IPL RCB 2023: ಲಕ್ನೋ ವಿರುದ್ಧ ಮುಂದಿನ ಪಂದ್ಯಕ್ಕೆ ಆರ್ಸಿಬಿ ಹೊರಹಾಕುತ್ತಿರುವ ಇಬ್ಬರು ಆಟಗಾರರು ಯಾರು ಗೊತ್ತೇ??
IPL RCB 2023: ಐಪಿಎಲ್ 2023ರ ಸಾಲಿನಲ್ಲಿ ನಮ್ಮ ಆರ್ಸಿಬಿ (RCB) ತಂಡದ ಪ್ರದರ್ಶನ ಮೊದಲ ಪಂದ್ಯದಲ್ಲಿ ಅದ್ಭುತವಾಗಿತ್ತು. ಮುಂಬೈ ಇಂಡಿಯನ್ಸ್ (Mumbai Indians) ತಂಡದ ವಿರುದ್ಧ, ಭರ್ಜರಿಯಾದ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದ ಆರ್ಸಿಬಿ ಮೊದಲ ಪಂದ್ಯವನ್ನು ಗೆದ್ದು ಬೀಗಿತು. ಆದರೆ ಎರಡನೇ ಪಂದ್ಯದಲ್ಲಿ ಎಲ್ಲವೂ ಉಲ್ಟಾ ಹೊಡೆಯಿತು. ಬೌಲಿಂಗ್ ಪ್ರದರ್ಶನ ಕಳಪೆಯಾಗಿತ್ತು. ಮಿಡ್ಲ್ ಆರ್ಡರ್ ಬ್ಯಾಟಿಂಗ್ ಕೂಡ ಕಳಪೆಯಾಗಿತ್ತು..
ಈ ಎಲ್ಲಾ ಕಾರಣಗಳಿಂದ ಆರ್ಸಿಬಿ ತಂಡ ಕೆಕೆಆರ್ (KKR) ತಂಡವನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಕೆಕೆಆರ್ ವಿರುದ್ಧ ಆರ್ಸಿಬಿ ಹೀನಾಯವಾದ ಸೋಲು ಕಂಡಿತು. ಈ ಸೋಲಿನ ನಂತರ ಆರ್ಸಿಬಿ ತಂಡದ ಮುಂದಿನ ಪಂದ್ಯ ಎಲ್.ಎಸ್.ಜಿ ವಿರುದ್ಧ ಏಪ್ರಿಲ್ 10ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇದಕ್ಕಾಗಿ ಆರ್ಸಿಬಿ ತಂಡ ಪ್ಲೇಯಿಂಗ್ 11 ನಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಯಾವ ಪ್ಲೇಯರ್ ಅನ್ನು ಬದಲಾಯಿಸಬಹುದು ಎಂದು ತಿಳಿಸುತ್ತೇವೆ ನೋಡಿ..
*ಆಕಾಶ್ ದೀಪ್ (Akash Deep) ಅವರು ಆರ್ಸಿಬಿ ತಂಡಕ್ಕೆ ಉತ್ತಮವಾದ ಪ್ರದರ್ಶನ ನೀಡುತ್ತಿಲ್ಲ. ಕಳೆದ ವರ್ಷದಿಂದಲು ಇವರು ಆರ್ಸಿಬಿ ತಂಡದ ಪಾಲಿಗೆ ದುಬಾರಿ ಆಗಿಯೇ ಇದ್ದಾರೆ. ಇವರನ್ನು ರೀಪ್ಲೇಸ್ ಮಾಡಲು ಆರ್ಸಿಬಿ ತಂಡದಲ್ಲಿ ಬೇರೆ ಆಟಗಾರರು ಇದ್ದಾರೆ. ಅವರಲ್ಲಿ ಆಕಾಶ್ ದೀಪ್ ಅವರ ಬದಲಿ ಆಯ್ಕೆಗೆ ಅವಿನಾಶ್ ಸಿಂಗ್ (Avinash Singh) ಉತ್ತಮ ಆಯ್ಕೆ ಎಂದು ಹೇಳಲಾಗುತ್ತಿದೆ. ಬೌಲಿಂಗ್ ವಿಭಾಗದಲ್ಲಿ ಇವರು ಉತ್ತಮ ಪ್ರದರ್ಶನ ನೀಡುತ್ತಾರೆ. ನಾಳಿನ ಪಂದ್ಯದಲ್ಲಿ ಇವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ..
*ಮೈಕಲ್ ಬ್ರೆಸ್ ವೆಲ್ (Michael Bracewell) ಅವರ ಬದಲಾಗಿ ಫಿನ್ ಆಲೆನ್ (Finn Allen) ಅವರು ಆಯ್ಕೆಯಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಇವರು ಉತ್ತಮವಾದ ಬೌಲರ್, ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರು ಬೌಲಿಂಗ್ ಮಾಡುವ ರೀತಿಯಲ್ಲಿ ಇವರ ಬೌಲಿಂಗ್ ಕೂಡ ಇದೆ. ಹಾಗೆಯೇ ಮತ್ತೊಬ್ಬ ಸ್ಮಾರ್ಟ್ ಪ್ಲೇಯರ್ ವನಿಂದು ಹಸರಂಗ (Vanindu Hasaranga) ಅವರು ಏಪ್ರಿಲ್ 10ರಂದು ತಂಡವನ್ನು ಸೇರಿಕೊಳ್ಳುತ್ತಿದ್ದು, ಅವರು ತಂಡಕ್ಕೆ ಬಂದರೆ ಬೌಲಿಂಗ್ ವಿಭಾಗದ ಟೆನ್ಷನ್ ಕಡಿಮೆ ಆಗುತ್ತದೆ ಎಂದೇ ಹೇಳಬಹುದು. ಅವರನ್ನು ಹೊರತುಪಡಿಸಿ, ಫಿನ್ ಅಲೆನ್ ಉತ್ತಮ ಆಯ್ಕೆ. ಜೊತೆಗೆ ಮೂರನೇ ಕ್ರಮಾಂಕಕ್ಕೆ ಆರ್ಸಿಬಿ ತಂಡಕ್ಕೆ ಒಳ್ಳೆಯ ಬ್ಯಾಟ್ಸ್ಮನ್ ಅವಶ್ಯಕತೆ ಇದ್ದು, ನ್ಯೂಜಿಲೆಂಡ್ ತಂಡದ ಯುವ ಆಟಗಾರ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ.
Comments are closed.