Neer Dose Karnataka
Take a fresh look at your lifestyle.

Kannada News: ಕರ್ನಾಟಕ ಬುಲ್ಡೋ ಜರ್ಸ್ ಹೀನಾಯ ಸೋಲು ಕಾಣಲು ಕಿಚ್ಚ ಸುದೀಪ್ ಕಾರಣವಾದ್ರಾ?? ಬಾದ್ ಷಾ ಮಾಡಿದ ತಪ್ಪೇನು ಗೊತ್ತೇ? ಇವೆಲ್ಲ ಬೇಕಿತ್ತಾ ಕಿಚ್ಚ ಸರ್??

Kannada News: ಈ ವರ್ಷದ ಸಿಸಿಎಲ್ ಆವೃತ್ತಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಕಪ್ ಗೆದ್ದು ಹ್ಯಾಟ್ರಿಕ್ ಗೆಲುವು ಕಾಣಬೇಕು ಎಂದುಕೊಂಡಿತ್ತು, ಆದರೆ ಸೆಮಿಫೈನಲ್ಸ್ ಹಂತದಲ್ಲಿ ತೆಲುಗು ವಾರಿಯರ್ಸ್ ವಿರುದ್ಧ ಸೋತು ತವರಿಗೆ ಬಂದಿದೆ. ಮಾರ್ಚ್ 24ರಂದು ವಿಶಾಖಪಟ್ಬಣಂನಲ್ಲಿ ಸೆಮಿಫೈನಲ್ಸ್ ನಡೆಯಿತು, ಮೊದಲ ಪಂದ್ಯದಲ್ಲಿ ಮುಂಬೈ ವರ್ಸಸ್ ಭೋಜ್ ಪುರಿ ತಂಡದ ನಡುವೆ ಭೋಜ್ ಪುರಿ ತಂಡ ಗೆದ್ದು ಫೈನಲ್ಸ್ ಪ್ರವೇಶಿಸಿತು. ಎರಡನೇ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡ ಗೆದ್ದಿದೆ.

ಟಾಸ್ ಸೋತ ಕರ್ನಾಟಕ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು, ಮೊದಲ ಇನ್ನಿಂಗ್ಸ್ ನಲ್ಲೋ 99 ರನ್ಸ್ ಗಳಿಸಿ 6 ವಿಕೆಟ್ಸ್ ಕಳೆದುಕೊಂಡಿದ್ದು, ತೆಲುಗು ವಾರಿಯರ್ಸ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 95 ರನ್ಸ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಕರ್ನಾಟಕ ತಂಡದಿಂದ ಅಂದುಕೊಂಡಂಥ ಪ್ರದರ್ಶನ ಬರಲಿಲ್ಲ, 98 ರನ್ಸ್ ಗಳಿಸಿದ ಕರ್ನಾಟಕ ತಂಡ, 105ರನ್ ಗಳ ಗುರಿಯನ್ನು ತೆಲುಗು ವಾರಿಯರ್ಸ್ ತಂಡಕ್ಕೆ ನೀಡಿತು, 9.5 ಓವರ್ ಗಳಲ್ಲೇ ತೆಲುಗು ವಾರಿಯರ್ಸ್ ತಂಡ ಗುರಿ ತಲುಪಿ, ಸೆಮಿ ಫೈನಲ್ಸ್ ಗೆದ್ದಿತು. ಆರಂಭದಿಂದಲೂ ಮೇಲುಗೈ ಸಾಧಿಸಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಕೊನೆಯಲ್ಲಿ ಸೋತಿದ್ದಕ್ಕೆ ಕೆಲವು ಕಾರಣಗಳಿವೆ. ಇದನ್ನು ಓದಿ..Kannada News: ಧಾರವಾಹಿ ಲೋಕದಲ್ಲಿ ಮಹಾ ಸಂಚಲನ ಸೃಷ್ಟಿಸಿದ ಭಾಗ್ಯ ಲಕ್ಷ್ಮಿ – ಲಕ್ಷ್ಮಿ ಬಾರಮ್ಮ. ಈ ವಾರ ಟಿ ಆರ್ ಪಿ ಲೋಕದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಗೊತ್ತೇ??

ಮೊದಲ ಇನ್ನಿಂಗ್ಸ್ ನಲ್ಲಿ ಓಪನರ್ ಆಗಿ ಕಣಕ್ಕೆ ಇಳಿದವರನ್ನು 2ನೇ ಇನ್ನಿಂಗ್ಸ್ ನಲ್ಲಿ ಪುನರಾವರ್ತಿಸಬಾರದು ಎನ್ನುವ ಕಾರಣಕ್ಕೆ ಸುದೀಪ್ ಅವರು ಬಂದರೆ, ಆದರೆ ಸುದೀಪ್ ಅವರು 5 ಎಸೆತಗಳಲ್ಲಿ ಗಳಿಸಿದ್ದು 1 ರನ್ ಮಾತ್ರ, ಸುದೀಪ್ ಅವರ ಬದಲಾಗಿ ರನ್ಸ್ ಗಳಿಸುವ ಬೇರೆ ಯಾರನ್ನಾದರೂ ಕಣಕ್ಕೆ ಇಳಿಸಬಹುದಿತ್ತು, ಹಾಗೆಯೇ ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಭಾರಿಸಿದ್ದ ಪ್ರದೀಪ್ ಬೊಗಾದಿ ಅವರು ಎರಡನೇ ಇನ್ನಿಂಗ್ಸ್ ನಲ್ಲಿ ಹೆಚ್ಚು ರನ್ಸ್ ಗಳಿಸಲಿಲ್ಲ, ಮೊದಲ ಇನ್ನಿಂಗ್ಸ್ ನಲ್ಲಿ 33 ರನ್ಸ್ ಗಳಿಸಿದ ಕೃಷ್ಣ ಅವರು ಕೂಡ ಎರಡನೇ ಇನ್ನಿಂಗ್ಸ್ ನಲ್ಲಿ ಹೆಚ್ಚು ರನ್ಸ್ ಗಳಿಸಲಿಲ್ಲ. ರಾಜೀವ್ ಹನು ಅವರನ್ನು ಬಿಟ್ಟು ಬೇರೆ ಬ್ಯಾಟ್ಸ್ಮನ್ ಗಳು ಹೆಚ್ಚು ರನ್ಸ್ ಗಳಿಸಲಿಲ್ಲ. ಹಾಗೆಯೇ, ಬೌಲಿಂಗ್ ನಲ್ಲಿ ಗಣೇಶ್ ಅವರನ್ನು ಬಿಟ್ಟು ಬೇರೆ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಈ ತಪ್ಪಿನಿಂದ ಕರ್ನಾಟಕ ತಂಡ ಸೆಮಿ ಫೈನಲ್ಸ್ ಹಂತದಲ್ಲಿ ಸೋತಿದೆ. ಇದನ್ನು ಓದಿ..Kannada News: ಕನ್ನಡದಲ್ಲಿ ಹುಟ್ಟಿ ತೆಲುಗಿನಲ್ಲಿ ವಿಶ್ವವನ್ನೇ ಶೇಕ್ ಮಾಡುತ್ತಿರುವ ರಾಜ ಮೌಳಿ ತಂದೆ, ಕನ್ನಡ ತಾಯಿಯ ಕುರಿತು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ ಎಂದ ತೆಲುಗು ಜನತೆ.

Comments are closed.