Kannada News: ಕನ್ನಡದಲ್ಲಿ ಹುಟ್ಟಿ ತೆಲುಗಿನಲ್ಲಿ ವಿಶ್ವವನ್ನೇ ಶೇಕ್ ಮಾಡುತ್ತಿರುವ ರಾಜ ಮೌಳಿ ತಂದೆ, ಕನ್ನಡ ತಾಯಿಯ ಕುರಿತು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ ಎಂದ ತೆಲುಗು ಜನತೆ.
Kannada News: ಟಾಲಿವುಡ್ ನ ಸ್ಟಾರ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಅವರು ಆಸ್ಕರ್ ಪ್ರಶಸ್ತಿಯನ್ನು ದೇಶಕ್ಕೆ ತಂದಿದ್ದಾರೆ. ತಮ್ಮ ಪ್ರತಿಯೊಂದು ಸಿನಿಮಾದಲ್ಲೂ ವಿಶೇಷತೆಯ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರಾಗುವ ಹಾಗೆ ಮಾಡುತ್ತಾರೆ. ರಾಜಮೌಳಿ ಅವರು ತೆಲುಗು ನಿರ್ದೇಶಕ ಆದರು, ಇವರು ಕನ್ನಡದವರು ಎಂದು ಕೆಲವರು ಹೇಳುತ್ತಾರೆ, ಅದಕ್ಕೆ ಕಾರಣ ರಾಜಮೌಳಿ ಅವರು ಹುಟ್ಟಿದ್ದು 1973ರಲ್ಲಿ ರಾಯಚೂರಿನಲ್ಲಿ. ಹಾಗಾಗಿ ಇವರು ಕನ್ನಡಿಗ ಕೂಡ ಹೌದು ಎನ್ನುತ್ತಾರೆ ಅಭಿಮಾನಿಗಳು. ಆದರೆ ಎಲ್ಲರೂ ಕೂಡ ಈ ಮಾತನ್ನು ಒಪ್ಪುವುದಿಲ್ಲ..
ತೆಲುಗು ಅಭಿಮಾನಿಗಳು ಅವರು ಅಪ್ಪಟ ತೆಲುಗಿನವರು ಎನ್ನುತ್ತಾರೆ. ಇದೀಗ ರಾಜಮೌಳಿ ಅವರ ತಂದೆ ಕೂಡ ತಮ್ಮ ಮಗ ಕರ್ನಾಟಕದವನು ಎನ್ನುವ ಹಾಗೆ ಮಾತನಾಡಿದ್ದಾರೆ, ಮಾರ್ಚ್ 23ರಂದು ನಡೆದ ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಮುಖ್ಯ ಅತಿಥಿಯಾಗಿ ರಾಜಮೌಳಿ ಅವರ ತಂದೆ ಬರಹಗಾರ ವಿಜಯೇಂದ್ರ ಪ್ರಸಾದ್ ಅವರು ಬಂದಿದ್ದರು ಆಗ ಮಾತನಾಡಿದ ಅವರು, “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು, ಅಂತ ಹೇಳಿದ್ದಾರೆ.. ಕನ್ನಡ ಕಂಠೀರವ ಡಾ.ರಾಜ್ ಕುಮಾರ್ ಅವರು ಹೇಳಿದ್ದಾರೆ..ಅದು ನಿಜ, ಆದರೆ ನನಗೆ ಆ ಅದೃಷ್ಟ ಇಲ್ಲ. ಆದರೆ ಬೇರೊಂದು ಅದೃಷ್ಟ ನನಗೆ ಇದೆ. ನನಗೆ ಮದುವೆ ಆಗಿದ್ದು ಇಲ್ಲಿ.. ನನ್ನ ಮಗಳು ಮಗ ಹುಟ್ಟಿದ್ದು ಇಲ್ಲೇ.. ಇದನ್ನು ಓದಿ..Kannada News: ನೇರವಾಗಿ ಕಾಜಲ್ ಅಗರ್ವಾಲ್ ರವರನ್ನು ರೂಮಿಗೆ ಕರೆದ ನಿರ್ದೇಶಕ; ಅವಕಾಶಕ್ಕಾಗಿ ಅಂದು ಕಾಜಲ್ ಏನು ಮಾಡಿದ್ದರಂತೆ ಗೊತ್ತೇ? ಎಲ್ಲವನ್ನು ಒಪ್ಪಿಕೊಂಡ ನಟಿ ಹೇಳಿದ್ದೇನು ಗೊತ್ತೇ?
