Saptami Gowda: ಮಾಲ್ಡೀವ್ಸ್ ಗೆ ಹಾರಿದ ಸಪ್ತಮಿ ಗೌಡ: ತಾರೆಯರು ಬ್ರೇಕ್ ಸಿಕ್ಕ ತಕ್ಷಣ ಇದೆ ಜಾಗಕ್ಕೆ ಟ್ರಿಪ್ ಹೋಗುವುದು ಯಾಕೆ ಗೊತ್ತೇ??
Saptami Gowda: ಕಾಂತಾರ ಸಿನಿಮಾದ ಲೀಲಾ ನಟಿ ಸಪ್ತಮಿ ಗೌಡ ಅವರು ಈಗ ಕಾಂತಾರ ಸಕ್ಸಸ್ ಎಂಜಾಯ್ ಮಾಡುವುದರ ಜೊತೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸಪ್ತಮಿ ಗೌಡ ಅವರು ಕಾಳಿ ಸಿನಿಮಾದಲ್ಲಿ ನಟಿಸಲಿದ್ದು, ಬಾಲಿವುಡ್ ನ ಖ್ಯಾತ ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ಇದರ ನಡುವೆ ಈಗ ಬಿಡುವು ಮಾಡಿಕೊಂಡು ಪ್ರವಾಸಕ್ಕಾಗಿ ಮಾಲ್ಡಿವ್ಸ್ ಗೆ ಹಾರಿದ್ದಾರೆ ಸಪ್ತಮಿ ಗೌಡ. ಇವರ ಮಾಲ್ಡಿವ್ಸ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸಾಮಾನ್ಯವಾಗಿ ಮಾಲ್ಡಿವ್ಸ್ ಗೆ ಹೋಗುವ ಸೆಲೆಬ್ರಿಟಿಗಳು ಬಿಕಿನಿ, ಶಾರ್ಟ್ ಡ್ರೆಸ್ ಧರಿಸಿ ಫೋಟೋಗೆ ಪೋಸ್ ಕೊಟ್ಟರೆ, ಸಪ್ತಮಿ ಅವರು ಸೀರೆ ಧರಿಸಿ ಪೋಸ್ ಕೊಟ್ಟಿದ್ದು, ಹುಡುಗರ ಹೃದಯ ಕದ್ಧಿದ್ದಾರೆ. ಅಷ್ಟೇ ಅಲ್ಲದೆ, ಸಪ್ತಮಿ ಗೌಡ ಅವರು ಗೌನ್ ಧರಿಸಿ, ಶಾರ್ಟ್ ಡ್ರೆಸ್ ಕೂಡ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ವಿವಿಧವಾಗಿ ಕಮೆಂಟ್ಸ್ ಬರೆಯುತ್ತಿದ್ದಾರೆ. ಮಾಲ್ಡಿವ್ಸ್ ಗೆ ಸ್ಯಾಂಡಲ್ ವುಡ್ ನ ಹಲವು ತಾರೆಯರು ಪ್ರವಾಸಕ್ಕೆ ಹೋಗಿದ್ದಾರೆ. ಮೊದಲಿಗೆ ಹೆಚ್ಚಾಗಿ ಬಾಲಿವುಡ್ ತಾರೆಯರು ಮಾಲ್ಡಿವ್ಸ್ ಗೆ ಹೋಗುತ್ತಿದ್ದರು. ಇದನ್ನು ಓದಿ..Kannada News: ಪ್ರೀತಿ ಮಾಡಿ ಮದುವೆಯಾಗಿದ್ದ ನಯನತಾರ ಜೀವನದಲ್ಲಿ ಬಿರುಕು. ಏನಾಗಿದೆ ಗೊತ್ತೇ? ಅಂದಿನಿಂದ ಒಟ್ಟಿಗೆ….
ಆದರೆ ಈಗ ಅವರಿಗಿಂತ ಹೆಚ್ಚಾಗಿ ಸ್ಯಾಂಡಲ್ ವುಡ್ ತಾರೆಯರೆ ಹೋಗಿ ಬರುತ್ತಿದ್ದಾರೆ. ನಟ ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬ, ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್, ಶಾನ್ವಿ ಶ್ರೀವಾತ್ಸವ್, ಇತ್ತೀಚೆಗೆ ನಟಿ ಶ್ರುತಿ ಮತ್ತು ಅವರ ಮಗಳು ಮಾಲ್ಡಿವ್ಸ್ ಗೆ ಹೋಗಿ ಎಂಜಾಯ್ ಮಾಡಿ ಬಂದಿದ್ದರು. ಎಲ್ಲಾ ಕಲಾವಿದರು ಮಾಲ್ಡಿವ್ಸ್ ಗೆ ಹೋಗುತ್ತಿರುವುದು ಯಾಕೆ ಎಂದು ಈಗ ಕುತೂಹಲ ಶುರುವಾಗಿದೆ. ಅಸಲಿ ವಿಚಾರ ಏನು ಎಂದರೆ, ಕೋವಿಡ್ ನಂತರ ಮಾಲ್ಡಿವ್ಸ್ ಗೆ ಪ್ರವಾಸ ಹೋಗುವವರ ಸಂಖ್ಯೆ ಕಡಿಮೆ ಆಗಿತ್ತು, ಹಾಗಾಗಿ ಮಾಲ್ಡಿವ್ಸ್ ನ ಐಷಾರಾಮಿ ರೆಸಾರ್ಟ್ ಗಳು ಬಾಲಿವುಡ್ ಕಲಾವಿದರಿಗೆ ಸ್ಪಾನ್ಸರ್ ನೀಡಿ ಕರೆಸಿಕೊಳ್ಳುತ್ತಿತ್ತು, ಅವರು ಪೋಟೋ ಕ್ಲಿಕ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಾಕಿದರೆ, ಹೆಚ್ಚಿನ ಜನರು ಬರುತ್ತಾರೆ ಎನ್ನುವ ಪ್ಲಾನ್ ಇದಾಗಿದ್ದು, ಈ ಕಾರಣಕ್ಕೆ ಎಲ್ಲಾ ಸೆಲೆಬ್ರಿಟಿಗಳು ಮಾಲ್ಡಿವ್ಸ್ ಗೆ ಹೋಗಿಬರುತ್ತಿದ್ದಾರೆ. ಇದನ್ನು ಓದಿ..Kannada News: ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋದ ಬಾಲಯ್ಯ: ತರಕಾರತ್ನ ಪತ್ನಿಗಾಗಿ ಪ್ರಮುಖ ಜವಾಬ್ದಾರಿ ನೀಡಲು ನಿರ್ಧಾರ. ಏನು ಗೊತ್ತೇ??
Comments are closed.