Film News: ಹಿರಿಯ ನಟ ವಿಶ್ವನಾಥ್ ಕೊನೆಯುಸಿರೆಳೆದ ಕೆಲವೇ ದಿನಗಳಲ್ಲಿ ಕುಟುಂಬಕ್ಕೆ ಮತ್ತೊಂದು ಶಾಕ್. ಕಣ್ಣೀರಿನಲ್ಲಿ ಚಿತ್ರರಂಗ
Film News: ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು ಕೆ.ವಿಶ್ವನಾಥ್ ಅವರು. ತೆಲುಗಿನ ಸ್ಟಾರ್ ಕಲಾವಿದರ ಜೊತೆಗೆ ಇವರು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ ಹೆಸರು ಮಾಡಿದ್ದಾರೆ. ವಿಶ್ವನಾಥ್ ಅವರು ಟಾಲಿವುಡ್ ನ ಲೆಜೆಂಡರಿ ಡೈರೆಕ್ಟರ್ ಎಂದೇ ಹೆಸರು ಮಾಡಿದ್ದವರು. ಇಂಥ ಮೇರು ನಿರ್ದೇಶಕರು ಈ ವರ್ಷ ಫೆಬ್ರವರಿ 2ರಂದು ವಿಧಿವಶರಾದರು. ಇವರು ಇನ್ನಿಲ್ಲವಾದ ಈ ಸುದ್ದಿ ಟಾಲಿವುಡ್ ಗೆ ಶಾಕ್ ನೀಡಿತ್ತು.
ಎಲ್ಲಾ ಗಣ್ಯರು, ಕಲಾವಿದರು ವಿಶ್ವನಾಥ್ ಅವರ ಬಗ್ಗೆ ಸಂತಾಪ ಸೂಚಿಸಿದ್ದರು. ಇವರು ವಿಧಿವಶರಾಗಿ ಕೆಲವೇ ದಿನಗಳಿಗೆ ಅವರ ಮನೆಯಲ್ಲಿ ಈಗ ಮತ್ತೊಂದು ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅದೇನೆಂದರೆ ಕೆ.ವಿಶ್ವನಾಥ್ ಅವರ ಪತ್ನಿ ಕಾಶಿನಾಧುನಿ ಜಯಲಕ್ಷ್ಮಿ ಅವರು ನಿನ್ನೆ ಸಂಜೆ 6:15 ಗೆ ಕೊನೆಯುಸಿರೆಳೆದಿದ್ದಾರೆ. ಇವರು ಅಸ್ವಸ್ಥರಾಗಿದ್ದರು, ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ಜಯಲಕ್ಷ್ಮಿ ಅವರನ್ನು ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲ ನೀಡದೆ ಈ ರೀತಿ ಆಗಿದೆ. ಇದನ್ನು ಓದಿ..Film News: ಅಂದು ದರ್ಶನ್ ಗೆ ಚಪ್ಪಲಿ ಎಸೆದಿದ್ದ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತೇ? ತಿಳಿದರೆ…
ಕೆ.ವಿಶ್ವನಾಥ್ ಅವರು ಇಹಲೋಕ ತ್ಯಜಿಸಿದ ನಂತರ ಜಯಲಕ್ಷ್ಮಿ ಅವರ ಆರೋಗ್ಯ ಹದಗೆಟ್ಟ ಕಾರಣ, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ವಿಶ್ವನಾಥ್ ಅವರು ಪ್ರಾಣ ಬಿಟ್ಟ ಅದೇ ವಾರ್ಡ್ ನಲ್ಲಿಯೇ ಜಯಲಕ್ಷ್ಮಿ ಅವರಿಗು ಹೀಗೆ ಆಗಿರುವುದು ದುಃಖದ ಸಂಗತಿ. ನಿನ್ನೆ ಸಂಜೆಯ ಬಳಿಕ ಅವರ ಪಾರ್ಥಿವ ಶರೀರವನ್ನು ಫಿಲಂನಗರ್ ನಲ್ಲಿರುವ ಮನೆಗೆ ತೆಗೆದುಕೊಂಡು ಹೋಗಿದ್ದು, ಇಂದು ಪಂಜಗುಟ್ಟದಲ್ಲಿರುವ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಇವರಿಗೆ ಈಗ 88 ವರ್ಷ ವಯಸ್ಸಾಗಿತ್ತು, 15ನೇ ವಯಸ್ಸಾಗಿತ್ತು ವಿಶ್ವನಾಥ್ ಅವರೊಡನೆ ಮದುವೆಯಾಗಿದ್ದರು. ಇದನ್ನು ಓದಿ..Kannada News: ಅಪ್ಪು ಉಚಿತವಾಗಿ ಹೋಗಿದ್ದ ವೀಕೆಂಡ್ ವಿಥ್ ರಮೇಶ್ ಗೆ ಅಶ್ವಿನಿ ಮೇಡಂ ಕೇಳಿದ ಸಂಭಾವನೆ ಎಷ್ಟು ಗೊತ್ತೇ?? ತಿಳಿದರೆ ಊಟ ಮಾಡೋದೇ ಬಿಡ್ತೀರಾ.
Comments are closed.