Kabzaa: ಕಬ್ಜ ಸಿನಿಮಾದಲ್ಲಿ ಜಸ್ಟ್ ನಿಮಿಷಗಳ ಕಾಲ ನಟನೆ ಮಾಡಲು, ಶಿವಣ್ಣ ಪಡೆದ ಸಂಭಾವನೆ ಕೇಳಿದರೆ, ಮೈಯೆಲ್ಲಾ ಜುಮ್ ಅನ್ನುತ್ತದೆ. ಎಷ್ಟು ಗೊತ್ತೇ??
Kabzaa: ಕನ್ನಡದ ಬಹುನಿರೀಕ್ಷಿತ ಮುಂದಿನ ಸಿನಿಮಾ ಕಬ್ಜ. ಈ ಸಿನಿಮಾಗಾಗಿ ಅಭಿಮಾನಿಗಳು ಬಹಳ ಹಿಂದಿನಿಂದಲೂ ಕಾಯುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅವರು ಈ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದು, ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಕಬ್ಜ ಸಿನಿಮಾ ತೆರೆಕಾಣುತ್ತಿದೆ. ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆ ಆಗಿದ್ದು, ಸಿನಿಮಾ ಮೇಲಿದ್ದ ನಿರೀಕ್ಷೆಯನ್ನು ಟ್ರೈಲರ್ ದುಪ್ಪಟ್ಟು ಮಾಡಿದೆ.
ಕಬ್ಬ ಟ್ರೈಲರ್ ನೋಡಿದರೆ, ಕೆಜಿಎಫ್ ಮಟ್ಟಕ್ಕೆ ಅಥವ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಏನನ್ನೋ ಮಾಡಿದ್ದಾರೆ ನಿರ್ದೇಶಕ ಆರ್.ಚಂದ್ರು ಎನ್ನುವುದು ಗೊತ್ತಾಗಿದೆ. ಸಿನಿಮಾದ ಬಿಜಿಎಂ ದೊಡ್ಡ ಪ್ಲಸ್ ಪಾಯಿಂಟ್ ಆಗಿದ್ದು, ಉಪೇಂದ್ರ ಅವರನ್ನು ಮತ್ತು ಸುದೀಪ್.ಅವರನ್ನು ವಿಭಿನ್ನವಾಗಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಯಾ ಸರನ್ ಅವರು ನಟಿಸಿದ್ದಾರೆ. ಕಬ್ಜ ಸಿನಿಮಾದಲ್ಲಿ ಉಪೇಂದ್ರ ಅವರು ಮತ್ತು ಸುದೀಪ್ ಅವರು ಮಾತ್ರವಲ್ಲದೆ ಕನ್ನಡದ ಮತ್ತೊಬ್ಬ ಸ್ಟಾರ್ ಹೀರೋ ನಟಿಸಿದ್ದಾರೆ. ಅವರು ಮತ್ಯಾರು ಅಲ್ಲ, ಎಲ್ಲರ ಮೆಚ್ಚಿನ ಎವರ್ ಯಂಗ್ ಅಂಡ್ ಎನರ್ಜಿಟಿಕ್ ಶಿವಣ್ಣ ಅವರು. ಇದನ್ನು ಓದಿ..Film News: ದಕ್ಷಿಣ ಭಾರತವನ್ನೇ ಶೇಕ್ ಶೇಕ್ ಮಾಡುತ್ತಿರುವ ಈ ಬಾಲಕಿ, ಈಗ ದೊಡ್ಡ ಬೆಣ್ಣೆಯಂತಹ ನಾಯಕಿ. ಯಾರು ಗೊತ್ತಾಯ್ತ?? ನಾವು ತಿಳಿಸುತ್ತೇವೆ ನೋಡಿ.
ಕಬ್ಜ ಸಿನಿಮಾದಲ್ಲಿ ಶಿವಣ್ಣ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದು, ಟ್ರೈಲರ್ ನಲ್ಲಿ ಶಿವಣ್ಣ ಅವರ ಪಾತ್ರದ ಬಗ್ಗೆ ಸಣ್ಣದಾದ ಹಿಂಟ್ ಒಂದನ್ನು ನೀಡಲಾಗಿದೆ. ಇನ್ನು ಅತಿಥಿ ಪಾತ್ರದಲ್ಲಿ ಶಿವಣ್ಣ ಅವರು ನಟಿಸಿದ್ದು ಆ ಪಾತ್ರಕ್ಕೆ ಶಿವಣ್ಣ ಅವರು ಪಡೆದುಕೊಂಡಿರುವ ಸಂಭಾವನೆ ಎಷ್ಟು ಎನ್ನುವ ಚರ್ಚೆ ಶುರುವಾಗಿದ್ದು, ಸಣ್ಣ ಅತಿಥಿ ಪಾತ್ರಕ್ಕೆ ಶಿವಣ್ಣ ಅವರು 2 ರಿಂದ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಮಾಹಿತಿಗಳ ಪ್ರಕಾರ ತಿಳಿದುಬಂದಿದೆ. ಒಟ್ಟಿನಲ್ಲಿ ಕನ್ನಡದ ಈ ಮೂವರು ಸ್ಟಾರ್ ಗಳನ್ನು ಒಂದೇ ಸಿನಿಮಾದಲ್ಲಿ ನೋಡೋದಕ್ಕೆ ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಇದನ್ನು ಓದಿ..Film News: ತಿಳಿಯದೇ ಅಂದು ಆ ತಪ್ಪು ಮಾಡಿಬಿಟ್ಟೆ ಎಂದು ಒಪ್ಪಿಕೊಡ ರಶ್ಮಿ; ಈಗ ಬಿಟ್ಟು ಬಿಟ್ಟಿದ್ದರಂತೆ. ಇದು ಸರೀನಾ??
Comments are closed.