Kannada News: ಸಾವಿರಾರು ಕೋಟಿ ಒಡತಿಯನ್ನು ಮದುವೆಯಾದ ಮನೋಜ್, ವೇದಿಕೆಯ ಮೇಲೆ ಬಹಿರಂಗವಾಗಿಯೇ 2 ನೇ ಹೆಂಡತಿಯ ಬಗ್ಗೆ ಹೇಳಿದ್ದೇನು ಗೊತ್ತೇ?
Kannada News: ತೆಲುಗು ಚಿತ್ರರಂಗದ ನಟ ಮಂಚು ಮನೋಜ್ ಅವರು ಇತ್ತೀಚೆಗೆ ಭೂಮ ಮೌನಿಕಾ ಅವರೊಡನೆ ಮದುವೆಯಾದರು. ಇವರಿಬ್ಬರಿಗೂ ಇದು ಎರಡನೇ ಮದುವೆ ಆಗಿದೆ. ಈ ಜೋಡಿ ಕೆಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು, ಇದೀಗ ಮದುವೆಯಾಗಿದ್ದರು. ಚಿತ್ರರಂಗದ ಗಣ್ಯರು, ಕುಟುಂಬದವರು ಹಾಗೂ ಕೆಲವು ಆಪ್ತರ ಸಮ್ಮುಖದಲ್ಲಿ ನಟಿ ಲಕ್ಷ್ಮಿ ಮಂಚು ಅವರ ಮನೆಯಲ್ಲಿ ಈ ಮದುವೆ ನಡೆಯಿತು. ಮನೋಜ್ ಅವರ ಇಡೀ ಕುಟುಂಬ ಸಿನಿಮಾದಲ್ಲಿದೆ, ಮೌನಿಕಾ ಅವರ ಕುಟುಂಬ ರಾಜಕೀಯದಲ್ಲಿದೆ, ಈ ಜೋಡಿ ಈಗ ಮದುವೆಯಾಗಿ ಸಂತೋಷವಾಗಿದ್ದಾರೆ. ಇವರಿಗೆ ಎಲ್ಲರ ಆಶೀರ್ವಾದ ಕೂಡ ಸಿಕ್ಕಿದೆ. ಇತ್ತೀಚೆಗೆ ಮನೋಜ್ ಅವರ ತಂದೆ ಮೋಹನ್ ಬಾಬು ಅವರ 71ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ನಡೆಸಲಾಯಿತು.
ತಿರುಪತಿಯಲ್ಲಿರುವ ವಿದ್ಯಾನಿಕೇತನದಲ್ಲಿ ಮೋಹನ್ ಬಾಬು ಅವರ ಹುಟ್ಟುಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಲಾಯಿತು, ಈ ಕಾರ್ಯಕ್ರಮದಲ್ಲಿ ಮಂಚು ಮನೋಜ್ ಅವರು ಮಾತನಾಡಿ ಭಾವುಕರಾಗಿದ್ದಾರೆ. ಒಂದು ಹೆಣ್ಣು ಸೋತುಹೋದರೆ, ಈ ವಿಶ್ವವೇ ಸೋತ ಹಾಗೆ, ಜೀವನದಲ್ಲಿ ಸೋಲು ಗೆಲುವು ಸಹಜವಾದದ್ದು, ನಾವು ಈ ಪಯಣ ಶುರು ಮಾಡಲು ಬಯಸುತ್ತೇವೆ. ಪ್ರತಿಯೊಬ್ಬರ ಬದುಕಿನಲ್ಲಿ ಬೇರೆ ಬೇರೆ ಹಂತ ಬರುತ್ತದೆ. ಅಲ್ಲಿಗೆ ನಿಲ್ಲದೆ, ಮುಂದಕ್ಕೆ ಸಾಗಬೇಕು..ಎಂದು ಮನೋಜ್ ಅವರು ಹೇಳಿ, ತಮ್ಮ ಜೀವನದ ಅಂತಹ ಹಂತದ ಬಗ್ಗೆ ಮಾತನಾಡಿದ್ದಾರೆ. ಅಂತಹ ಸಮಯದಲ್ಲಿ ತಮಗೆ ಸಪೋರ್ಟ್ ಮಾಡಿದ್ದು ಕುಟುಂಬ, ಆಗ ಹಾಡು ಬರೆದು, ಮ್ಯೂಸಿಕ್ ಕಂಪೋಸ್ ಮಾಡುತ್ತಾ ಸಮಯ ಕಳೆದೆ ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಬೆಡ್ ರೂ ಸೀನ್ ನಲ್ಲಿ ಗೆರೆ ದಾಟಿಯೇ ಬಿಟ್ಟ ತಮನ್ನಾ: ಹುಡುಗರ ಜೀವ ಹೇಗೆ ತಡೆದುಕೊಳ್ಳುತ್ತೆ? ಏನು ಮಾಡಿದ್ದಾರೆ ಗೊತ್ತೇ??
