Kannada News: ರಾಮ್ ಚರಣ್ ಪತ್ನಿ ಎಲ್ಲೇ ಹೋದರು ಅದೊಂದು ದೇವರ ವಿಗ್ರಹವನ್ನು ತೆಗೆದುಕೊಂಡು ಹೋಗುವುದು ಯಾಕೆ ಗೊತ್ತೇ? ಇದರ ಹಿಂದಿರುವ ಕತೆಯೇನು ಗೊತ್ತೇ??
Kannada News: ತೆಲುಗು ಚಿತ್ರರಂಗಕ್ಕೆ ನಟ ಚಿರಂಜೀವಿ ಅವರ ಮಗನಾಗಿ ಎಂಟ್ರಿ ಕೊಟ್ಟ ರಾಮ್ ಚರಣ್ ಅವರು ತಮ್ಮ ಪ್ರತಿಭೆಯಿಂದ ಇಂದು ಗ್ಲೋಬಲ್ ಸ್ಟಾರ್ ಆಗಿ ಹೆಸರು ಮಾಡಿದ್ದಾರೆ. ರಾಮ್ ಚರಣ್ ಅವರು ಉತ್ತಮ ನಟ ಒಳ್ಳೆಯ ಡ್ಯಾನ್ಸರ್ ಹಾಗೆಯೇ ಒಳ್ಳೆಯ ವ್ಯಕ್ತಿ ಕೂಡ ಹೌದು, ಹೀಗೆ ತಮ್ಮತನದಿಂದ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ರಾಜಮೌಳಿ ಅವರು ನಿರ್ದೇಶಿಸಿ, ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್ಟಿಆರ್ ಜೊತೆಯಾಗಿ ನಟಿಸಿದ ಆರ್.ಆರ್.ಆರ್ ಸಿನಿಮಾ ಯಾವುದೇ ಬ್ಯಾರಿಯರ್ ಇಲ್ಲದೆ ವಿಶ್ವಮಟ್ಟದಲ್ಲಿ ಸದ್ದು ಮಾಡಿತು, ಈ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಬಂದಿದೆ. ಈ ಮೂಲಕ ಚರಣ್ ಅವರು ಸಹ ಗ್ಲೋಬಲ್ ಸ್ಟಾರ್ ಆಗಿದ್ದಾರೆ. ಈ ನಡುವೆ ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಅವರ ಬಗ್ಗೆ ಒಂದು ಆಸಕ್ತಿಕರ ವಿಚಾರ ತಿಳಿದುಬಂದಿದೆ.
ರಾಮ್ ಚರಣ್ ಅವರಿಗೆ ದೈವಭಕ್ತಿ ಇದೆ ಎನ್ನುವುದು ಗೊತ್ತಿರುವ ವಿಚಾರ, ಹಲವು ಸಾರಿ ಅಯ್ಯಪ್ಪಸ್ವಾಮಿ ಮಾಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚರಣ್ ಅವರ ಪತ್ನಿ ಉಪಾಸನಾ ಅವರಿಗು ಕೂಡ ದೈವಭಕ್ತಿ ಹೆಚ್ಚು, ಇವರಿಬ್ಬರು ಕೂಡ ಹಲವು ಪೂಜೆ ಪುನಸ್ಕಾರಗಳು ಮಾಡುವುದು, ದೇವರಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಪಾಲ್ಗೊಳ್ಳುವುದನ್ನು ನಾವು ನೋಡಿದ್ದೇವೆ. ಟಾಲಿವುಡ್ ನಲ್ಲಿ ಎಲ್ಲರು ಇಷ್ಟಪಡುವ ಜೋಡಿಗಳಲ್ಲಿ ಇವರ ಜೋಡಿ ಕೂಡ ಒಂದು, ಈ ಜೋಡಿ ದೈವಭಕ್ತರಾಗಿರುವುದರಿಂದ ಇವರು ಎಲ್ಲಿಯೇ ಹೋದರು ಸಹ, ಒಂದು ಚಿಕ್ಕ ಗುಡಿಯನ್ನು ತಮ್ಮ ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತಾರೆ ಎನ್ನುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಚಾರ. ಇದನ್ನು ಓದಿ..Kannada News: ಪವಿತ್ರ ಲೋಕೇಶ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಸುಚೇಂದ್ರ: ಪವಿತ್ರ ಲೋಕೇಶ್ ಪ್ರೀತಿ ಮಾಡುವ ಸ್ಕೆಚ್ ಹಾಕಿದ್ದು ಯಾಕೆ ಅಂತೇ ಗೊತ್ತೇ??
ಹೌದು, ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಅವರು ಶ್ರೀರಾಮ ಮತ್ತು ಸೀತಾಮಾತೆಯ ವಿಗ್ರಹವನ್ನು ಎಲ್ಲಿಗೆ ಹೋದರು ತಮ್ಮ ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತಾರೆ, ಯಾವುದೇ ಮುಖ್ಯ ಕೆಲಸಕ್ಕೆ ಹೋಗುವ ಮೊದಲು, ಅವರಿಗೆ ಪೂಜೆ ಮಾಡಿ ಹೋಗುತ್ತಾರೆ. ಈ ಸಾರಿ ಆಸ್ಕರ್ ಅವಾರ್ಡ್ ಗೆ ಹೋಗುವ ಮೊದಲು ಕೂಡ ಹೋಟೆಲ್ ರೂಮ್ ನಲ್ಲಿ ಉಪಾಸನಾ ಅವರು ವಿಗ್ರಹವನ್ನಿಟ್ಟು ಒಂದು ಚಿಕ್ಕ ಗುಡಿಯ ರೀತಿ ಮಾಡಿದ್ದು, ಇಬ್ಬರು ಅದಕ್ಕೆ ಪೂಜೆ ಮಾಡಿ ಹೋಗಿದ್ದರಂತೆ. ಹೀಗೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಇಬ್ಬರಲ್ಲಿ ನಂಬಿಕೆ ಇದ್ದು, ಹಲವು ವರ್ಷಗಳಿಂದ ಇದನ್ನೇ ಪಾಲಿಸಿಕೊಂಡು ಬಂದಿದ್ದಾರೆ. ರಾಮ್ ಚರಣ್ ಅವರು ಸಹ ಈ ಕುರಿತು ಮಾತನಾಡಿ, ಬಹಳ ವರ್ಷಗಳಿಂದ ಈ ಅಭ್ಯಾಸ ಇದೆ, ಹೀಗೆ ಮಾಡುವುದರಿಂದ ಭಾರತದ ಜೊತೆಗೆ ತಮ ಸಂಸ್ಕೃತಿಯ ಜೊತೆಗೆ ಕನೆಕ್ಟ್ ಆಗುತ್ತೇವೆ ಎಂದು ಹೇಳಿದ್ದಾರೆ ರಾಮ್ ಚರಣ್. ಇದನ್ನು ಓದಿ..Film News: ಈ ವಯಸ್ಸಿನಲ್ಲಿಯೂ ಯಾರಿಗೂ ಕಮ್ಮಿ ಇಲ್ಲದಂತೆ ಗ್ಲಾಮರ್ ಶೋ ಕೊಟ್ಟ ರಾಕುಲ್: ನೋಡಿದರೆ ಹೃದಯ ಡುಂ ಡುಂ ಅನ್ನುತ್ತದೆ. ವಿಡಿಯೋ ಹೇಗಿದೆ ಗೊತ್ತೇ?
Comments are closed.