Neer Dose Karnataka
Take a fresh look at your lifestyle.

Kannada Story: ಬೆಣ್ಣೆಯಂತಹ ಮಗಳನ್ನು ಕೊಟ್ಟು, 3 ಕೋಟಿ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಡುತ್ತಿರುವಾಗ ತಾಳಿ ಕಟ್ಟಿವಾಗ ನಡೆದದ್ದು ಏನು ಗೊತ್ತೇ?

Kannada Story: ಒಂದು ಹುಡುಗನಿಗೆ ಮದುವೆ ಆಗುವುದಕ್ಕೆ ಒಂದು ಒಳ್ಳೆಯ ಹುಡುಗಿ, ಅತ್ತೆ ಮನೆಯ ಕಡೆ ಒಳ್ಳೆಯ ಸಂಬಂಧ, ಜೊತೆಗೆ ಕೈತುಂಬಾ ವರದಕ್ಷಿಣೆ, ಇಷ್ಟಲ್ಲದೆ ಇನ್ನೇನು ಬೇಕು? ಇದೆಲ್ಲವು ಸಿಕ್ಕಿದ್ದರು ಕೂಡ, ಇಲ್ಲೊಬ್ಬ ಹುಡುಗ, ಕುಡಿದು ಮಾಡಿರುವ ಕೆಲಸದಿಂದ ಮದುವೆಯೇ ಮುರಿದು ಬಿದ್ದಿದೆ. ಈ ಘಟನೆ ಹೈದರಾಬಾದ್ ನ ಜ್ಯುಬಿಲಿ ಹಿಲ್ಸ್ ನಲ್ಲಿ ನಡೆದಿದೆ. ಇಲ್ಲಿ ವಾಸ ಮಾಡುವ ಕುಟುಂಬದವರು, ಚಿತ್ತೂರಿನಲ್ಲಿ ಫೈನಾನ್ಸ್ ಮಾಡುವ, ತೇಜ ಸ್ವೀಟ್ಸ್ ಓನರ್ ರವಿಬಾಬು ಅವರ ಕುಟುಂಬದ ಜೊತೆಗೆ ಪರಿಚಯವಾಗಿ.

ರವಿಬಾಬು ಅವರ ಮಗ ವೈಷ್ಣವ್ ಜೊತೆಗೆ ಆ ಕುಟುಂಬದ 24 ವರ್ಷದ ಹುಡುಗಿಯ ಜೊತೆಗೆ ಮದುವೆ ಮಾಡಿಕೊಡಬೇಕು ಎಂದು ಮಾತುಕತೆ ನಡೆಸಿದರು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ನಿಶ್ಚಿತಾರ್ಥ ನಡೆಯಬೇಕಿತ್ತು, ಆದರೆ ಹುಡುಗನ ಮನೆಯವರು ಪೋಸ್ಟ್ ಪೋನ್ ಮಾಡಿ, ನವೆಂಬರ್ 20ರಂದು ನಿಶ್ಚಿತಾರ್ಥ ಇಟ್ಟುಕೊಂಡರು. ಮದುವೆಗಿಂತ ಮೊದಲೇ 3ಕೋಟಿ ವರದಕ್ಷಿಣೆ ಕೊಡಬೇಕು ಎಂದು ಹೇಳಿದ್ದರು. ನಿಶ್ಚಿತಾರ್ಥದ ದಿನ, 6ಲಕ್ಷ ಬೆಲೆಬಾಳುವ ವಜ್ರದ ಉಂಗುರ, 2ಲಕ್ಷ ಬೆಲೆ ಬಾಳುವ ವಾಚ್, 2 ಲಕ್ಷ ಬೆಲೆ ಬಾಳುವ ಚಿನ್ನದ ಸರ ಎಲ್ಲವನ್ನು ಮದುವೆ ಗಂಡು ವೈಷ್ಣವ್ ಗೆ ನೀಡಿದ್ದರು. ಈ ವರ್ಷ ಫೆಬ್ರವರಿ 9ಕ್ಕೆ ಮೊಯಿನಾಬಾದ್ ನ ಬ್ರೌನ್ ಟೌನ್ ರೆಸಾರ್ಟ್ ನಲ್ಲಿ ವೈಷ್ಣವ್ ಮತ್ತು ಆ ಹುಡುಗಿಯ ಮದುವೆ ಫಿಕ್ಸ್ ಆಗಿತ್ತು. ಇದನ್ನು ಓದಿ..Kannada Story: ಗಂಡ ಕೊಡುವುದು ಸಾಕಾಗದೆ, ಮತ್ತೊಬ್ಬ ಜೊತೆ ಸಂಬಂಧ ಇಟ್ಟುಕೊಂಡ ಹೆಂಡತಿ: ಇದನ್ನು ನೋಡಿದ ಗಂಡನ ತಮ್ಮನೇ ಮಾಡಿದ್ದೇನು ಗೊತ್ತೇ? ಹಿಂಗೂ ಇರ್ತಾರ??

