Neer Dose Karnataka
Take a fresh look at your lifestyle.

ಇರುವ ಎಲ್ಲವನು ಹೇಳಿದ ಪ್ರಭುದೇವ, ಷೋ ನಲ್ಲಿ ತನ್ನ ಮಗನ ಬಗ್ಗೆ ಮಾತ್ರ ಏನು ಹೇಳಲಿಲ್ಲ ಯಾಕೆ ಗೊತ್ತೇ?? ಅಂದು ಏನಾಗಿತ್ತು ಗೊತ್ತೇ?

ವೀಕೆಂಡ್ ವಿತ್ ರಮೇಶ್ 5ನೇ ಸೀಸನ್ ಶುರುವಾಗಿ 2 ಸಾಧಕರ ಕಥೆಯನ್ನು ವೀಕ್ಷಕರಿಗೆ ತೋರಿಸಲಾಗಿದೆ. ವೀಕೆಂಡ್ ವಿತ್ ರಮೇಶ್ ನಲ್ಲಿ ಮೊದಲ ಅತಿಥಿಯಾಗಿ ಬಂದದ್ದು ನಟಿ ರಮ್ಯಾ ಅವರು, ಈ ಎಪಿಸೋಡ್ ನಲ್ಲಿ ಸಿಕ್ಕಾಪಟ್ಟೆ ಇಂಗ್ಲಿಷ್ ಬಳಕೆ ಇತ್ತು, ಕನ್ನಡ ಕಡಿಮೆ ಇತ್ತು ಎನ್ನುವ ಕಾರಣಕ್ಕೆ ಬಹಳ ಟ್ರೋಲ್ ಸಹ ಆಗಿತ್ತು. ಆದರೆ ಪ್ರಭುದೇವ ಅವರ ಎರಡನೇ ಸಂಚಿಕೆ ಜನರಿಗೆ ಬಹಳ ಇಷ್ಟವಾಗಿದೆ.

ದೇಶವೆ ಮೆಚ್ಚಿದ ನೃತ್ಯಗಾರ, ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಖ್ಯಾತಿ ಪಡೆದಿರುವ ಪ್ರಭುದೇವ ಅವರು ಮಾತನಾಡಿದ ಅಪ್ಪಟ ಚಾಮರಾಜನಗರ ಶೈಲಿಯ ಕನ್ನಡ ಕೇಳಿ ವೀಕ್ಷಕರು ಸಂತೋಷಪಟ್ಟರು. ಎಲ್ಲೇ ಹೋದರು, ತಮ್ಮ ಊರು ಭಾಷೆಯನ್ನು ಮರೆಯಬಾರದು ಅಂತ ಪ್ರಭುದೇವಾ ಅವರಿಂದ ಕಲಿಯಬೇಕು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿ, ಪ್ರಭುದೇವ ಅವರ ಎಪಿಸೋಡ್ ಗೆ ಫುಲ್ ಮಾರ್ಕ್ಸ್ ಕೊಟ್ಟರು.. ಇದನ್ನು ಓದಿ..

ವೀಕೆಂಡ್ ವಿತ್ ರಮೇಶ್ ಶೋ ನಡೆಯುವುದು ಹೇಗೆ ಎಂದು ನಮಗೆ ಗೊತ್ತಿದೆ. ಸಾಧಕರ ಹುಟ್ಟು, ಬಾಲ್ಯ, ಅವರ ತಂದೆ ತಾಯಿ, ಯಶಸ್ಸಿನ ಹಾದಿ, ಬದುಕಿನ ಕಷ್ಟಗಳು ಇದೆಲ್ಲದರ ಬಗ್ಗೆ ಮಾತನಾಡಿ, ವೀಕ್ಷಕರಿಗೆ ತೋರಿಸಿ ಸ್ಫೂರ್ತಿ ತುಂಬುವ ಪ್ರಯತ್ನ ಇದು. ಪ್ರಭುದೇವ ಅವರ ಎಪಿಸೋಡ್ ನಲ್ಲಿ ಸಹ ದೂರ ಎನ್ನುವ ಊರಿನಲ್ಲಿ ಅವರು ಕಳೆದ ಬಾಲ್ಯದ ಸಮಯ, ಅವರ ಬಾಲ್ಯದ ಗೆಳೆಯರು ಎಲ್ಲರನ್ನು ಕರೆಸಲಾಯಿತು. ಅವರೆಲ್ಲರ ಜೊತೆಗೆ ಪ್ರಭುದೇವ ಅವರು ಇಂದಿಗೂ ಸರಳವಾಗಿ ಇರುವುದು ನೋಡಿದರೆ ಹೆಮ್ಮೆ ಅನ್ನಿಸುತ್ತಿತ್ತು.

