Kannada News: ಪ್ರಭಾಸ್ ಜೊತೆಗಿನ ಲವ್ ಬಗ್ಗೆ ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಕೃತಿ ಸನೋನ್: ಇದ್ದದನ್ನು ಇದ್ದ ಹಾಗೆ ಹೇಳಿದ್ದೇನು ಗೊತ್ತೇ??
Kannada News: ನಟ ಪ್ರಭಾಸ್ ಅವರಿಗೆ 40 ವರ್ಷ ದಾಟಿದ್ದರು ಅವರು ಇನ್ನು ಮದುವೆಯಾಗದೆ ಇರುವ ಕಾರಣದಿಂದ, ಅವರ ಪರ್ಸನಲ್ ಲೈಫ್ ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿಬರುತ್ತವೆ. ಬಾಲಿವುಡ್ ನಟಿ ಕೃತಿ ಸನೊನ್ ಮತ್ತು ನಟ ಪ್ರಭಾಸ್ ಅವರು ಜೊತೆಯಾಗಿ ಆದಿಪುರುಷ್ ಸಿನಿಮಾದಲ್ಲಿ ನಟಿಸಿ, ಇವರ ಕೆಲವು ಫೋಟೋಗಳು ಹೊರಬಂದ ನಂತರ ಪ್ರಭಾಸ್ ಮತ್ತು ಕೃತಿ ಸನೊನ್ ನಡುವೆ ಏನೋ ನಡೆಯುತ್ತಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಇವರಿಬ್ಬರು ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಕಾರ್ಯಕ್ರಮ ಒಂದರಲ್ಲಿ ನಟ ವರುಣ್ ಧವನ್ ಅವರು ಕೃತಿ ಸನೊನ್ ಅವರ ಹಾರ್ಟ್ ನಲ್ಲಿ ಒಬ್ಬ ಹೀರೋ ಇದ್ದಾನೆ ಎಂದಿದ್ದರು, ಈ ಹಿಂಟ್ ನಂತರ ಅದು ಪ್ರಭಾಸ್ ಅವರೇ ಇರಬಹುದು ಎನ್ನಲಾಗುತ್ತಿದ್ದು, ಇವರಿಬ್ಬರ ಎಂಗೇಜ್ಮೆಂಟ್ ಆದಷ್ಟು ಬೇಗ ನಡೆಯುತ್ತದೆ ಎಂದು ಹೇಳಲಾಗುತ್ತಿದೆ.
ಇದುವರೆಗೂ ಈ ರೂಮರ್ ಗಳ ಬಗ್ಗೆ ಸೈಲೆಂಟ್ ಆಗಿದ್ದ ನಟಿ ಕೃತಿ ಸನೊನ್ ಅವರು ಇದೇ ಮೊದಲ ಬಾರಿಗೆ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂಟರ್ವ್ಯೂ ಒಂದರಲ್ಲಿ ಡೇಟಿಂಗ್ ರೂಮಎ ಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ರೂಮರ್ ಗಳಿಗೆ ಕಾರಣ ವರುಣ್ ಧವನ್ ಅವರಂತೆ. ಒಂದು ಸಾರಿ ವರುಣ್ ಅವರಿಗೆ ಬೋರ್ ಆದಾಗ, ನಿನ್ನ ಬಗ್ಗೆ ಒಂದು ರೂಮರ್ ಹುಟ್ಟುಹಾಕುತ್ತೇನೆ, ನಿನ್ನ ಮನಸ್ಸಿನಲ್ಲಿ ಒಬ್ಬ ಹೀರೋ ಇದ್ದಾನೆ ಅಂತ ಹೇಳುತ್ತೇನೆ ಎಂದು