Kannada News: ಪ್ರತಿ ದಿನಾನೂ ಗಂಡ ತಡವಾಗಿ ಬರುತ್ತಿದ್ದ, ಅನುಮಾನ ಬಂದು ಹಿಂಬಾಲಿಸಿದ ಪತ್ನಿ ಕೊನೆಗೆ ಸತ್ಯ ಗೊತ್ತಾಗಿ ಮಾಡಿದ್ದೇನು ಗೊತ್ತೇ??
Kannada News: ಮುಂಬೈ ಮಹಾನಗರದಲ್ಲಿ ಸುಷ್ಮಾ ಮತ್ತು ರಾಜೇಶ್ ಶುಕ್ಲ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಪರಿಚಯವಾಗಿ ಪ್ರೀತಿಸುವುದಕ್ಕೆ ಶುರು ಮಾಡಿದರು. ಈ ಜೋಡಿ ಬೇರೆ ಬೇರೆ ಜನರಾಗಿದ್ದ ಕಾರಣ ಮದುವೆಗೆ ಮನೆಯವರು ಒಪ್ಪಲಿಲ್ಲ, ಆಗ ಇಬ್ಬರು ಮದುವೆಯಾಗಿ ಹೊಸ ಜೀವನ ಶುರು ಮಾಡಿದರು. ಒಬ್ಬರನ್ನೊಬ್ಬರು ಪ್ರೀತಿಸುತ್ತ, ಹೊಂದಾಣಿಕೆಯಿಂದ ಇದ್ದರು. ಈ ಜೋಡಿಗೆ ಮದುವೆಯಾದ ಒಂದು ವರ್ಷದ ಒಳಗೆ ಸುಷ್ಮಾ ಗರ್ಭಿಣಿಯಾಗಿ, ತಾಯಿಯ ಮನೆಗೆ ಡೆಲಿವರಿಗೆ ಹೋದಳು, ಈ ದಂಪತಿಗೆ ಮುದ್ದಾದ ಹೆಣ್ಣುಮಗು ಜನಿಸಿತು. ರಾಜೇಶ್ ಗೆ ಮಗಳನ್ನು ನೋಡಿ ತುಂಬಾ ಸಂತೋಷವಾಗಿತ್ತು. ತಾಯಿ ಮನೆಯಲ್ಲಿ ಆರೈಕೆ ಮಾಡಿಸಿಕೊಂಡ ನಂತರ ಸುಷ್ಮಾ ಗಂಡನ ಮನೆಗೆ ಬಂದಳು.
ಸುಷ್ಮಾ ಮನೆಗೆ ಬಂದ ನಂತರ, ಮೊದಲಿನ ಹಾಗೆ ಗಂಡ ಸರಿಯಾದ ಸಮಯಕ್ಕೆ ಮನೆಗೆ ಬರುತ್ತಿರಲಿಲ್ಲ, 12 ಗಂಟೆ ಮಧ್ಯರಾತ್ರಿ ಹೊತ್ತಿಗೆ ಬರುತ್ತಿದ್ದ. ಇದರಿಂದ ಸುಶ್ಮಾಗೆ ಅನುಮಾನ ಶುರುವಾಯಿತು, ಗಂಡನಿಗೆ ತನ್ನ ಮೇಲೆ ಬೇಸರ ಆಗಿದ್ಯಾ, ಬೇರೆ ಹೆಣ್ಣಿನ ಸಂಬಂಧ ಶುರುವಾಗಿದ್ಯಾ, ಮಗಳು ಹುಟ್ಟಿದ್ದಕ್ಕೆ ಬೇಜಾರಾಗಿದ್ಯಾ ಎಂದು ಅನ್ನಿಸಿ, ಒಂದು ವಾರ ಕಳೆದ ನಂತರ ಗಂಡನಿಗೆ ಇದೇ ಮಾತನ್ನು ಕೇಳಿದರು. ಆದರೆ ಆಕೆಯ ಗಂಡ ಹಾಗೆಲ್ಲಾ ಏನಿಲ್ಲ ನೀನು ಹೇಗೆ ಇದ್ದರು ನನಗೆ ಇಷ್ಟ ಎಂದು ಹೇಳುತ್ತಾನೆ. ಬಳಿಕ ಸೋಮವಾರದ ನಂತರ ಗಂಡ ಮತ್ತೆ ತಡವಾಗಿ ಮನೆಗೆ ಬರೋದಕ್ಕೆ ಶುರು ಮಾಡುತ್ತಾನೆ. ಸುಶ್ಮಾಗೆ ಅನುಮಾನ ಹೆಚ್ಚಾಗಿ ಗಂಡ ಕೆಲಸ ಮಾಡುವ ಗಾರ್ಮೆಂಟ್ಸ್ ಗೆ ಮಗು ಜೊತೆಗೆ ಹೋಗಿ, ಗೊತ್ತಾಗದ ಹಾಗೆ ನಿಂತಿದ್ದಳು. ಇದನ್ನು ಓದಿ..Kannada Story: ನೀವು ಎಷ್ಟೇ ಕೋಟಿ ಖರ್ಚು ಮಾಡಿದರೂ, ನಿಮ್ಮ ಹೆಂಡತಿಯನ್ನು ಈ 5 ವಿಷಯಗಳಲ್ಲಿ ತೃಪ್ತಿ ಪಡಿಸಲು ಸಾಧ್ಯವೇ ಇಲ್ಲ. ಯಾವ್ಯಾವು ಗೊತ್ತೇ??
