆರಿಯರ್ ಪೂರ್ತಿಯಾಗಿ ಬದಲಾಗಿ ಹೋಯಿತು. ಸುಕುಮಾರ್ ಅವರಿಗು ಇದು ದೊಡ್ಡ ಹಿಟ್ ನೀಡಿತು. ಆರ್ಯ ಸಕ್ಸಸ್ ನಲ್ಲಿ ಸುಕುಮಾರ್ ಮತ್ತು ಅಲ್ಲು ಅರ್ಜುನ್ ಅವರು ಆರ್ಯ2 ಸಿನಿಮಾದಲ್ಲಿ ಸಹ ನಟಿಸಿದರು. ಆದರೆ ಈ ಸಿನಿಮಾ ಬಗ್ಗೆ ಆಸಕ್ತಿಕರ ವಿಚಾರ ಒಂದು ಈಗ ಬೆಳಕಿಗೆ ಬಂದಿದೆ. ಅದೇನೆಂದರೆ ಆರ್ಯ ಸಿನಿಮಾ ಆಫರ್ ಮೊದಲಿಗೆ ಹೋಗಿದ್ದು ಅಲ್ಲು ಅರ್ಜುನ್ ಅವರಿಗೆ ಅಲ್ಲ. ಇದನ್ನು ಓದಿ..Kannada News: ರಶ್ಮಿಕಾ ಹೊಸ ಅವತಾರಗಳನ್ನು ನೋಡಿದರೆ, ಟ್ರೊಲ್ ಮಾಡಿದಕ್ಕೆ ಕ್ಷಮೆ ಕೇಳಬೇಕು ಎನಿಸುತ್ತದೆ, ಎಂತಹ ಅಪ್ಸರೆ. ಫೋಟೋಸ್ ನೋಡರೆ ನಿಂತಲ್ಲೇ ಎಗರಿ ನೀರು ಕುಡಿತೀರಾ.
ಆರ್ಯ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು ಆಗಿನ ಯುವನಟ ನಟ ನಿತಿನ್. ಆ ಸಮಯದಲ್ಲಿ ನಿತಿನ್ ಅವರು ದಿಲ್ ಸಿನಿಮಾ ಸಕ್ಸಸ್ ಇಂದ ಕೆರಿಯರ್ ಪೀಕ್ ನಲ್ಲಿದ್ದರು, ಆರ್ಯ ಕಥೆ ಇಷ್ಟವಾಗಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದರು. ಆದರೆ ಆಗ ನಿತಿನ್ ಆರಕ್ಕಿಂತ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಹಾಗಾಗಿ ನಿತಿನ್ ಅವರಿಗೆ ಆರ್ಯ ಸಿನಿಮಾಗಾಗಿ ಡೇಟ್ಸ್ ಹೊಂದಿಸಲು ಸಾಧ್ಯವಾಗದೆ, ಇಂಥಹ ಒಳ್ಳೆಯ ಸಿನಿಮಾ ಅವರ ಕೈಬಿಟ್ಟು ಹೋಯಿತು. ಈ ಕಾರಣದಿಂದ ಅಲ್ಲು ಅರ್ಜುನ್ ಅವರಿಗೆ ಆರ್ಯ ಸಿನಿಮಾ ಹೋಯಿತು. ಇದನ್ನು ಓದಿ..Kannada News: ಕಬ್ಜ ಸಿನಿಮಾಗಾಗಿ ಖರ್ಚು ಮಾಡಿರುವುದು ಎಷ್ಟು ಗೊತ್ತೇ? ಯಪ್ಪಾ ತಿಳಿದರೆ, ನೀವು ಇಂದೇ ಸಿನಿಮಾ ಮಾಡುವ ಆಲೋಚನೆ ಮಾಡ್ತೀರಾ.
Comments are closed.