Neer Dose Karnataka
Take a fresh look at your lifestyle.

Film News: ಹುಚ್ಚ ಸಿನಿಮಾ ನೋಡಿ ಅಣ್ಣಾವ್ರು ಹೊಗಳಿದರು, ಆದರೆ ವಿಷ್ಣು ರವರು ನೇರವಾಗಿ ಸುದೀಪ್ ರವರಿಗೆ ಹೇಳಿದ್ದೇನು ಗೊತ್ತೇ??

Film News: ಕನ್ನಡ ಚಿತ್ರರಂಗದ ಮೇರು ನಟರು ಶ್ರೇಷ್ಠ ನಟರು ಎಂದು ಪಟ್ಟಿಮಾಡಿದರೆ ಮೊದಲ ಸ್ಥಾನದಲ್ಲಿ ಬರುವ ಹೆಸರುಗಳು ಡಾ.ವಿಷ್ಣುವರ್ಧನ್ ಹಾಗೂ ಡಾ.ರಾಜ್ ಕುಮಾರ್. ಇವರಿಬ್ಬದು ಎಷ್ಟು ಅದ್ಭುತವಾದ ಕಲಾವಿದರೋ, ಹಾಗೆಯೇ ಚಿತ್ರರಂಗಕ್ಕೆ ಬರುವ ಹೊಸಬರಿಗೂ ಪ್ರೋತ್ಸಾಹ ಕೊಟ್ಟು, ಸಪೋರ್ಟ್ ಮಾಡುತ್ತಿದ್ದರು. ಇವರಿಬ್ಬರು ಕೂಡ ಯಾವುದಾದರೂ ಸಿನಿಮಾ ನೋಡಿ ಇಷ್ಟವಾದರೆ ತಕ್ಷಣವೇ ಆ ಕಲಾವಿದರಿಗೆ ತಂಡಕ್ಕೆ ಫೋನ್ ಮಾಡಿ, ಅಥವಾ ಭೇಟಿ ಮಾಡಿ ಮೆಚ್ಚುಗೆ ತಿಳಿಸುತ್ತಿದ್ದರು. ಹೀಗೆ ಕಿಚ್ಚ ಸುದೀಪ್ ಅವರ ಹುಚ್ಚ ಸಿನಿಮಾ ಬಿಡುಗಡೆ ಆದಾಗ ಇವರಿಬ್ಬರು ಹೇಗೆ ಪ್ರತಿಕ್ರಿಯೆ ಕೊಟ್ಟಿದ್ದರು ಗೊತ್ತಾ?

ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಅವರು ಹೇಗೆ ಪ್ರತಿಕ್ರಿಯೆ ನೀಡಿದ್ದರು ಎನ್ನುವುದನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಹೇಳಿದ್ದರು. ಸುದೀಪ್ ಅವರಿಗೆ ಅಣ್ಣಾವ್ರ ಮೇಲೆ ಬಹಳ ಗೌರವ ಮತ್ತು ಪ್ರೀತಿ ಎರಡು ಇದೆ, ಸುದೀಪ್ ಅವರ ಹುಚ್ಚ ಸಿನಿಮಾ ನೋಡಿದ ಅಣ್ಣಾವ್ರು, ಸುದೀಪ್ ಅವರ ತಂದೆಯ ಹತ್ತಿರ ಮಾತನಾಡಿ, “ಎಂಥ ಮಗನನ್ನ ಹೆತ್ತಿದ್ದೀರಿ, ಅದೃಷ್ಟ ಮಾಡಿದ್ರಿ ಇಂಥಹ ಮಗನನ್ನ ಪಡೆಯೋದಕ್ಕೆ..” ಎಂದು ಹೇಳಿದ್ದರಂತೆ, ಆ ಸಮಯದಲ್ಲಿ ಅಣ್ಣಾವ್ರ ಕಣ್ಣಲ್ಲಿ ಹಾಗೂ ಸುದೀಪ್ ಅವರ ತಂದೆಯ ಕಣ್ಣಲ್ಲಿ ಇಬ್ಬರ ಕಣ್ಣಲ್ಲೂ ಆನಂದಬಾಷ್ಪ ಇತ್ತಂತೆ. ಹಾಗೆಯೇ ಸುದೀಪ್ ಅವರ ಸ್ವಾತಿಮುತ್ತು ಸಿನಿಮಾವನ್ನು ಕೂಡ ಅಣ್ಣಾವ್ರು ಮೆಚ್ಚಿಕೊಂಡಿದ್ದರಂತೆ. ಇದನ್ನು ಓದಿ..Kannada News: ಅಂದು ನಟನೆ ಬಿಟ್ಟು ಹಿಜಾಬ್ ಧರಿಸಿ ಮೌಲ್ವಿಯನ್ನು ಮದುವೆಯಾಗಿದ್ದ ನಟಿ ಈಗ ಹೇಗಿದ್ದಾರೆ ಗೊತ್ತೆ? ಎಂತಹ ಪರಿಸ್ಥಿತಿಗೆ ಬಂದಿದ್ದಾರೆ ಗೊತ್ತೇ??

