Film News: ಕಿರುತೆರೆಯಲ್ಲಿ ಮಿಂಚಿ ಮರೆಯಾದ ನಟಿಯನ್ನು ಆಯ್ಕೆ ಮಾಡಿದ ಅಭಿಷೇಕ್: ಆಯ್ಕೆಯಾದ ವಿಲ್ಲನ್ ನಟಿ ಯಾರು ಗೊತ್ತೇ??
Film News: ನಟ ಅಭಿಷೇಕ್ ಅಂಬರೀಶ್ ಅವರ ಮೊದಲ ಸಿನಿಮಾ ಅಮರ್ ತೆರೆಕಂಡು 3 ವರ್ಷವಾಗಿದೆ, ಇವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಅಭಿಷೇಕ್ ಅಂಬರೀಶ್ ಅವರು ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಈ ಸಿನಿಮಾ ಇನ್ನೇನು ಮುಕ್ತಾಯ ಹಂತದಲ್ಲಿದೆ. ಹಾಗೆಯೇ, ಕೃಷ್ಣ ಅವರು ನಿರ್ದೇಶನ ಮಾಡಲಿರುವ ಕಾಳಿ ಸಿನಿಮಾದಲ್ಲೂ ಅಭಿಷೇಕ್ ಅಂಬರೀಶ್ ಅವರು ನಟಿಸುತ್ತಿದ್ದು, ಇದರಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇದೀಗ ಮದಗಜ ಸಿನಿಮಾ ನಿರ್ದೇಶನ ಮಾಡಿದ ಮಹೇಶ್ ಕುಮಾರ್ ಅವರೊಡನೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಅಭಿ, ಈ ಸಿನಿಮಾ ಭರ್ಜರಿಯಾಗಿ ಮೂಡಿಬರಲಿದೆ ಎನ್ನುವ ಭರವಸೆ ಮೂಡಿಸುತ್ತಿದೆ. ಇನ್ನು ಈ ಸಿನಿಮಾಗೆ ನಾಯಕಿ ಯಾರು ಎನ್ನುವ ಪ್ರಶ್ನೆ ಇತ್ತು, ಅದಕ್ಕೂ ಈಗ ಉತ್ತರ ಸಿಕ್ಕಿದ್ದು, ಕಿರುತೆರೆಯಲ್ಲಿ ಮಿಂಚಿ, ಈಗ ನಟನೆಯಿಂದ ಸ್ವಲ್ಪ ದೂರ ಉಳಿದಿರುವ ಅಮೂಲ್ಯ ಗೌಡ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅಮೂಲ್ಯ ಗೌಡ ಅವರು ಈಗಾಗಲೇ ಕೆಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಇದನ್ನು ಓದಿ..Kannada News: ಈ ಬಾರಿ ಮುಂದೆ ಹೋಗಿಯೇ ಬಿಟ್ಟ ತಮನ್ನಾ: ಡೈರೆಕ್ಟ್ ಆಗಿ ಅದಕ್ಕೆ ಸರಿ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದು ಏನು ಗೊತ್ತೇ??
ಇವರು ಮೊದಲು 2016ರಲ್ಲಿ ಸುಂದರಿ ಧಾರವಾಹಿಯಲ್ಲಿ ನಟಿಸಿದರು, ನಂತರ ಬಿಗ್ ಬಾಸ್ ಖ್ಯಾತಿಯ ಶಮಂತ್ ಅವರ ಜೊತೆ ಮರೆಯಲಾರೆ ಎನ್ನುವ ಬ್ರೇಕಪ್ ಸಾಂಗ್ ನಲ್ಲಿ ಕೂಡ ಕಾಣಿಸಿಕೊಂಡರು ಅಮೂಲ್ಯ ಗೌಡ, ಕುರುಡು ಕಾಂಚಾಣ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ..ನನ್ನರಸಿ ರಾಧೆ, ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸಹ ನಟಿಸಿದ್ದಾರೆ. ಇದೀಗ ಇವರು ಅಭಿಷೇಕ್ ಅಂಬರೀಶ್ ಅವರೊಡನೆ ನಟಿಸುತ್ತಾರೆ ಎನ್ನಲಾಗುತ್ತಿದ್ದು, ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ. ಇದನ್ನು ಓದಿ..Film News: ಹುಚ್ಚ ಸಿನಿಮಾ ನೋಡಿ ಅಣ್ಣಾವ್ರು ಹೊಗಳಿದರು, ಆದರೆ ವಿಷ್ಣು ರವರು ನೇರವಾಗಿ ಸುದೀಪ್ ರವರಿಗೆ ಹೇಳಿದ್ದೇನು ಗೊತ್ತೇ??
Comments are closed.