ಪ್ರಭುದೇವ ಅವರಿಗೆ ನೃತ್ಯ ಕಲಿಸಿದ ಗುರುಗಳು, ಅವರಿಗೆ ಅವಕಾಶ ಸಿಕ್ಕಿದ್ದು ಹೇಗೆ, ಅವಕಾಶ ಕೊಟ್ಟವರು ಯಾರು ಪ್ರಭುದೇವ ಅವರು ಬೆಳೆದದ್ದು ಹೇಗೆ ಇದೆಲ್ಲವನ್ನು ತೋರಿಸಿದರಾದರು, ಅದೊಂದು ವಿಚಾರದ ಬಗ್ಗೆ ಪ್ರಭುದೇವ ಅವರು ಮಾತನಾಡಲೇ ಇಲ್ಲ. ಅದು ಅವರ ಮಗನ ಬಗ್ಗೆ. ಪ್ರಭುದೇವ ಅವರ ಬಗ್ಗೆ ನಟ ಪ್ರಕಾಶ್ ರಾಜ್ ಅವರು ಮಾತನಾಡಿ, ಅವರ ಮಗ ಹೋದಾಗ ನಾನು ಜೊತೆಯಲ್ಲೇ ಇದ್ದೆ ಎಂದು ಹೇಳಿದರು. ಆಗ ಪ್ರಭುದೇವ ಅವರ ಮಗನ ಫೋಟೋ ಬಂದಿತು.. ಇದನ್ನು ಓದಿ..

ಆಗ ಪ್ರಭುದೇವ ಅವರು ಭಾವುಕರಾಗಿ ಏನು ಹೇಳದೆ ಸುಮ್ಮನಾದರು, ಏನಾಯಿತು ಮಗನಿಗೆ ಎಂದು ರಮೇಶ್ ಅವರು ಕೇಳಿದಾಗ, ಪ್ರಭುದೇವ ಅವರಿಗೆ ಏನನ್ನು ಮಾತನಾಡಲು ಸಾಧ್ಯವಾಗಲಿಲ್ಲ. ನಿಮಗೆ ಹಂಚಿಕೊಳ್ಳಬಹುದು ಎನ್ನಿಸಿದರೆ ಮಾತನಾಡಿ ಇಲ್ಲದಿದ್ದರೆ ಪರವಾಗಿಲ್ಲ ಎಂದು ರಮೇಶ್ ಅವರು ಹೇಳಿದಾಗ, ಪ್ರಭುದೇವ ಅವರು ಆ ವಿಷಯ ಬೇಡ ಸ್ಕಿಪ್ ಮಾಡಿ ಎಂದು ಸನ್ನೆ ಮಾಡಿದರು. ಆ ವಿಷಯದ ಬಗ್ಗೆ ಮಾತನಾಡಲಿಲ್ಲ. ಆದರೆ ಅವರ ಮಗನಿಗೆ ಆಗಿದ್ದೇನು ಎಂದು ಎಲ್ಲರಲ್ಲೂ ಕುತೂಹಲವಿದೆ..

ಅಸಲಿ ವಿಚಾರ ಏನು ಅಂದ್ರೆ, ಪ್ರಭುದೇವ ಅವರು ಲತಾ ಎನ್ನುವವರ ಜೊತೆಗೆ ಮೊದಲು ಮದುವೆಯಾಗಿದ್ದರು. ಅವರಿಗೆ ಮೂವರು ಮಕ್ಕಳು, ವಿಶಾಲ್ ದೇವ್, ರಿಷಿ ರಾಘವೇಂದ್ರ ದೇವ್ ಹಾಗೂ ಅದಿತಿ ದೇವ್. ಇದರಲ್ಲಿ ಮೊದಲ ಮಗ ವಿಶಾಲ್ ದೇವ್ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ಕೆಲ ಸಮಯ ಸಾವು ಬದುಕಿನ ನಡುವೆ ಹೋರಾಟ ನಡೆಸಿ, 13ನೇ ವಯಸ್ಸಿನಲ್ಲಿ 2008ರಲ್ಲಿ ವಿಶಾಲ್ ವಿಧಿವಶರಾದರು. ಪ್ರಭುದೇವಾ ಅವರ ಜೀವನದಲ್ಲಿ ಬಹಳ ನೋವಿನ ವಿಚಾರ ಆಗಿದೆ. ಇದನ್ನು ಓದಿ..

Comments are closed.