Kannada News: ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುತ್ತೇನೆ ಎಂದರೂ ವಿಷ್ಣುವರ್ಧನ್ ರವರು ಅಂದು ಒಪ್ಪದೇ ದೂರ ಉಳಿದಿದ್ದು ಯಾಕೆ ಗೊತ್ತೇ??
Kannada News: ಡಾ.ವಿಷ್ಣುವರ್ಧನ್ ಅವರು ಕರ್ನಾಟಕ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು, ಇವರು ನಟನೆಯ ಕ್ಷೇತ್ರದಲ್ಲಿ ಮಾಡಿದ್ದ ಸಾಧನೆ, ಇವರಿಗಿದ್ದ ಅಭಿಮಾನಿ ಬಳಗ, ಜನರು ಇವರಿಗೆ ಕೊಡುತ್ತಿದ್ದ ಗೌರವ ಇದೆಲ್ಲವನ್ನು ನೋಡಿ ಬಹಳಷ್ಟು ರಾಜಕೀಯ ಪಕ್ಷಗಳು ವಿಷ್ಣುವರ್ಧನ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನಗಳನ್ನು ಮಾಡಿದರು. ವಿಶೇಷವಾಗಿ ಕಾಂಗ್ರೆಸ್ ಪಕ್ಷ ಅಂಬರೀಶ್ ಅವರ ಮೂಲಕ ಆದರೂ ವಿಷ್ಣುವರ್ಧನ್ ಅವರನ್ನು ಕರೆತರಬೇಕು ಎಂದು ಬಹಳ ಪ್ರಯತ್ನ ಮಾಡಿತು. ಆದರೆ ವಿಷ್ಣುವರ್ಧನ್ ಅವರು ರಾಜಕೀಯಕ್ಕೆ ಬರುವ ಬಗ್ಗೆ ತೆಗೆದುಕೊಂಡ ನಿರ್ಧಾರ ಏನು? ಅವರು ರಾಜಕೀಯದಿಂದ ದೂರ ಉಳಿದಿದ್ದು ಯಾಕೆ ಗೊತ್ತ?
ವಿಷ್ಣುವರ್ಧನ್ ಅವರ ಆಪ್ತ ಗೆಳೆಯ ಅಂಬರೀಶ್ ಅವರು ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದರು. ಅಂಬರೀಶ್ ಅವರು ಎಲೆಕ್ಷನ್ ನಲ್ಲಿ ಗೆದ್ದು ಒಳ್ಳೆಯ ಸ್ಥಾನದಲ್ಲೂ ಇದ್ದರು, ಆ ಸಮಯದಲ್ಲಿ ಅನಂತ್ ಕುಮಾರ್ ಅವರ ವಿರುದ್ಧವಾಗಿ ನಿಲ್ಲಿಸಿ ಗೆಲ್ಲಲು ಯಾರಿದ್ದಾರೆ ಎನ್ನುವ ಪ್ರಶ್ನೆಯೊಂದು ಶುರುವಾದಾಗ, ಎಲ್ಲರ ಅಭಿಪ್ರಾಯದಲ್ಲೂ ಕೇಳಿಬಂದ ಹೆಸರು ವಿಷ್ಣುದಾದ ಅವರದ್ದು. ಕಾಂಗ್ರೆಸ್ ಪಕ್ಷದ ಮೂಲಕ ಟಿಕೆಟ್ ಕೊಡುತ್ತೇವೆ ಎಂದು ಹೇಳಿದರೂ, ಅಂಬರೀಷ್ ಅವರ ಮೂಲಕ ಪ್ರಯತ್ನ ಮಾಡಿದರು ಕೂಡ, ವಿಷ್ಣುದಾದ ಅವರು ರಾಜಕೀಯಕ್ಕೆ ಬರಲು ಒಪ್ಪಲೇ ಇಲ್ಲ. ಇದನ್ನು ಓದಿ..Kannada News: ನಿಜಕ್ಕೂ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ರವರಿಗೆ ಏನಾಗಿತ್ತು ಗೊತ್ತೇ?? ಇಹಲೋಕ ತ್ಯಜಿಸಲು ಕಾರಣವೇನು ಗೊತ್ತೇ?? ಅಧಿಕಾರಿ ಹೇಳಿದ್ದೇನು ಗೊತ್ತೇ??
ಯಾಕೆ ಬರುವುದಿಲ್ಲ ಎನ್ನುವುದಕ್ಕೆ ವಿಷ್ಣುದಾದ ಅವರು ಹೇಳಿದ ಮಾತು ಹೀಗಿತ್ತು, “ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಅಂತ ಅಲ್ಲ, ಆಸಕ್ತಿ ಇದೆ.. ರಾಜಕೀಯದಲ್ಲಿ ಆಸಕ್ತಿ ಇದೆ ಹೊರತು ರಾಜಕೀಯಕ್ಕೆ ಬರಲು ಆಸಕ್ತಿ ಇಲ್ಲ. ರಾಜಕೀಯದ ವಿಚಾರಗಳು ನನಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಈ ಎಲ್ಲಾ ವಿಷಯಗಳ ಮೇಲೆ ನನ್ನದೇ ಆದಂತಹ ಆಸಕ್ತಿ ಇದೆ., ಆದರೆ ಅದನ್ನ ಪ್ರಾಕ್ಟಿಕಲ್ ಆಗಿ ನೋಡುವ ಮನಸ್ಥಿತಿಯಲ್ಲಿ ನಾನಿಲ್ಲ. ಹಾಗೆಯೇ ಅದು ನನ್ನ ಕ್ಷೇತ್ರವಲ್ಲ.. ನನ್ನದು ಸಿನಿಮಾ ಕ್ಷೇತ್ರ..” ಎಂದು ಹೇಳಿದ್ದರು. ಅಂಬರೀಶ್ ಅವರ ಮೇಲಿನ ಪ್ರೀತಿ, ಅವರಿಬ್ಬರ ಸ್ನೇಹದಿಂದ ವಿಷ್ಣುದಾದ ಅವರು ಆಗಾಗ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿದ್ದರು, ಆದರೆ ರಾಜಕೀಯಕ್ಕೆ ಬರಲು ಎಂದಿಗೂ ಆಸಕ್ತಿ ತೋರಿಸಲಿಲ್ಲ. ಇದನ್ನು ಓದಿ..Kannada Election News: ಮುಂದಿನ ಅವಧಿಗೆ ನಾನೇ ಮುಖ್ಯಮಂತ್ರಿ ಎಂದ ಬೊಮ್ಮಾಯಿ ಎದುರೇ ಖಡಕ್ ಪ್ರತಿಕ್ರಿಯೆ ಕೊಟ್ಟ ಯೆಡಿಯೂರಪ್ಪ: ಅಂದುಕೊಂಡದ್ದು ಮಾಡಿಯೇ ಬಿಡುತ್ತಾರಾ??
Comments are closed.