ಶುಕ್ರವಾರದಿಂದ ರೆಸಾರ್ಟ್ ನಲ್ಲಿ ಎಲ್ಲ್ಯಾಕ್ ಶಾಸ್ತ್ರಗಳು ಶುರುವಾಗಿತ್ತು. ಆ ಮದುವೆಗಾಗಿ ಬರೋಬ್ಬರಿ 50ಲಕ್ಷ ಖರ್ಚು ಮಾಡಿದ್ದರು. ಶುಕ್ರವಾರದಂದು ಸಂಗೀತ್ ಕಾರ್ಯಕ್ರಮ ಶುರುವಾಗಿದ್ದು, ವೈಷ್ಣವ್ ಮತ್ತು ಅವನ ಸ್ನೇಹಿತರು ಚೆನ್ನಾಗಿ ಕುಡಿದು ಡ್ಯಾನ್ಸ್ ಮಾಡುತ್ತಾ, ಹುಡುಗಿಯರ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಅದನ್ನು ನೋಡಿ ವಧುವಿಗೆ ಬೇಸರವಾಗಿ, ಆಕೆ ವೈಷ್ಣವ್ ಅನ್ನು ತಡೆಯಲು ಪ್ರಯತ್ನಪಟ್ಟರು, ಆದರೆ ಇಬ್ಬರ ನಡುವೆ ಅಂದು ಜಗಳ ಶುರುವಾಯಿತು. ಆಕೆಗೆ ಕೆಟ್ಟದಾಗಿ ಬೈದ ವೈಷ್ಣವ್, ಹುಡುಗಿಯರ ಜೊತೆಗೆ ಅದೇ ರೀತಿ ವರ್ತಿಸಲು ಮುಂದುವರೆಸಿದ. ಇದರಿಂದ ಆಕೆ ಮದುವೆ ಬೇಡ ಎಂದು ನಿರ್ಧಾರ ಮಾಡಿದರು.

ಆಕೆಯ ಮನೆಯವರು ಕೂಡ ಒಪ್ಪಿ, ಮದುವೆ ನಿಲ್ಲಿಸಿದರು. ಆದರೆ ಮದುವೆಗೆ ಖರ್ಚು ಮಾಡಿದ ಹಣವನ್ನು ವೈಷ್ಣವ್ ಮನೆಯವರು ಕೊಡಬೇಕು ಎಂದು ಕೇಳಿದ್ದಕ್ಕೆ, ಅವರು ಕೂಡ ಒಪ್ಪಿಕೊಂಡರು, ಆದರೆ ಎರಡು ತಿಂಗಳಾದರೂ ಹಣ ಕೊಡದೆ, ಫೋನ್ ಸ್ವಿಚ್ ಆಫ್ ಆಗಿರುವ ಕಾರಣ, ಹುಡುಗಿಯ ಮನೆಯವರು ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ವೈಷ್ಣವ್, ಅವನ ತಂದೆ ರವಿಬಾಬು, ತಾಯಿ ದೇವಿ, ರಿಲೇಟಿವ್ ಗಳಾದ ತೇಜು, ಶ್ರವಣ್, ಶರತ್‌ಕುಮಾರ್ ರೆಡ್ಡಿ ಹಾಗೂ ಇನ್ನು ಕೆಲವರ ವಿರುದ್ಧ ವಿರುದ್ಧ ಐಪಿಸಿ 354, 420, 406, 506 ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನು ಓದಿ..Business Idea: ನೀವು ಹತ್ತನೇ ತರಗತಿ ವರೆಗೂ ಓದಿದ್ದರೂ ಸಾಕು, ನಿಮ್ಮ ಹಳ್ಳಿಯಲ್ಲಿಯೇ ಈ ಉದ್ಯಮ ಆರಂಭಿಸಿ, ಪೇಟೆಯವರಿಗಿಂತ ಹೆಚ್ಚು ದುಡಿಯಿರಿ.

Comments are closed.