ಕನ್ನಡ ತಾಯಿ ದಯೆ ಇರುವುದರಿಂದಲೇ ನನ್ನ ಮಗ ವಿಶ್ವವಿಖ್ಯಾತಿ ಗಳಿಸಿದ್ದಾನೆ ಎನ್ನುವುದು ನನ್ನ ನಂಬಿಕೆ. ಈ ತಾಯಿಗೆ ನಾನು ಧನ್ಯವಾದ ಹೇಳೋದಾದರು ಹೇಗೆ? ತಾಯಿ ಮಕ್ಕಳಿಂದ ಏನನ್ನು ಕೂಡ ಬಯಸುವುದಿಲ್ಲ..ತಾಯಿ ಮಕ್ಕಳಿಗೆ ಬೇಕಿರೋದು ಏನು ಎಂದು ಕೇಳುತ್ತಾಳೆ. ಕನ್ನಡ ತಾಯಿಯ ಬಳಿ ನನ್ನಿಂದ ಇರುವುದು ಒಂದೇ ಪ್ರಾರ್ಥನೆ, ಇಲ್ಲಿ ಹುಟ್ಟಿರುವ ಎಲ್ಲರಿಗೂ ನನ್ನ ಮಗನಿಗೆ ಕೊಟ್ಟಂಥ ಯಶಸ್ಸನ್ನೇ ಕೊಡು..ಈ ತಾಯಿಗೆ ನನ್ನ ಪ್ರಣಾಮಗಳನ್ನು ಬಿಟ್ಟು ಬೇರೇನೂ ಸಲ್ಲಿಸಲಿ ಎಂದು ಗೊತ್ತಾಗುತ್ತಿಲ್ಲ..” ಎಂದು ಹೇಳಿದ್ದಾರೆ. “ಇಂದು ನನಗೆ ಎರಡು ವಿಷಯ ಖುಷಿ ಕೊಟ್ಟಿದೆ, ಬಹಳ ವರ್ಷಗಳ ನಂತರ ನನ್ನ ಮಗ ಹುಟ್ಟಿ ಬೆಳೆದ ಜಾಗಕ್ಕೆ ಮತ್ತೆ ಬಂದಿದ್ದೇನೆ. ಜೊತೆಗೆ ಕನ್ನಡ ಸಿನಿಮಾಗಳಿಗೆ ಅದ್ಭುತ ಯಶಸ್ಸು ಸಿಕ್ಕಿದೆ, ಕನ್ನಡ ಸಿನಿಮಾಗೆ ಸಿಗಬೇಕಾದ ಗೌರವ ಸಿಕ್ಕಿದೆ..” ಎಂದಿದ್ದಾರೆ. ಇದನ್ನು ಓದಿ..Film News: ಈ ಫೋಟೋ ದಲ್ಲಿ ಕಾಣುತ್ತಿರುವ ನಟಿ ಯಾರೆಂದು ಗೊತ್ತಾಯ್ತ? ಈಗಲೂ ಕಿರು ಬೆರಳಿನಲ್ಲಿ ನಿಮ್ಮನ್ನು ಅಲ್ಲಾಡಿಸುವ ಶಕ್ತಿ ಇರುವ ನಟಿ ಯಾರು ಗೊತ್ತೇ?
Comments are closed.