Cricket News: ತನ್ನ 175 ರನ್ ಗಳ ದಾಖಲೆಯನ್ನು ಮುರಿಯುವ ಆಟಗಾರರನ್ನು ಆಯ್ಕೆ ಮಾಡಿದ ಗೇಲ್: ನಿಮ್ಮ ಆಯ್ಕೆ ಸರಿ ಇಲ್ಲ ಎಂದ ಕನ್ನಡಿಗರು. ಯಾಕೆ ಗೊತ್ತೇ? ಆಯ್ಕೆ ಆದ ಕನ್ನಡಿಗ ಯಾರು ಗೊತ್ತೇ??
Cricket News: ಕ್ರಿಕೆಟ್ ಲೋಕದಲ್ಲಿ ಯೂನಿವರ್ಸಲ್ ಬಾಸ್ ಎಂದೇ ಹೆಸರು ಪಡೆದಿರುವವರು ಕ್ರಿಸ್ ಗೇಲ್. ಕೆರೆಬಿಯನ್ ಕಿಂಗ್ ಆಗಿರುವ ಗೇಲ್ ಅವರು ಬಲಿಷ್ಠ ಬ್ಯಾಟ್ಸ್ಮನ್, ಇವರು ಬ್ಯಾಟಿಂಗ್ ಮಾಡುವುದಕ್ಕೆ ಬಂದರೆ ಎದುರಾಳಿ ತಂಡದ ಬೌಲರ್ ಗಳಲ್ಲಿ ಭಯ ಶುರುವಾಗುತ್ತಿತ್ತು ಎಂದೇ ಹೇಳಬಹುದು. ಐಪಿಎಲ್ ಮಲ್ಲಿ ಆರ್ಸಿಬಿ ತಂಡದ ಪರವಾಗಿ ಆಡುತ್ತಿದ್ದ ಗೇಲ್ ಅವರು ಪುಣೆ ವಾರಿಯರ್ಸ್ ವಿರುದ್ಧ 66 ಎಸೆತಗಳಲ್ಲಿ ಬರೋಬ್ಬರಿ 175 ರನ್ಸ್ ಚಚ್ಚಿದ್ದರು. ಇದು ವಿಶ್ವದಾಖಲೆ ಆಗಿದ್ದು ಬೇರೆ ಯಾವ ಬ್ಯಾಟ್ಸ್ಮನ್ ಕೂಡ ಈ ದಾಖಲೆ ಮುರಿದಿಲ್ಲ.
ಕ್ರಿಸ್ ಗೇಲ್ ಅವರು ಇದುವರೆಗೂ 462 ಟಿ20 ಪಂದ್ಯಗಳನ್ನಾಡಿದ್ದು, ಇದರಲ್ಲಿ 22 ಶತಕ, 88 ಅರ್ಧಶತಕ ಸೇರಿಸಿ 14,562 ರನ್ಸ್ ಭಾರಿಸಿದ್ದಾರೆ, ಇವರನ್ನು ಕ್ರಿಕೆಟ್ ಲೆಜೆಂಡ್ ಎಂದೇ ಕರೆಯುತ್ತಾರೆ. ಐಪಿಎಲ್ ನಲ್ಲಿ ಗೇಲ್ ಅವರ 175 ರನ್ ಗಳ ದಾಖಲೆ ಮುರಿಯುವ ಸಾಮರ್ಥ್ಯ ಯಾವ ಬ್ಯಾಟ್ಸ್ಮನ್ ಗೆ ಇದೆ ಎನ್ನುವ ಪ್ರಶ್ನೆ ಬಂದಾಗ, ಕ್ರಿಸ್ ಗೇಲ್ ಅವರು ಮೂವರು ಆಟಗಾರರ ಹೆಸರನ್ನು ತಿಳಿಸಿದ್ದಾರೆ. ಆ ಮೂವರು ಆಟಗಾರರು ಯಾರ್ಯಾರು ಗೊತ್ತಾ? ಕ್ರಿಸ್ ಗೇಲ್ ಅವರು ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್, ಟೀಮ್ ಇಂಡಿಯಾದ ಸೂರ್ಯಕುಮಾರ್ ಯಾದವ್ ಮತ್ತು ಕೆ.ಎಲ್.ರಾಹುಲ್ ಅವರಿಗೆ ಈ ಸ್ಕೋರ್ ಮುರಿಯುವ ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ. ಇದನ್ನು ಓದಿ..Cricket News: ಮದುವೆಯಾಗಿರುವ ಶಾರ್ದುಲ್ ಹಾಗೂ ಪತ್ನಿ ಮಿಥಾಲಿ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ?? ಇಷ್ಟಕ್ಕೂ ಯಾರು ದೊಡ್ಡವರು ಗೊತ್ತೇ?