ಹೇಳಿದರಂತೆ ವರುಣ್. ಅದಕ್ಕೆ ಕೃತಿ ಕೂಡ ಓಕೆ ಹೇಳಿದ್ರಂತೆ, ಅದೇ ರೀತಿ ವರುಣ್ ಧವನ್ ಅವರು ಹೇಳಿದಾಗ, ಈ ರೀತಿಯ ಗಾಸಿಪ್ ದೇಶಾದ್ಯಂತ ಸುದ್ದಿಯಾಗಿದೆ. ಪ್ರಭಾಸ್ ಅವರ ಹೆಸರನ್ನು ಈ ಗಾಸಿಪ್ ಗೆ ಸೇರಿಸುತ್ತಾರೆ ಎಂದು ನಾನು ಊಹೆ ಕೂಡ ಮಾಡಿರಲಿಲ್ಲ ಎಂದು ಹೇಳಿದ್ದಾರೆ ಕೃತಿ ಸನೊನ್. ವರುಣ್ ಧವನ್ ಇಂದಾಗಿ ನಾನು ಪ್ರಭಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಇಡೀ ದೇಶದಲ್ಲಿ ವೈರಲ್ ಆಯಿತು ಎಂದಿದ್ದಾರೆ ಕೃತಿ. ಇದನ್ನು ಓದಿ..Kannada News: ವಿಲ್ಲನ್ ಆಗಿ ಬಾಲಿವುಡ್ ನಲ್ಲಿ ಮೈ ಜುಮ್ ಎನಿಸುವ ನಟಿಯನ್ನು ಕರೆತಂದ ಬಾಲಯ್ಯ: ಇವರನ್ನ ನೋಡೋಕೆ ಸಿನೆಮಾಗೆ ಓಡಿ ಹೋಗ್ತೀರಾ. ಯಾರು ಗೊತ್ತೇ?
ಪ್ರಭಾಸ್ ಗೆ ಕಾಲ್ ಮಾಡಿ ಆಗಿದ್ದೇನು ಎಂದು ಹೇಳಬೇಕು ಅಂದುಕೊಂಡು ಕಾಲ್ ಮಾಡಿದಾಗ, ವರುಣ್ ಯಾಕೆ ನಮ್ಮ ಬಗ್ಗೆ ಹಾಗೆ ಹೇಳಿದರು ಎಂದು ಪ್ರಭಾಸ್ ಅವರು ಕೇಳಿದ್ದು, ಅದಕ್ಕೆ ಕೃತಿ ಸನೊನ್ ಅವರು ತನಗೆ ಗೊತ್ತಿಲ್ಲ ಎಂದು ಹೇಳಿದರಂತೆ. ಈ ವಿಚಾರವನ್ನು ಇತ್ತೀಚೆಗೆ ನೀಡಿರುವ ಇಂಟರ್ವ್ಯೂನಲ್ಲಿ ಹೇಳಿದ್ದಾರೆ ಕೃತಿ ಸನೊನ್. ಈ ಗಾಸಿಪ್ ಇಂದಾಗಿ ಎಲ್ಲರು ವಿಶ್ ಮಾಡೋದಕ್ಕೆ ಶುರು ಮಾಡಿದ್ದು, ಹಾಗಾಗಿ ಈ ವಿಷಯಕ್ಕೆ ಫುಲ್ ಸ್ಟಾಪ್ ಇಡಬೇಕು ಎಂದು ಪ್ರತಿಕ್ರಿಯೆ ನೀಡಬೇಕಿದೆ ಎಂದಿದ್ದಾರೆ. ಕೃತಿ ಅವರು ಫೇಮಸ್ ಆಗೋದಕ್ಕೆ ಈ ರೀತಿ ಪ್ರಭಾಸ್ ಅವರ ಹೆಸರು ತೆಗೆದುಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದು.. ಪ್ರಭಾಸ್ ಅವರ ಅಭಿಮಾನಿಗಳು, ವರುಣ್ ಧವನ್ ಅವರು ಮಾಡಿರುವ ಕೆಲಸಕ್ಕೆ ಕೋಪ ಮಾಡಿಕೊಂಡಿದ್ದಾರೆ. ಇದನ್ನು ಓದಿ..Kannada News: ಎರಡನೇ ಮದುವೆಯಾದರೂ ಹನಿಮೂನ್ ಗಾಗಿ ಭರ್ಜರಿ ಪ್ಲಾನ್ ಮಾಡಿದ ಮನೋಜ್: ಪ್ಲಾನ್ ಏನು ಗೊತ್ತೇ??
Comments are closed.