ಇನ್ನು ವಿಷ್ಣುವರ್ಧನ್ ಅವರು ಕೂಡ ಸುದೀಪ್ ಅವರ ಕುಟುಂಬಕ್ಕೆ ಅಷ್ಟೇ ಆಪ್ತರು, ತಮ್ಮ ಸಿನಿಮಾವನ್ನು ವಿಷ್ಣುವರ್ಧನ್ ಅವರಿಗೆ ತೋರಿಸಬೇಕಿತ್ತು ಎನ್ನುವುದು ಸುದೀಪ್ ಅವರ ಆಸೆ ಆಗಿತ್ತು, ಹಾಗೆಯೇ ಹುಚ್ಚ ಸಿನಿಮಾ ತೋರಿಸಿದಾಗ, ವಿಷ್ಣುದಾದ ಅವರು ಸಿನಿಮಾ ನೋಡಿ, ಎದ್ದು ಹೋಗಿಬಿಟ್ಟರಂತೆ, ಒಂದು ಮಾತನ್ನು ಕೂಡ ಆಡಲಿಲ್ಲವಂತೆ, ಬಳಿಕ ವಿಷ್ಣುದಾದ ಅವರು ಸುದೀಪ್ ಅವರ ಬೆನ್ನಮೇಲೆ ಹೊಡೆದು, ಇಷ್ಟು ದಿನ ಎಲ್ಲಿದ್ದೆ, ಎಂಥ ಅದ್ಭುತವಾದ ನಟನೆ ಎಂದು ಹೇಳಿ, ನಿನಗೆ ಒಳ್ಳೆಯ ಭವಿಷ್ಯವಿದೆ, ಈ ಚಿತ್ರರಂಗ ನಿನ್ನನ್ನು ಚೆನ್ನಾಗಿ ಬಳಸಿಕೊಳ್ಳಲಿ, ನಿನ್ನಿಂದ ಚಿತ್ರರಂಗಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದರಂತೆ. ವಿಷ್ಣುವರ್ಧನ್ ಅವರು ಇರುತ್ತಿದ್ದೇ ಹಾಗೆ, ಶಾಲ್ ನಲ್ಲಿ ಸುತ್ತಿಕೊಂಡು ತಮಾಷೆ ಮಾಡುತ್ತಿದ್ದರು ಎಂದು ಸುದೀಪ್ ಅವರು ಹೇಳಿದ್ದಾರೆ. ಇದನ್ನು ಓದಿ..hagyalakshmi: ಪ್ರೇಕ್ಷಕರಿಗೆ ಶಾಕ್ ಮೇಲೆ ಶಾಕ್: ಲಕ್ಷ್ಮಿ ವಿಚಾರದಲ್ಲಿ ಉಲ್ಟಾ ಹೊಡೆದ ಕಾವೇರಿ: ಕೀರ್ತಿ ಹೇಳಿದ್ದು ಸತ್ಯ. ಪ್ರೇಕ್ಷಕರ ಲೆಕ್ಕಾಚಾರ ಉಲ್ಟಾ: ಏನಾಗಿದೆ ಗೊತ್ತೇ??

Comments are closed.