ಕೆ.ಎಲ್.ರಾಹುಲ್ ಅವರ ಬಗ್ಗೆ ಮಾತನಾಡಿ, “ಕೆ.ಎಲ್.ರಾಹುಲ್ ಅವರು ಈ ಹಿಂದೆ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಕ್ಕಾಗಿ ಡೆತ್ ಓವರ್ ಗಳಲ್ಲಿ ನೀಡಿರುವ ಅದ್ಭುತ ಪ್ರದರ್ಶನ, ರನ್ಸ್ ಹರಿಸಿರುವದನ್ನು ಗಮನಿಸಿದರೆ, ನಾನು ಮಾಡಿರುವ 175* ರನ್ ಗಳ ವಿಶ್ವ ದಾಖಲೆಯನ್ನು ಅವರು ಮುರಿಯುವ ಸಾಧ್ಯತೆ ಇದೆ. ದಾಖಲೆಗಳು ಇರುವುದು ಮತ್ತೊಬ್ಬರು ಮುರಿಯುವುದಕ್ಕೆ, ನನ್ನ ದಾಖಲೆಯನ್ನು ಕೆ.ಎಲ್.ರಾಹುಲ್ ಅವರು ಮುರಿಯುವ ದಿನಕ್ಕಾಗಿ ನಾನು ಪ್ರೀತಿಯಿಂದ ಕಾಯುತ್ತಿದ್ದೇನೆ..” ಎಂದಿದ್ದಾರೆ. ಆದರೆ ನೆಟ್ಟಿಗರ ಮಾತು ಬೇರೆಯೇ ಇದೆ. ಕ್ರಿಕೆಟ್ ಪ್ರಿಯರು ಹೇಳುತ್ತಿರುವುದು ಏನೆಂದರೆ, ರಾಹುಲ್ ಅವರು ನಿಮ್ಮ ದಾಖಲೆ ಮುರಿಯಲಿ ಎಂದು ನಮಗೂ ಆಸೆ ಇದೆ, ಆದರೆ ಅವರು ಕ್ರಿಕೆಟ್ ಗಿಂತ ಹೆಚ್ಚಾಗಿ, ಪರ್ಸನಲ್ ಲೈಫ್, ಜಾಹಿರಾತು ಇವುಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ, ಈಗ ಅವರು ಇರುವ ಫಾರ್ಮ್ ನೋಡಿದರೆ, ದಾಖಲೆ ಮುರಿಯುವುದು ಅನುಮಾನವೇ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Cricket News: ಒಂದು ಹೇಳಿಕೆಯ ಮೂಲಕ ವಿರಾಟ್ ಕೊಹ್ಲಿ ಗೆ ಶಾಕ್ ಕೊಟ್ಟ ಎಬಿಡಿ: ಇಷ್ಟು ದಿವಸ ದೋಸ್ತಿನೆ ಬೆಸ್ಟ್ ಎನ್ನುತ್ತಿದ್ದ ಎಬಿಡಿ ಉಲ್ಟಾ ಹೊಡೆದದ್ದು ಯಾಕೆ ಗೊತ್ತೇ??
Comments are closed.