Neer Dose Karnataka
Take a fresh look at your lifestyle.

Film News: 100 ಸಿನಿಮಾದಲ್ಲಿ ನಟಿಸಿದ್ದರೂ ಡಾ. ರಾಜಕುಮಾರ್ ಅವರಿಗೆ ಸಿಕ್ಕಿದ ಸಂಭಾವನೆ ಎಷ್ಟು ಗೊತ್ತಾ?? ಇದು ಅಣ್ಣಾವ್ರ ನೈಜ ಮುಖ.

Film News: ಕನ್ನಡ ಕರ್ನಾಟಕ ಎಂದ ತಕ್ಷಣವೇ ನೆನಪಿಗೆ ಬರುವ ಮೊದಲ ಹೆಸರು ಡಾ.ರಾಜ್ ಕುಮಾರ್. ಅಣ್ಣಾವ್ರು ಅಭಿಮಾನಿಗಳ ಆರಾಧ್ಯದೈವ, ಇವರು ಕಲಾ ತಪಸ್ವಿ ಎಂದು ಎಲ್ಲಾ ಅಭಿಮಾನಿಗಳು ಆರಾಧಿಸುತ್ತಾರೆ. ಇವರ ಸರಳತೆ ವ್ಯಕ್ತಿತ್ವ ಇದೆಲ್ಲದರ ಬಗ್ಗೆ ಎಷ್ಟೇ ಹೇಳಿದರು ಕಡಿಮೆಯೇ. ಮೇರು ನಟ, ದೇಶದ ಶ್ರೇಷ್ಠ ವ್ಯಕ್ತಿ ಎಂದು ಹೆಸರು ಪಡೆದಿದ್ದರು ಕೂಡ, ಮಗುವಿನಂತಹ ಸರಳತೆಯ ವ್ಯಕ್ತಿತ್ವ ಅವರದ್ದು, ತಾವು ಒಬ್ಬ ದೊಡ್ಡ ಸ್ಟಾರ್ ಎನ್ನುವ ಹಾಗೆ ಎಂದಿಗೂ ನಡೆದುಕೊಂಡವರಲ್ಲ ಡಾ.ರಾಜ್ ಕುಮಾರ್. ಇಂತಹ ವ್ಯಕ್ತಿತ್ವ ಇರುವ ಅಣ್ಣಾವ್ರು 100 ಸಿನಿಮಾ ಆದಾಗ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಡಾ.ರಾಜ್ ಕುಮಾರ್ ಅವರು ನಾಟಕದ ಬ್ಯಾಗ್ರೌಂಡ್ ಇಂದ ಬಂದವರು, ಇವರು ನಟಿಸಿದ ಮೊದಲ ಸಿನಿಮಾ ಬೇಡರ ಕಣ್ಣಪ್ಪ. ಅಣ್ಣಾವ್ರಿಗೆ ಯಾವುದೇ ರೀತಿಯ ಪಾತ್ರ ಕೊಡಲಿ ನಿರರ್ಗಳವಾಗಿ ಅಭಿನಯಿಸುತ್ತಿದ್ದರು, ಪಾತ್ರದ ಪರಕಾಯ ಪ್ರವೇಶ ಮಾಡುತ್ತಿದ್ದರು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಆಧ್ಯಾತ್ಮಿಕ ಹೀಗೆ ಯಾವುದೇ ರೀತಿಯ ಪಾತ್ರವೇ ಆಗಿದ್ದರು, ಅಣ್ಣಾವ್ರ ಅಭಿನಯ ನೋಡಿ ಸಿನಿಪ್ರಿಯರು ಫಿದಾ ಆಗಿರುತ್ತಿದ್ದರು. ಅಣ್ಣಾವ್ರು ಆಯ್ಕೆ ಮಾಡಿಕೊಳ್ಳುತ್ತಿದ್ದ ಸಿನಿಮಾಗಳು ಮತ್ತು ಪಾತ್ರಗಳು ಅಷ್ಟೇ ಅದ್ಭುತವಾಗಿ ಇರುತ್ತಿದ್ದವು. ಇದನ್ನು ಓದಿ..Saptami Gowda: ಮಾಲ್ಡೀವ್ಸ್ ಗೆ ಹಾರಿದ ಸಪ್ತಮಿ ಗೌಡ: ತಾರೆಯರು ಬ್ರೇಕ್ ಸಿಕ್ಕ ತಕ್ಷಣ ಇದೆ ಜಾಗಕ್ಕೆ ಟ್ರಿಪ್ ಹೋಗುವುದು ಯಾಕೆ ಗೊತ್ತೇ??

ದೇಶದ ಖ್ಯಾತ ನಿರ್ದೇಶಕರು ಮತ್ತು ನಿರ್ಮಾಪಕರು ಇವರ ಜೊತೆಗೆ ಕೆಲಸ ಮಾಡಬೇಕು ಎಂದು ಬಯಸಿದ್ದರು. ಅಭಿಮಾನಿಗಳನ್ನು ದೇವರು ಎಂದು ಕರೆದ ಯೋಗಿ ಅಣ್ಣಾವ್ರು. ಶ್ರೇಷ್ಠ ನಟ ಡಾ.ರಾಜ್ ಕುಮಾರ್ ಅವರು ತಮ್ಮ ದೀರ್ಘ ಕಾಲದ ಕೆರಿಯರ್ ನಲ್ಲಿ 200 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಒಂದೊಂದು ಸಿನಿಮಾಗಳು ಕೂಡ ಬಿಗ್ ಹಿಟ್ ಆಗುತ್ತಿದ್ದವು. ಅಣ್ಣಾವ್ರು ಯಶಸ್ಸಿನ ಉತ್ತುಂಗದಲ್ಲಿದ್ದು, ಕೆರಿಯರ್ ನಲ್ಲಿ 100 ಸಿನಿಮಾಗಳನ್ನು ಪೂರೈಸಿದ ನಂತರವೂ ಅವರು ಪಡೆಯುತ್ತಿದ್ದ ಸಂಭಾವನೆ ಒಂದು ಸಿನಿಮಾಗೆ 25000 ರೂಪಾಯಿಗಳು, ಅಣ್ಣಾವ್ರು ಇಷ್ಟು ಕಡಿಮೆ ಸಂಭಾವನೆ ಪಡೆಯುತ್ತಿದ್ರ ಎಂದು ನಿಮಗೆ ಅನ್ನಿಸುವುದು ಖಂಡಿತ. ಇದನ್ನು ತಿಳಿದರೆ ಅವರ ವ್ಯಕ್ತಿತ್ವ ಗೊತ್ತಾಗುತ್ತದೆ, ಅಣ್ಣಾವ್ರಿಗೆ ಹಣಕ್ಕಿಂತ ಪಾತ್ರ ಮುಖ್ಯವಾಗಿ ಇರುತ್ತಿತ್ತು ಎಂದು ಅರಿವಾಗುತ್ತದೆ. ಇದನ್ನು ಓದಿ..Kannada News: ತಾರಿಣಿಗೆ ಸಹಾಯ ಮಾಡಲು ಬಂದಿರುವ ರೂಪೇಶ್ ಶೆಟ್ಟಿ, ಒಂದು ಎಪಿಸೋಡ್ ಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??

Comments are closed.