Neer Dose Karnataka
Take a fresh look at your lifestyle.

ಆರ್ಸಿಬಿ ತಂಡಕ್ಕೆ ನಡುಕ ಹುಟ್ಟಿಸಿದ್ದ ತಿಲಕ್ ವರ್ಮಾ ನಿಜಕ್ಕೂ ಯಾರು ಗೊತ್ತೇ? ಈತನ ಬ್ಯಾಕ್ ಗ್ರೌಂಡ್ ಕೇಳಿದರೆ, ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.

ಮೊನ್ನೆ ನಡೆದ ಮುಂಬೈ ವರ್ಸಸ್ ಆರ್ಸಿಬಿ ಪಂದ್ಯದಲ್ಲಿ ಮುಂಬೈ ತಂಡದ ಬೇರೆ ಎಲ್ಲಾ ಆಟಗಾರರು ರನ್ ಗಳಿಸಲು ಸಾಧ್ಯವಾಗದೆ ಇದ್ದಾಗ, ಮುಂಬೈ ತಂಡದ ಯುವ ಆಟಗಾರ ತಿಲಕ ವರ್ಮಾ ಅವರು ಕೊನೆವರೆಗೂ ಕ್ರೀಸ್ ನಲ್ಲಿದ್ದು, 46 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 9 ಬೌಂಡರಿ ಜೊತೆಗೆ ಬರೋಬ್ಬರಿ 84 ರನ್ಸ್ ಗಳಿಸಿ, ತಂಡದ ಸ್ಕೋರ್ ಹೆಚ್ಚಿಸಿದರು. ತಿಲಕ್ ಅವರ ಈ ಭರ್ಜರಿ ಬ್ಯಾಟಿಂಗ್ ನೋಡಿ ಕ್ರಿಕೆಟ್ ಪ್ರಿಯರು ಫಿದಾ ಆಗಿದ್ದಾರೆ. ಈ ತಿಲಕ್ ವರ್ಮಾ ನಿಜಕ್ಕೂ ಯಾರು ಗೊತ್ತಾ? ಅವರ ಬ್ಯಾಗ್ರೌಂಡ್ ಏನು ಗೊತ್ತಾ?

ತಿಲಕ್ ವರ್ಮಾ ಅವರ ತಂದೆ ನಂಬೂರ್ ನಾಗರಾಜ್, ಇವರು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಗ ತಿಲಕ್ ಕ್ರಿಕೆಟ್ ಮೇಲಿನ ಆಸೆಯಿಂದ ಬೇರೆ ಕನಸುಗಳನ್ನು ಬದಿಗಿಟ್ಟು ಇದರ ಮೇಲೆಯೇ ಎಲ್ಲಾ ಗಮನ ಹರಿಸಿದರು. ಟೀಮ್ ಇಂಡಿಯಾ ಅಂಡರ್ 19 ತಂಡದಲ್ಲಿದ್ದ ತಿಲಕ್ ಅವರು, 2019ರಲ್ಲಿ ಟೀಮ್ ಇಂಡಿಯಾ ಅಂಡರ್ 19 ವರ್ಲ್ಡ್ ಕಪ್ ತಂಡದ ಜೊತೆಗೆ ಸೆಮಿ ಫೈನಲ್ಸ್ ವರೆಗು ತಲುಪಿದ್ದರು. ತಿಲಕ್ ಅವರದ್ದು ಮಧ್ಯಮ ವರ್ಗದ ಕುಟುಂಬ, ಫೀಸ್ ಭರಿಸಿ ತರಬೇತಿ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ, ಆಗ ಕೋಚ್ ಸಲಾಂ ಅವರು ತಿಲಕ್ ಅವರಿಗೆ ಕ್ರಿಕೆಟ್ ಕಲಿಸುವ ಪೂರ್ತಿ ಜವಾಬ್ದಾರಿ ತೆಗೆದುಕೊಂಡಿದ್ದರು. ಇದನ್ನು ಓದಿ..Cricket News: ಇನ್ನು ಸೂರ್ಯ ರವರ ಟಚ್ ಮಾಡೋಕೆ ಆಗಲ್ಲ; ಸೂರ್ಯ ಬೆಂಬಲಕ್ಕೆ ನಿಂತ ಟಾಪ್ ಆಟಗಾರ ಯಾರು ಗೊತ್ತೇ?? ಇದೆ ಕೆಲಸ ರಾಹುಲ್ ಗೆ ಮಾಡಲಿಲ್ಲ ಯಾಕೆ??

ಎಲ್ಲದರ ಫೀಸ್ ಕಟ್ಟಿ, ತರಬೇತಿ ಕೊಟ್ಟು, ಅಂಡರ್19 ವರ್ಲ್ಡ್ ಕಪ್ ತಂಡಕ್ಕೆ ಹೋಗುವ ದಾರಿ ತೋರಿಸಿದರು. 2020 ಮತ್ತು 2021ರಲ್ಲಿ ತಿಲಕ್ ಅವರು ಐಪಿಎಲ್ ಗೆ ಸೆಲೆಕ್ಟ್ ಆಗುತ್ತಾರೆ ಎಂದು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ಸೆಲೆಕ್ಟ್ ಆಗದೆ ಇದ್ದಾಗ ಬಹಳ ಬೇಸರಗೊಂಡಿದ್ದರು. ಆದರೆ 2022ರಲ್ಲಿ ಅದೃಷ್ಟ ಬದಲಾಗಿ, ಮುಂಬೈ ಇಂಡಿಯನ್ಸ್ ತಂಡ 1.7ಕೋಟಿ ಕೊಟ್ಟು ಖರೀದಿ ಮಾಡಿತು. ಆ ಶ್ರಮ ಕಷ್ಟ ಎಲ್ಲವೂ ಈಗ ಪ್ರತಿಫಲ ಕೊಟ್ಟಿದ್ದು, ಮುಂಬೈ ಇಂಡಿಯನ್ಸ್ ಪರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ತಿಲಕ್ ಅವರ ತಂದೆ ಮಗನ ಬಗ್ಗೆ ಮಾತನಾಡಿ, ನನ್ನ ಮಗನ ಯಶಸ್ಸಿನಲ್ಲಿ ನನ್ನ ಹೆಸರು. ಬರದೆ ಇದ್ದರೂ, ಸಲಾಂ ಭಾಯ್ ಅವರ ಬಗ್ಗೆ ಬರೆಯಲೇಬೇಕು. ನನ್ನ ಮಗ ಇಷ್ಟು ಎತ್ತರಕ್ಕೆ ಬೆಳೆಯಲು ಅವರೇ ಕಾರಣ… ಎಂದಿದ್ದಾರೆ. ಇದನ್ನು ಓದಿ..Cricket News: ರನ್ ಔಟ್ ಆದರೂ ಔಟಿಲ್ಲ ಎಂದು ಬಿಟ್ಟ ಅಂಪೈರ್: ಇದಕ್ಕೆ ಕಾರಣ ಕೇಳಿದರೆ, ನಿಜಕ್ಕೂ ಕ್ರಿಕೆಟ್ ನಿಮಗೆ ಗೊತ್ತೇ ಇಲ್ಲ ಅಂತೀರಾ.

Comments are closed.