Kannada News: ಚಾನ್ಸ್ ಕೇಳಿದ ತಕ್ಷಣ ಹಿರಿಯ ನಟಿಗೆ ಏನು ಮಾಡುತ್ತಿದ್ದರಂತೆ ಗೊತ್ತೇ? ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ನಟಿ ಹೇಳಿದ್ದೇನು ಗೊತ್ತೇ?
Kannada News: ನಟಿ ಆಮನಿ (Actress Aamani) ಬೆಂಗಳೂರಿನವರು, ಆದರೆ ಇವರು ಹೆಚ್ಚಾಗಿ ನಟಿಸಿದ್ದು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ, ಕನ್ನಡದಲ್ಲಿ ಬಾಳಿನ ಜ್ಯೋತಿ ಮತ್ತು ಅಪ್ಪಾಜಿ ಸಿನಿಮಾದಲ್ಲಿ ನಟಿಸಿದ್ದಾರೆ. ವಿಷ್ಣುದಾದ ಅವರೊಡನೆ ಏನೇ ಕನ್ನಡತಿ ಹಾಡನ್ನು ಇಂದಿಗೂ ಯಾರು ಮರೆತಿಲ್ಲ. ನಟಿ ಸೌಂದರ್ಯ ಹಾಗೂ ಇವರು ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಈಗ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಬ್ಯುಸಿ ಇರುವ ನಟಿ ಆಮನಿ ಅವರು ಒಂದು ಸಂದರ್ಶನದಲ್ಲಿ ತಮಗೆ ಆದ ಕ್ಯಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ರಿವೀಲ್ ಮಾಡಿದ್ದಾರೆ. ಕೆರಿಯರ್ ಆರಂಭದಲ್ಲಿ ಆಡಿಷನ್ ಗಳಿಗೆ ಹೋದಾಗ ಯಾವ ರೀತಿ ನೋಡುತ್ತಿದ್ದರು ವಿವರಿಸಿದ್ದಾರೆ..
ನಟಿ ಆಮನಿ ಅವರು ಹೇಳಿದ್ದು ಹೀಗೆ.. “ಆಗ ನಾನು ಆಡಿಷನ್ ಗಳಿಗೆ ನನ್ನ ತಾಯಿಯ ಜೊತೆಗೆ ಹೋಗುತ್ತಿದ್ದೆ, ಕೆಲವು ಆಡಿಷನ್ ಗಳಲ್ಲಿ ಸೆಲೆಕ್ಟ್ ಆಗುತ್ತಿದ್ದು, ಇನ್ನು ಕೆಲವು ರಿಜೆಕ್ಟ್ ಆಗುತ್ತಿದ್ದವು. ನಿರ್ದೇಶಕರ ಬಳಿ ಅವಕಾಶಕ್ಕಾಗಿ ಹೋಗುತ್ತಿದ್ದೆ, ನಾನು ಯಾವಾಗಲೂ ಹೋಗುತ್ತಿದ್ದದ್ದು ನನ್ನ ತಾಯಿಯ ಜೊತೆಗೆ. ಆಡಿಷನ್ ಆದಮೇಲೆ ಕೆಲವರು ಫೋನ್ ಮಾಡ್ತೀವಿ ಅಂತ ಹೇಳ್ತಿದ್ರು, ಅಮ್ಮನ ಜೊತೆಗೆ ಬಂದರೆ ಏನು ಆಗಲ್ಲ ಅಂತ ಕೂಡ ಹೇಳ್ತಿದ್ರು. ಫೋನ್ ಮಾಡಿ, ಮೇಡಂ ಮೇಕಪ್ ಟೆಸ್ಟ್ ಇದೆ ನಿರ್ದೇಶಕರು ಕರೆದಿದ್ದಾರೆ, ರೆಸಾರ್ಟ್ ಗೆ ಒಬ್ಬರೇ ಬನ್ನಿ ಎಂದು ಹೇಳುತ್ತಿದ್ದರು. ಆದರೆ ಅಮ್ಮ ಅದಕ್ಕೆ ಒಪ್ಪುತ್ತಿರಲಿಲ್ಲ, ಇಬ್ಬರು ಜೊತೆಗೆ ಬರ್ತೀವಿ ಎನ್ನುತ್ತಿದ್ದರು. ಮೊದಲು ಅವರು ಕರೆಯುತ್ತಿದ್ದ ಉದ್ದೇಶ ಏನು ಎಂದು ನನಗೆ ಅರ್ಥವಾಗಿರಲಿಲ್ಲ. ಇದನ್ನು ಓದಿ..Kannada News: ರಶ್ಮಿಕಾ ಹೊಸ ಅವತಾರಗಳನ್ನು ನೋಡಿದರೆ, ಟ್ರೊಲ್ ಮಾಡಿದಕ್ಕೆ ಕ್ಷಮೆ ಕೇಳಬೇಕು ಎನಿಸುತ್ತದೆ, ಎಂತಹ ಅಪ್ಸರೆ. ಫೋಟೋಸ್ ನೋಡರೆ ನಿಂತಲ್ಲೇ ಎಗರಿ ನೀರು ಕುಡಿತೀರಾ.
ಆಗ ನಾನು ಓದುತ್ತಿದ್ದೆ, ಒಂದು ವೇಳೆ ಇಲ್ಲಿ ಅವಕಾಶ ಸಿಗದೆ ಹೋದರೆ ಬೇರೆ ಕೆಲಸಕ್ಕೆ ಹೋಗಬಹುದಿತ್ತು, ಅದೇ ಕಾರಣಕ್ಕೆ ನಾನು ಅದಕ್ಕೆಲ್ಲಾ ಹೋಗಲಿಲ್ಲ. ಆಗ ನನ್ನ ತಂದೆ ಇಂಡಸ್ಟ್ರಿಗೆ ಬರುವುದು ಬೇಡ ಅಂತ ಯಾಕೆ ಹೇಳ್ತಿದ್ರು ಅನ್ನೋದು ಕೂಡ ಅರ್ಥವಾಯಿತು. ಆದರೆ ನಾನು ಹಠಮಾಡಿಕೊಂಡು ಬಂದೆ. ಮೊದಲು ಎರಡನೇ ನಾಯಕಿ, ತಂಗಿ ಪಾತ್ರ ಇಂತಹ ಅವಕಾಶಗಳು ಸಿಗುತ್ತಿದ್ದವು. ಆದರೆ ನನಗೆ ಹೀರೋಯಿನ್ ಆಗಿಯೇ ಗುರುತಿಸಿಕೊಳ್ಳಬೇಕು ಅಂತ ಆಸೆ ಇತ್ತು, ಅದಕ್ಕೆ ಆ ಅವಕಾಶಗಳನ್ನೆಲ್ಲ ಒಪ್ಪಿಕೊಳ್ಳಲಿಲ್ಲ. ನಂತರ ಒಳ್ಳೆಯ ಅವಕಾಶ ಸಿಕ್ತು, ಹೀರೋಯಿನ್ ಆಗಿಯೇ ಲಾಂಚ್ ಆದೆ. ಈ ಕಾರಣದಿಂದಲೇ ನಾನು ಇಂಡಸ್ಟ್ರಿಗೆ ಬರುವುದು ಎರಡು ವರ್ಷ ತಡವಾಯಿತು..” ಎಂದು ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ ನಟಿ ಆಮನಿ. ಇದನ್ನು ಓದಿ..Kannada News: ಅಲ್ಲೂ ಅರ್ಜುನ್ ಗೆ ಬ್ರೇಕ್ ನೀಡಿದ ಆರ್ಯ ಸಿನೆಮಾವನ್ನು ಅವರಿಗಿಂತ ಮುನ್ನ ರಿಜೆಕ್ಟ್ ಮಾಡಿದ್ದ ನಟ ಯಾರು ಗೊತ್ತೇ??
Comments are closed.