Neer Dose Karnataka
Take a fresh look at your lifestyle.

Kannada News: ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋದ ಬಾಲಯ್ಯ: ತರಕಾರತ್ನ ಪತ್ನಿಗಾಗಿ ಪ್ರಮುಖ ಜವಾಬ್ದಾರಿ ನೀಡಲು ನಿರ್ಧಾರ. ಏನು ಗೊತ್ತೇ??

558

Kannada News: ನಂದಮೂರಿ ತಾರಕರತ್ನ ಅವರು ಇತ್ತೀಚೆಗೆ ಹೃದಯಾಘಾತದಿಂದ ವಿಧಿವಶರಾದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಒಕಟೋ ನಂಬರ್ ಕುರ್ರಾಡು ಸಿನಿಮಾ ಮೂಲಕ ತಾರತರತ್ನ ಅವರು ಹೀರೋ ಆದರು, ಒಳ್ಳೆಯ ಹೆಸರು ಕೂಡ ಇವರಿಗೆ ಸಿಕ್ಕಿತು. ಆದರೆ ಈ ಸಿನಿಮಾ ನಂತರ ತಾರಕರತ್ನ ಅವರಿಗೆ ಹೀರೋ ಆಗಿ ಹೆಚ್ಚಿನ ಹೆಸರು ಸಿಗಲಿಲ್ಲ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದರು. ವಿಲ್ಲನ್ ಆಗಿ ನಟಿಸಿದರು, ಹಾಗೆಯೇ ವೆಬ್ ಸೀರೀಸ್ ನಲ್ಲಿ ಕೂಡ ನಟಿಸಿದ್ದಾರೆ. ಚಿತ್ರರಂಗದಲ್ಲಿ ನೆಲೆಯೂರುವ ಪ್ರಯತ್ನದ ಜೊತೆಗೆ ರಾಜಕೀಯಕ್ಕೆ ಸಹ ಬರಬೇಕು ಎಂದುಕೊಂಡರು. ಹೀಗಾಗಿ ನಾರಾ ಲೋಕೇಶ್ ಅವರ ಯುವಗಳಂ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಆದರೆ ಪಾದಯಾತ್ರೆ ಶುರುವಾದ ದಿನವೇ ತಾರಕರತ್ನ ಅವರು ಹೃದಯಾಘಾತದ ಕಾರಣ ಅನಾರೋಗ್ಯಕ್ಕೆ ಒಳಗಾದರು. ತಕ್ಷಣವೇ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಸೇರಿಸಲಾಯಿತು, ಅಲ್ಲಿ 23 ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ, ಚಿಕಿತ್ಸೆ ಫಲಕಾರಿಯಾಗದೆ, ಕೊನೆಯುಸಿರೆಳೆದರು. ಇದು ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಎಂದೇ ಹೇಳಬೇಕು. ತಾರಕರತ್ನ ಅವರನ್ನು ಪ್ರೀತಿಸಿ ಅಲೇಖ್ಯ ಅವರು ಮದುವೆಯಾಗಿದ್ದರು, ಈಗ ಪತಿ ಇಲ್ಲದ ನೋವನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಅಲೇಖ್ಯ ಅವರು ಮತ್ತೆ ನಾರ್ಮಲ್ ಆಗುವ ಹಾಗೆ ಮಾಡಲು ಕುಟುಂಬದವರು ಎಷ್ಟೇ ಪ್ರಯತ್ನ ಪಡುತ್ತಿದ್ದರು ಸಹ, ಪತಿಯ ನೆನಪಿನಿಂದ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇದನ್ನು ಓದಿ..Kannada News: ಶಂಕರ್ ನಾಗ್ ಜೊತೆ ನಟಿಸಿರುವ ಅಪ್ಸರೆಯಂತಹ ನಟಿ ಸುಮನ್ ರಂಗನಾಥನ್ ರವರ ವಯಸ್ಸು ತಿಳಿದರೆ ನಿಂತಲ್ಲೇ ಜಿಗಿಯುತ್ತಿರಿ. ಎಷ್ಟಾಗಿದೆ ಗೊತ್ತೆ??

ಬಾಲಯ್ಯ ಅವರು ಮೊದಲಿನಿಂದಲೂ ತಾರಕರತ್ನ ಅವರ ಕುಟುಂಬಕ್ಕೆ ಆಸರೆಯಾಗಿದ್ದಾರೆ, ಈಗಲೂ ಅವರಿಗೆ ಬೆಂಬಲ ಕೊಡುತ್ತಿದ್ದಾರೆ. ಮಕ್ಕಳ ಜವಾಬ್ದಾರಿ ನನ್ನದು ಎಂದು ಬಾಲಯ್ಯ ಅವರು ಈಗಾಗಲೇ ಹೇಳಿದ್ದಾರೆ. ಈಗ ಅಲೇಖ್ಯ ಅವರ ವಿಚಾರದಲ್ಲೂ ಮುಖ್ಯವಾದ ನಿರ್ಧಾರ ತೆಗೆದುಕೊಂಡಿದ್ದಾರಂತೆ. ತಾರಕರತ್ನ ಅವರಿಗೆ ರಾಜಕೀಯಕ್ಕೆ ಬರಬೇಕು ಎಂದು ಆಸೆ ಇತ್ತು, ಈ ಆಸೆ ಈಡೇರಿಸುವುದರ ಜೊತೆಗೆ ಅಲೇಖ್ಯ ಅವರು ನಾರ್ಮಲ್ ಆಗುವ ಹಾಗೆ ಮಾಡಲು, ಅವರನ್ನು ರಾಜಕೀಯಕ್ಕೆ ಕರೆತರುವ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಮೊದಲು ಅಲೇಖ್ಯಾ ಅವರು ತೆಲುಗು ದೇಶಂ ಪಕ್ಷದ ಮಹಿಳಾ ವಿಭಾಗದಲ್ಲಿ ಪ್ರಮುಖ ಸ್ಥಾನ ಪಡೆದು, ಮುಂದಿನ ಎಲೆಕ್ಷನ್ ನಲ್ಲಿ ಶಾಸಕಿಯಾಗಿ ಸ್ಪರ್ಧಿಸಬೇಕು ಎನ್ನುವುದು ಬಾಲಯ್ಯ ಅವರ ಪ್ಲಾನ್. ಆದರೆ, ಇದರ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನು ಓದಿ..Film News: ತಾರಕರತ್ನ ಮನೆಯಲ್ಲಿ ತಲ್ಲಣ: ಒಂದೇ ವಾರಕ್ಕೆ ಆಸ್ತಿಗಾಗಿ ಏನೆಲ್ಲಾ ನಡೆದು ಹೋಗಿದೆ ಗೊತ್ತೇ? ಆಸ್ತಿ ಯಾರ ಪಾಲಿಗೆ ಗೊತ್ತೇ? ಹೆಂಡತಿ ಕಣ್ಣೀರು

Leave A Reply

Your email address will not be published.