Neer Dose Karnataka
Take a fresh look at your lifestyle.

Kannada Story: ಈ ಹುಡುಗಿಯನ್ನು ರಕ್ಷಿಸಲು ಹೋಗಿ ಪ್ರಾಣಾನೇ ಕೊಟ್ಟು ಬಿಟ್ಟ, ಆದರೆ ಈ ಹುಡುಗಿ ಆಮೇಲೆ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೆ?

Kannada Story: ಜೀವನದಲ್ಲಿ ಹಣ ಆಸ್ತಿಗಿಂತ ಮಾನವೀಯತೆ ದೊಡ್ಡದು ಎಂದು ಹಿರಿಯರು ಹೇಳಿದ್ದಾರೆ, ಆ ಮಾತು ಬಹಳ ಸತ್ಯ. ಕೆಲವೊಮ್ಮೆ ನಡೆಯುವ ಘಟನೆಗಳು ಇದು ನಿಜ ಎಂದು ಅನ್ನಿಸುವ ಹಾಗೆ ಮಾಡುತ್ತದೆ. ಇಂಥಹ ಘಟನೆ ಒಂದು ಭೋಜ್ ಪುರದಲ್ಲಿ ನಡೆದಿದೆ. ಯದುನಾಥ್ ಎನ್ನುವ ವ್ಯಕ್ತಿ ಭೋಜ್ ಪುರದ, ಬೆಟ್ಟ ನದಿಯ ಹತ್ತಿರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದನು. ಒಂದು ದಿನ ಅಲ್ಲಿಯೇ ಕೆಲಸ ಮಾಡುವಾಗ, ಇದ್ದಕ್ಕಿದ್ದ ಹಾಗೆ ಯಾರೋ ಕಿರುಚುವ ಶಬ್ಧ ಬಂದಿತು, ತಿರುಗಿ ನೋಡಿದಾಗ, ಏನು ಇರಲಿಲ್ಲ. ಮತ್ತೆ ಕೆಲಸ ಮಾಡು ಶುರು ಮಾಡಿದನು, ಆಗ ಮತ್ತೆ ಯಾರೋ ಕಿರುಚುವ ಶಬ್ಧ ಕೇಳಿಬಂತು. ಆಗ ಯದುನಾಥ್ ಮತ್ತೆ ನೋಡಿದಾಗ, ಒಂದು ಹುಡುಗಿ ನೀರಿನಲ್ಲಿ ಮುಳುಗುತ್ತಿರುವುದು ಕಾಣಿಸಿತು..

