Kannada News: ದುಡಿಯುತ್ತಿರುವ ಹಣ ಸಾಕಾಗುತ್ತಿಲ್ಲ ಎನ್ನುವಂತೆ ಕುರ್ಚಿ ವ್ಯಾಪಾರಕ್ಕೆ ಇಳಿದ ಮುಂಬೈ ಇಂಡಿಯನ್ಸ್. ಒಂದು ಕುರ್ಚಿ ಬೆಲೆ ಕೇಳಿದರೇ, ಊಟ ಮಾಡೋದೇ ಬಿಡ್ತೀರಾ.
Kannada News: ಐಪಿಎಲ್ (IPL) ಶುರುವಾಗಿ 15 ವರ್ಷ ಕಳೆದಿದ್ದು, ಈಗ 16ನೇ ಸೀಸನ್ ನಡೆಯುತ್ತಿದೆ. ಐಪಿಎಲ್ ನ ಇತಿಹಾಸದಲ್ಲಿ ಅತಿಹೆಚ್ಚು ಟ್ರೋಫಿಗಳನ್ನು ಗೆದ್ದಿರುವ ಇತಿಹಾಸ ಇರುವುದು ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಎಂದರೆ ತಪ್ಪಾಗುವುದಿಲ್ಲ. ಮುಂಬೈ ಇಂಡಿಯನ್ಸ್ ತಂಡವು ಈಗಾಗಲೇ 5 ಬಾರಿ ಟ್ರೋಫಿ ಗೆದ್ದಿದೆ. ಟ್ರೋಫಿ ಗೆದ್ದಿರುವುದು ನಾಯಕ ರೋಹಿತ್ ಶರ್ಮಾ (Rohit Sharma) ಅವರ ಕ್ಯಾಪ್ಟನ್ಸಿಯಲ್ಲಿ ಎನ್ನುವುದು ವಿಶೇಷ.
ಐಪಿಎಲ್ ನಲ್ಲಿ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಹೊಂದಿರುವುದರಲ್ಲಿ ಆರ್ಸಿಬಿ (RCB), ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಅಗ್ರಸ್ಥಾನದಲ್ಲಿದೆ. ಇಷ್ಟು ಜನಪ್ರಿಯತೆಗೆ ಕಾರಣ ತಂಡದ ನಾಯಕರು ಎಂದರೆ ತಪ್ಪಲ್ಲ. ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli), ಎಂಐ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಸಿ.ಎಸ್.ಕೆ ತಂಡದ ಕ್ಯಾಪ್ಟನ್ ಧೋನಿ (Dhoni) ಅವರು. ಈ ಮೂವರು ನಾಯಕರು ಬಹಳ ಮುಖ್ಯವಾದ ಪಾತ್ರ ವಹಿಸಿದ್ದಾರೆ. ಇದನ್ನು ಓದಿ..Cricket News: ರನ್ ಔಟ್ ಆದರೂ ಔಟಿಲ್ಲ ಎಂದು ಬಿಟ್ಟ ಅಂಪೈರ್: ಇದಕ್ಕೆ ಕಾರಣ ಕೇಳಿದರೆ, ನಿಜಕ್ಕೂ ಕ್ರಿಕೆಟ್ ನಿಮಗೆ ಗೊತ್ತೇ ಇಲ್ಲ ಅಂತೀರಾ.
ಮುಂಬೈ ಇಂಡಿಯನ್ಸ್ ತಂಡದ ಓನರ್ ನೀತಾ ಅಂಬಾನಿ (Nita Ambani) ಅವರು ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಅವರ ಪತ್ನಿ ಎನ್ನುವ ವಿಷಯ ಗೊತ್ತೇ ಇದೆ. ರಿಲಯನ್ಸ್ ಸಂಸ್ಥೆಯ ಸಂಸ್ಥಾಪಕರಾಗಿರುವ ಇವರು, ಮುಂಬೈ ತಂಡದ ಓನರ್ ಗಳಾಗಿ ಇದೀಗ ಒಂದು ಹೊಸ ಪ್ಲಾನ್ ತಂದಿದ್ದಾರೆ. ಮುಂಬೈ ತಂಡದ ಕ್ರೇಜ್ ಬಳಸಿಕೊಂಡು, ಒಂದು ಹೊಸ ಚೇರ್ ಅನ್ನು ಹೊರತಂದಿದ್ದಾರೆ. ಮುಂಬೈ ಇಂಡಿಯನ್ಸ್ ಸಿಂಬಲ್ ಹಾಗೂ ತಂಡದ ಜೆರ್ಸಿ ಕಲರ್ ನಲ್ಲಿ ಚೇರ್ ಡಿಸೈನ್ ಮಾಡಲಾಗಿದೆ.
ಈ ಚೇರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಒಂದು ಚೇರ್ ನ ಬೆಲೆ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ. ನೀತಾ ಅಂಬಾನಿ ಅವರು ಬಿಡುಗಡೆ ಮಾಡಿರುವ ಚೇರ್ ನ ಬೆಲೆ ಬರೋಬ್ಬರಿ ₹34,999 ರೂಪಾಯಿಗಳು. ಇಷ್ಟು ದುಬಾರಿ ಬೆಲೆಯ ಚೇರ್ ಅನ್ನು ಯಾವ ಅಭಿಮಾನಿ ಖರೀದಿ ಮಾಡುತ್ತಾರೆ ಎನ್ನುವ ಪ್ರಶ್ನೆ ಕೂಡ ಈಗ ಶುರುವಾಗಿದೆ. ದುಡಿತಿರೋ ಹಣ ಸಾಲದೆ ಮುಂಬೈ ಇಂಡಿಯನ್ಸ್ ತಂಡ ಚೇರ್ ಬ್ಯುಸಿನೆಸ್ ಶುರು ಮಾಡಿಕೊಂಡ್ರಾ ಎಂದು ನೆಟ್ಟಿಗರು ಟ್ರೋಲ್ ಮಾಡೋದಕ್ಕೆ ಶುರು ಮಾಡಿದ್ದಾರೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?
Comments are closed.