“ನಾನು ಸಿನಿಮಾ ಮಾಡಿಯೇ 6 ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದೆ, ಆದರೆ ಅಭಿಮಾನಿಗಳು ನನಗೆ ಹೆಚ್ಚು ಪ್ರೀತಿ ಕೊಡುತ್ತಿದ್ದಾರೆ. ಇನ್ನು ಎಷ್ಟು ಜನ್ಮಗಳು ಇಂಥ ಪ್ರೀತಿ ಸಿಗುತ್ತದೆ? ನನ್ನ ಜೀವನ ಕತ್ತಲಾಗಿದ್ದಾಗ ಕುಟುಂಬ ನನಗೆ ಸಪೋರ್ಟ್ ಮಾಡಿತು. ಮುಂದೆ ಹೋಗಬೇಕು ಎಂದುಕೊಂಡಾಗ ನನಗೆ ಬೆಳಕು ಕಾಣಿಸಿತು, ಆ ಬೆಳಕಿನ ಹೆಸರು ಮೌನಿಕಾ.. ಆಕೆ ಸಿಕ್ಕಿದ ಮೇಲೆ ನಾನು ಕಳೆದುಕೊಂಡಿದ್ದು ಏನು ಎಂದು ಅರ್ಥವಾಯಿತು. ಸಿನಿಮಾ, ಸಮಾಜಸೇವೆ, ಪ್ರೀತಿ ಇದೆಲ್ಲವೂ ನನಗೆ ಇಷ್ಟ.. ಮತ್ತೆ ಸಿನಿಮಾ ಮಾಡುತ್ತಿದ್ದೇನೆ.. ನಾನು ಇಷ್ಟಪಡುವ ಹುಡುಗಿ ಇಂಡಿಪೆಂಡೆಂಟ್ ಆಗಿರಬೇಕು, ಅವರಿಗೆ ನಾನು ಸಪೋರ್ಟ್ ಮಾಡುತ್ತೇನೆ, ಎಲ್ಲಾ ಹೆಣ್ಣುಮಕ್ಕಳ ಗೆಲುವಿನ ಹಿಂದೆ ಒಬ್ಬ ಗಂಡು ಇರಬೇಕು..” ಎಂದು ಹೇಳಿದ ಮನೋಜ್ ಅವರು ಭಾವುಕರಾಗಿದ್ದಾರೆ. ಗಂಡ ಈ ರೀತಿಯ ಮಾತು ಹೇಳಿದ್ದು ಕೇಳಿ, ಮೌನಿಕಾ ಕೂಡ ಕಣ್ಣೀರು ಹಾಕಿದ್ದಾರೆ. ಇದನ್ನು ಓದಿ..Kannada News: ರಶ್ಮಿಕಾ ಗೆ 16 ವರ್ಷವಾದಾಗ ತಂಗಿ ಹುಟ್ಟಿದ್ಲು, ಡಿಗ್ರಿ ಮಾಡುವಾಗ ಅಮ್ಮನಿಗೆ ಆಯಿತು ಮತ್ತೊಂದು ಮಗು. ಡಾಕ್ಟರ್ ಹೇಳುವುದೇನು ಗೊತ್ತೇ??
Comments are closed.