Cricket News: ಮದುವೆಯಾಗಿರುವ ಶಾರ್ದುಲ್ ಹಾಗೂ ಪತ್ನಿ ಮಿಥಾಲಿ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ?? ಇಷ್ಟಕ್ಕೂ ಯಾರು ದೊಡ್ಡವರು ಗೊತ್ತೇ?
Cricket News: ಕಳೆದ ವರ್ಷ ಮತ್ತು ಈ ವರ್ಷ ಒಂದು ರೀತಿ ಮದುವೆ ಸೀಸನ್ ಹಾಗೆ ಆಗಿದೆ ಎಂದರೆ ತಪ್ಪಲ್ಲ. ಸಾಕಷ್ಟು ಸೆಲೆಬ್ರಿಟಿಗಳು ಮದುವೆ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಕ್ರಿಕೆಟಿಗರು, ಸಿನಿಮಾ ಸೆಲೆಬ್ರಿಟಿಗಳು, ಕಿರುತೆರೆ ಲೋಕದ ಸೆಲೆಬ್ರಿಟಿಗಳು ಎಲ್ಲರೂ ಸಹ ಮದುವೆ ಆಗುತ್ತಿದ್ದಾರೆ. ಒಂದು ರೀತಿ ಸೋಷಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳೇ ವೈರಲ್ ಆಗುತ್ತದೆ ಎಂದೇ ಹೇಳಬಹುದು. ಇದೀಗ ಮತ್ತೊಬ್ಬ ಕ್ರಿಕೆಟಿಗ ಕೂಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇತ್ತೀಚೆಗೆ ಖ್ಯಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಮದುವೆ ಕಳೆದ ತಿಂಗಳು ನಡೆಯಿತು. ಮತ್ತೊಬ್ಬ ಕ್ರಿಕೆಟರ್ ಅಕ್ಷರ್ ಪಟೇಲ್ ಅವರು ಕೂಡ ಮದುವೆಯಾದರು. ಇದೀಗ ಮತ್ತೊಬ್ಬ ಕ್ರಿಕೆಟಿಗ ಶಾರ್ದುಲ್ ಠಾಕೂರ್ (Shardul Thakur) ಅವರು ಕೂಡ ಮದುವೆಯಾಗಿದ್ದಾರೆ. ಇವರು ಉದ್ಯಮಿ ಮಿಥಾಲಿ (Mithali Parulkar) ಅವರೊಡನೆ ಮದುವೆಯಾಗಿದ್ದು, ಇಬ್ಬರ ಕುಟುಂಬದವರು, ಸ್ನೇಹಿತರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿಯ ಮದುವೆ ನಡೆಯಿತು. ಶಾರ್ದುಲ್ ಠಾಕೂರ್ ಅವರ ಮದುವೆ, ಸಂಗೀತ್ ಹಾಗೂ ಹಳದಿ ಶಾಸ್ತ್ರದ ಫೋಟೋಗಳು ಕೂಡ ವೈರಲ್ ಆಗುತ್ತಿದೆ. ಇದನ್ನು ಓದಿ..Cricket News: ವಿಶ್ವಕಪ್ ಸೋತ ಬಳಿಕ ಹೆಚ್ಚಾಯ್ತು ಟೀಕೆ: ನೇರವಾಗಿ ಸ್ಮೃತಿ ಮಂದಣ್ಣ ವಿರುದ್ಧ ಅಂಜುಮ್ ಚೋಪ್ರಾ ಹೇಳಿದ್ದೇನು ಗೊತ್ತೇ??
ಈ ಜೋಡಿಗೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಮಿಥಾಲಿ ಅವರು ಒಬ್ಬ ಉದ್ಯಮಿ ಆಗಿದ್ದು, ಅವರು ತಮ್ಮದೇ ಆದ ಬ್ರ್ಯಾಂಡ್ ಒಂದನ್ನು ಹೊಂದಿದ್ದಾರೆ. ಅತ್ಯಂತ ಯಶಸ್ವಿ ಬ್ಯುಸಿನೆಸ್ ವುಮನ್ ಗಳಲ್ಲಿ ಇವರು ಕೂಡ ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಕೂಡ ಇವರು ಆಕ್ಟಿವ್ ಆಗಿರುಗ್ತಾರೆ. ಇದೀಗ ಈ ಜೋಡಿಯ ನಡುವಿನ ವಯಸ್ಸಿನ ವ್ಯತ್ಯಾಸದ ಬಗ್ಗೆ ಚರ್ಚೆ ಆಗುತ್ತಿದ್ದು, ಶಾರ್ದುಲ್ ಠಾಕೂರ್ ಅವರಿಗೆ ಈಗ 31 ವರ್ಷ ವಯಸ್ಸು, ಇವರು 1991ರ ಅಕ್ಟೋಬರ್ 16ರಂದು ಜನಿಸಿದರು. ಮಿಥಾಲಿ ಪಾರುಲ್ಕರ್ ಅವರಿಗೆ ಹುಟ್ಟಿದ್ದು ಮುಂಬೈನಲ್ಲಿ 1992ರಲ್ಲಿ, ಇವರಿಗೆ 30 ವರ್ಷ ವಯಸ್ಸು. ಈ ಜೋಡಿಯಲ್ಲಿ ಇಬ್ಬರಿಗೂ 30 ವರ್ಷ ದಾಟಿದೆ. ಇದನ್ನು ಓದಿ..Cricket News: ಕ್ರಿಕೆಟ್ ನಲ್ಲಿ ಮಿಂಚಿ ದೇಶವನ್ನೇ ಗಡ ಗಡ ನಡುಗುವಂತೆ ಮಾಡಿರುವ ಸ್ಮೃತಿ ಮಂದಣ್ಣ ರವರ ವಯಸ್ಸು ತಿಳಿದರೆ ನೀವು ನಂಬೋದೇ ಇಲ್ಲ.
Comments are closed.