ಗಂಡ ಹೊರಬಂದು ಬಸ್ ಹತ್ತಿಕೊಂಡು ಹೋದ, ಸುಷ್ಮಾ ಕೂಡ ಅದೇ ಬಸ್ ನಲ್ಲಿ ಹೋದಳು, ಗಂಡ ಬಾರ್ ಮುಂದೆ ಇಳಿದಾಗ, ಆಕೆಗೆ ಶಾಕ್ ಆಗಿ, ಗಂಡ ಕುಡಿಯೋದಕ್ಕೆ ಶುರು ಮಾಡಿಕೊಂಡಿದ್ದಾನ ಎಂದು ಒಳಗೆ ಹೋಗಿ ನೋಡಿದರೆ ಆಕೆಗೆ ಶಾಕ್ ಆಗುತ್ತದೆ. ಅಲ್ಲಿ ಆಕೆಯ ಗಂಡ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಅದನ್ನು ನೋಡಿ ಆಕೆಗೆ ಶಾಕ್ ಆಗುತ್ತದೆ, ಗಂಡನ ಬಗ್ಗೆ ತಪ್ಪು ತಿಳಿದುಕೊಂಡೆ ಎಂದು ಬೇಸರ ಮಾಡಿಕೊಳ್ಳುತ್ತಾಳೆ, ಆಗ ರಾಜೇಶ್ ಹೆಂಡತಿಯನ್ನು ನೋಡಿ, ಹೀಗೆ ಪುಟ್ಟ ಮಗು ಜೊತೆ ಬಂದಿದ್ಯಾ ಎಂದು ಹೇಳಿ, ಆಕೆಯನ್ನು ಕೂರಿಸುತ್ತಾನೆ. ಸುಶ್ಮಾ ಇಲ್ಲಿ ಏನಾಗ್ತಿದೆ, ಯಾಕೆ ಈ ಕೆಲಸ ಮಾಡ್ತಿದ್ದೀರಾ ಎಂದು ಕೇಳಿದಾಗ ಮೊದಲು ರಾಜೇಶ್ ಏನನ್ನು ಹೇಳುವುದಿಲ್ಲ, ಸುಷ್ಮಾ ಒತ್ತಾಯ ಮಾಡಿ ಕೇಳಿದಾಗ ಹೇಳುತ್ತಾನೆ.
ಸುಷ್ಮಾ ಡೆಲಿವರಿಗಾಗಿ ಹೋಗಿದ್ದಾಗ, ರಾಜೇಶ್ ಎದೆ ನೋವು ಕಾಣಿಸಿಕೊಂಡು, ಆಸ್ಪತ್ರೆಗೆ ಹೋದಾಗ ಕಾರ್ಡಿಯೋವ್ಯಾಸ್ಕ್ಯುಲರ್ ಖಾಯಿಲೆ ಎಂದು ಗೊತ್ತಾಗುತ್ತದೆ, ಆತ ಎಷ್ಟು ದಿನ ಬದುಕುತ್ತಾನೋ ಎಂದು ಕೂಡ ಗೊತ್ತಾಗುವುದಿಲ್ಲ. ಇದನ್ನು ಕೇಳಿ ಸುಷ್ಮಾ ಶಾಕ್ ಆಗುತ್ತಾಳೆ, ಈ ಕಾರಣಕ್ಕೆ ತಾನು ಹೋದಮೇಲೆ ಹೆಂಡತಿ ಮಕ್ಕಳಿಗೆ ಕಷ್ಟ ಆಗಬಾರದು ಎಂದು, ಹಣ ಉಳಿಸಿ ಅವರಿಗೆ ಒಂದು ಮನೆ, ಮಗಳ ವಿದ್ಯಾಭ್ಯಾಸಕ್ಕೆ ಹಣ, ಮತ್ತು ಹೆಂಡತಿ ಕೆಲಸಕ್ಕೆ ವ್ಯವಸ್ಥೆ ಮಾಡಬೇಕು ಎಂದು ಹೀಗೆ ಮಾಡುತ್ತಿದ್ದ. ಈ ವಿಷಯ ಗೊತ್ತಾದ ನಂತರ ಸುಷ್ಮಾ ಕೂಡ ಬೇರೆ ಡಾಕ್ಟರ್ ಗಳ ಬಳಿ ವಿಚಾರಿಸಿದಾಗ, ಈ ಖಾಯಿಲೆ ಗುಣ ಆಗುವುದಿಲ್ಲ ಎಂದು ಹೇಳುತ್ತಾರೆ. ಕೊನೆಗೆ ರಾಜೇಶ್ ಮೂರ್ನಾಲ್ಕು ವರ್ಷಗಳ ನಂತರ ವಿಧಿವಶನಾಗುತ್ತಾನೆ. ಆದರೆ ರಾಜೇಶ್ ಕಣ್ಣುಮುಚ್ಚುವ ಮೊದಲು ಹೆಂಡತಿ ಮಕ್ಕಳ ಜೀವನಕ್ಕೆ ತೊಂದರೆ ಆಗದ ಹಾಗೆ ಎಲ್ಲವನ್ನು ವ್ಯವಸ್ಥೆ ಮಾಡಿರುತ್ತಾನೆ. ಈ ನೈಜ ಘಟನೆ ಎಂಥವರ ಕಣ್ಣಲ್ಲಿ ಆದರೂ ನೀರು ತರಿಸುವುದು ಖಂಡಿತ. ಇದನ್ನು ಓದಿ..Kannada Story: ಹೆಂಡತಿಗೆ ಕಬ್ಬಡಿ ಆಡೋಕೆ ಇಷ್ಟ ಇರಲಿಲ್ಲ, ಆದರೆ ಪತಿಗೆ ಆಸೆ ತೀರಲಿಲ್ಲ. ಅದಕ್ಕಾಗಿ ಹೆಂಡತಿಗೆ ಏನು ಐನಾತಿ ಗಂಡ ಏನು ಮಾಡಿದ್ದಾನೆ ಗೊತ್ತೇ??
Comments are closed.