ಯದುನಾಥ್ ಗೆ ಸ್ವಲ್ಪ ವಯಸ್ಸಾಗಿತ್ತು, ವೀಕ್ ಆಗಿದ್ದ ಹಾಗಿದ್ದರೂ ತಕ್ಷಣವೇ ಅಲ್ಲಿಗೆ ಆಕೆಯನ್ನು ಕಾಪಾಡಲು ನದಿಗೆ ಹಾರಿದ, ಪ್ರಯತ್ನದಲ್ಲಿ ಆಕೆಯನ್ನು ಉಳಿಸಿದನಾದರು, ಯದುನಾಥ್ ನೀರಿನ ಅಲೆಯ ರಭಸಕ್ಕೆ ಕೊಚ್ಚಿಹೋಗುತ್ತಿದ್ದ, ಆ ಸಮಯಕ್ಕೆ ಊರಿನ ಜನರು ಬಂದಿದ್ದ ಕಾರಣ, ಯಧುನಾಥನನ್ನು ದಡಕ್ಕೆ ಕರೆತಂದು, ಹುಡುಗಿ ಮತ್ತು ಯದುನಾಥ್ ಇಬ್ಬರನ್ನು ಕೂಡ ಆಸ್ಪತ್ರೆಗೆ ಕರೆದುಕೊಂಡು ಹೋದರು, ಆದರೆ ಯದುನಾಥ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯದುನಾಥ್ ಗೆ ಹೆಂಡತಿ ಮತ್ತು ಮಗ ಇದ್ದನು, ಯದುನಾಥ್ ಮಗನ ಹೆಸರು ರೋಹಿತ್ ವರ್ಮಾ. ಬಹಳ ಕಷ್ಟ ಇದ್ದರು ಕೂಡ ಮಗನನ್ನು ಓದಿಸುತ್ತಿದ್ದ. ಇನ್ನು ನದಿಯಲ್ಲಿ ಅಪಾಯದಲ್ಲಿದ್ದ ಹುಡುಗಿಯ ಹೆಸರು ಅಂಜಲಿ ತಿವಾರಿ, ಆಕೆ ಪಕ್ಕದ ಊರಿನವರಾದ ಅಶೋರ್ ತಿವಾರಿ ಅವರ ಮಗಳು. ಪಾಪ ಯದುನಾಥ್ ಗೆ ಹೀಗಾಯಿತು ಎಂದು ಆ ಊರಿನವರು ಅಂಜಲಿಯನ್ನು ದೂರುವುದಕ್ಕೆ ಶುರು ಮಾಡಿದರು. ಇದನ್ನು ಓದಿ..Kannada Story: ಮೊದಲನೇ ರಾತ್ರಿಯ ದಿನ ಇಡೀ ಊರು ಬಂದು ರೂಮಿನ ಹೊರಗಡೆ ಕುಳಿತುಕೊಂಡು ಕಾಯುತ್ತೆ, ಯಾಕೆ ಗೊತ್ತೇ? ಒಳಗಡೆ ಇರುವವರು ಏನು ಮಾಡಬೇಕು ಗೊತ್ತೇ??

ಅಂಜಲಿಯ ತಂದೆ ತಾಯಿ ಕೂಡ ಆ ಸಮಯಕ್ಕೆ ಅಲ್ಲಿಗೆ ಬಂದರು, ಅವರು ಕೂಡ ಯದುನಾಥ್ ಗೆ ಆಗಿದ್ದನ್ನು ನೋಡಿ ಕಣ್ಣೀರು ಹಾಕಿದರು. ಆ ಸಮಯದಲ್ಲಿ ಅಂಜಲಿ ಇಂಜಿನಿಯರಿಂಗ್ ಓದುತ್ತಿದ್ದಳು, ನಂತರ ಅವಳಿಗೆ ಬೆಂಗಳೂರಿನ ಟೆಕ್ಸ್ಟ್ರಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಸಿಕ್ಕಿ, ಆಕೆ 7 ವರ್ಷದ ನಂತರ ಯದುನಾಥ್ ಕುಟುಂಬ ನೋಡಲು ಬಂದಾಗ, ಅವರ ಹೆಂಡತಿ ಮತ್ತು ಮಗ ಬಹಳ ಕಷ್ಟದಲ್ಲಿರುವುದನ್ನು ನೋಡಿ, ಅವರಿಗಾಗಿ ಒಂದು ಮನೆಯನ್ನು ಖರೀದಿ ಮಾಡಿ ಕೊಟ್ಟಳು, ಅಷ್ಟೇ ಅಲ್ಲದೆ, ಅವರ ಮಗನನ್ನು ಚೆನ್ನಾಗಿ ಓದಿಸಿ, ಅವನಿಗೆ ಒಳ್ಳೆಯ ಕೆಲಸ ಸಿಗುವ ಹಾಗೆ ಮಾಡಿದಳು. ಈಗ ಅಂಜಲಿ ಕುಟುಂಬ ಯದುನಾಥ್ ಕುಟುಂಬ ಜೊತೆಯಾಗಿ ವಾಸ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ಈತನಷ್ಟು ಅದೃಷ್ಟವಂತ ಯಾರು ಇಲ್ಲ, ಒಂದೇ ಮನೆಯಲ್ಲಿ ಮೂವರು ಹೆಂಡತಿಯರು. ಹೇಗೆ ಬದುಕುತ್ತಿದ್ದಾನೆ ಗೊತ್ತೇ? ರಾಜಯೋಗ ಅಂದ್ರೆ ಇದೇನಾ??

Comments are closed.