Neer Dose Karnataka
Take a fresh look at your lifestyle.

Film News: ಕನ್ನಡ ಚಿತ್ರಕ್ಕೆ ಮಲಯಾಳಂ ನಿಂದ ಬಂದ ವಿಶ್ವ ಸುಂದರಿ, ದೇಶವನ್ನೇ ಅಲ್ಲಾಡಿಸಿದ್ದ ನಟಿ ಕನ್ನಡಕ್ಕೆ. ಯಾರು ಗೊತ್ತೇ ಆ ಚೆಲುವೆ??

Film News: ಕನ್ನಡ ಚಿತ್ರರಂಗದಲ್ಲಿ ಈಗ ಹೊಸ ಅಲೆ ಎದ್ದಿದೆ, ಯುವ ನಿರ್ದೇಶಕರು, ಕಲಾವಿದರು ತಂತ್ರಜ್ಞರು ಬಹಳ ಒಳ್ಳೆಯ ಸಿನಿಮಾಗಳನ್ನು ತರುತ್ತಿದ್ದಾರೆ. ಇದೀಗ ಯುವನಟ ಶ್ರೇಯಸ್ ಕೆ ಮಂಜು (Shreyas K Manju) ಅವರ ಮುಂದಿನ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಶ್ರೇಯಸ್ ಅವರು ಕನ್ನಡದ ಖ್ಯಾತ ನಿರ್ಮಾಪಕ ಕೆ.ಮಂಜು ಅವರ ಮಗ.. ಕೆ.ಮಂಜು ಅವರು ನಮ್ಮ ಸ್ಯಾಂಡಲ್ ವುಡ್ ನ ಎಲ್ಲಾ ಸ್ಟಾರ್ ಗಳ ಜೊತೆಗೆ ಸಿನಿಮಾ ಮಾಡಿದ್ದಾರೆ..

ಪಡ್ಡೆಹುಲಿ (Paddehuli) ಸಿನಿಮಾ ಇಂದ ಅವರ ಮಗ ಶ್ರೇಯಸ್ ಅವರನ್ನು ಹೀರೋ ಮಾಡಿದರು, ಇತ್ತೀಚಿಗೆ ಶ್ರೇಯಸ್ ಅವರ ರಾಣಾ (Rana) ಸಿನಿಮಾ ಬಿಡುಗಡೆ ಆಯಿತು. ಇದೀಗ ಶ್ರೇಯಸ್ ಅವರ ಮುಂದಿನ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾಗೆ ವಿಷ್ಣುಪ್ರಿಯಾ (Vishnupriya) ಎಂದು ಟೈಟಲ್ ಇಡಲಾಗಿದೆ. ಕೆ.ಮಂಜು ಅವರು ಸಾಹಸಸಿಂಹ ಡಾ. ವಿಷ್ಣುವರ್ಧನ್ (Vishnuvardhan)ಅವರಿಗೆ ಬಹಳ ಆಪ್ತರು, ಹಾಗಾಗಿ ಈ ಟೈಟಲ್ ಅವರಿಗೆ ಬಹಳ ವಿಶೇಷವಾದದ್ದಾಗಿದೆ. ವಿಷ್ಣುಪ್ರಿಯಾ 90ರ ದಶಕದ ಕಾಲಘಟ್ಟದ ಸಿನಿಮಾ ಆಗಿದೆ. ಈ ಸಿನಿಮಾಗೆ ಆಯ್ಕೆ ಆಗಿರುವ ಆ ಸುಂದರವಾದ ಮಲಯಾಳಂ ಬೆಡಗಿ ಯಾರು ಗೊತ್ತಾ? ಇದನ್ನು ಓದಿ..Movie News: ಪ್ರಶಾಂತ್ ನೀಲ್ ಸಿನಿಮಾಗಾಗಿ ದೇಶವೇ ಊಟ ಬಿಡುವಂತೆ ಸಂಭಾವನೆ ಕೇಳಿದ ದೀಪಿಕಾ. ಕೇಳಿದ್ದು ಎಷ್ಟು ಕೋಟಿ ಗೊತ್ತೇ? ಯಪ್ಪಾ ಇಷ್ಟೊಂದಾ??

ಶ್ರೇಯಸ್ ಅವರು ರಿಮೇಕ್ ಸಿನಿಮಾ ಮಾಡುವುದು ಬೇಡ ಎಂದು ಹುಡುಕುತ್ತಿದ್ದಾಗ ಸಿಕ್ಕಿದ ಕಥೆ ಇದಾಗಿದ್ದು, ಒನ್ ಲೈನ್ ಸ್ಟೋರಿ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ, ಪಕ್ಕಾ ಲವ್ ಸ್ಟೋರಿ ಸಿನಿಮಾ ಆಗಿದ್ದು, ಪ್ರೀತಿಗೋಸ್ಕರ ಏನನ್ನು ಮಾಡಲು ಬೇಕಾದರೂ ತಯಾರಾಗಿರುವ ಹುಡುಗ ನಾಯಕ. ಪ್ರೀತಿಯ ಮಹತ್ವವನ್ನು ಭಾವನಾತ್ಮಕವಾಗಿ ತೋರಿಸಲಾಗಿದೆ. ರವಿ ಶ್ರೀವತ್ಸ ಅವರು ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ, ಮಲಯಾಳಂ ನಿರ್ದೇಶಕ ವಿ.ಕೆ.ಪ್ರಕಾಶ್ ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಗೀತಾ ಗೋವಿಂದಮ್ ಸಿನಿಮಾಗೆ ಸಂಗೀತ ನೀಡಿದ್ದ ಗೋಪಿ ಸುಂದರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಉತ್ತಮವಾದ ತಾರಾಬಳಗವನ್ನು ಸಿನಿಮಾ ಹೊಂದಿದೆ. ಇನ್ನು ಶ್ರೇಯಸ್ ಅವರಿಗೆ ಈ ಸಿನಿಮಾದಲ್ಲಿ ನಾಯಕಿಯಾಗಿರುವುದು ಕಣ್ಸನ್ನೆ ಮೂಲಕ ನ್ಯಾಷನಲ್ ಕ್ರಶ್ ಆಗಿದ್ದ ಪ್ರಿಯಾ ವಾರಿಯರ್ (Priya Varrier). ಸಿನಿಮಾದಲ್ಲಿ ನಾಯಕನ ಹೆಸರು ವಿಷ್ಣು, ನಾಯಕಿಯ ಹೆಸರು ಪ್ರಿಯಾ. ಇದು ಪ್ರಿಯಾ ಅವರ ಮೊದಲ ಕನ್ನಡ ಸಿನಿಮಾ ಆಗಿದ್ದು, ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶ್ರೇಯಸ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಜೂನ್ ಮೊದಲ ವಾರದಲ್ಲಿ ವಿಷ್ಣುಪ್ರಿಯಾ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ. ಇದನ್ನು ಓದಿ..Business: ಜುಜುಬಿ 150 ರೂಪಾಯಿ ಅಂತೇ ಹೂಡಿಕೆ ಮಾಡಿ, 1 ಕೋಟಿ ಗಳಿಸುವುದು ಹೇಗೆ ಗೊತ್ತೇ?? ಬೆಸ್ಟ್ ಯೋಜನೆ ಯಾವುದು ಗೊತ್ತೇ??

Comments are closed.