Pragati Badiger: ಸರಿಗಮಪ ವಿಜೇತರಿಗೆ ನಿಜವಾಗಲೂ ಸಿಕ್ಕಿದ್ದು ಎಷ್ಟು ಗೊತ್ತೇ?? ಹಳ್ಳಿ ಹುಡುಗಿ ಪ್ರಗತಿ ರವರಿಗೆ ಕೊನೆಯಲ್ಲಿ ಏನೆಲ್ಲಾ ಸಿಕ್ತು ಗೊತ್ತೇ?
Pragati Badiger: ಜೀಕನ್ನಡ (Zee Kannada) ವಾಹಿನಿಯಲ್ಲಿ ಎಲ್ಲರೂ ಇಷ್ಟಪಡುವ ಕಾರ್ಯಕ್ರಮ ಸರಿಗಮಪ (Saregamapa), ಈ ಶೋ 19ನೇ ಸೀಸನ್ ನಿನ್ನೆಯಷ್ಟೇ ಮುಗಿದಿದೆ. ನಿನ್ನೆಯ ಫಿನಾಲೆ ಎಪಿಸೋಡ್ ನಲ್ಲಿ ವಿನ್ನರ್ ಆಗಿ ಹೊರಹೊಮ್ಮಿರುವವರು ಪ್ರಗತಿ ಬಡಿಗೇರ್ (Pragati Badiger). ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಬಹಳ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಪ್ರಗತಿ ಅವರಿಗೆ ಗೆದ್ದಿದ್ದಕ್ಕೆ ಏನೆಲ್ಲಾ ಸಿಕ್ಕಿದೆ ಗೊತ್ತಾ?
ಪ್ರಗತಿ ಬಡಿಗೇರ್ ಅವರು ಒಂದು ಪುಟ್ಟ ಹಳ್ಳಿಯಿಂದ ಬಂದ ಹುಡುಗಿ. ಪ್ರಗತಿ ಮಾತ್ರವಲ್ಲದೆ, ಅವರ ತಂದೆ ಹಾಗೂ ಸಹೋದರಿಯರು ಕೂಡ ಒಳ್ಳೆಯ ಹಾಡುಗಾರರು. ಇವರ ವಾಯ್ಸ್ ಗೆ ಕರ್ನಾಟಕದ ಜನತೆ ಫಿದಾ ಆಗಿದ್ದರು. ಸರಿಗಮಪ ಶೋ ಆರಂಭದಲ್ಲಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದರು, ಹಾಗೆಯೇ ಫಿನಾಲೆ ವರೆಗು ಬರುತ್ತೇನೆ ಎಂದು ಸ್ವತಃ ಪ್ರಗತಿ ಕೂಡ ಅಂದುಕೊಂಡಿರಲಿಲ್ಲ. ಆದರೆ ದೇವರು ಅದೃಷ್ಟವನ್ನು ಇವರಿಗೆ ನೀಡಿದ್ದಾರೆ. ಇದನ್ನು ಓದಿ..Samantha: ಸಮಂತಾ ರವರ ಜೊತೆ ಸ್ಟಾರ್ ನಟ ಸಿನಿಮಾ ಮಾಡಲು ಒಪ್ಪಿಕೊಳ್ಳುತ್ತಿಲ್ಲ, ಇದಕ್ಕೆ ಕಾರಣ ಯಾರು ಗೊತ್ತೇ? ತಿಳಿದರೆ ಅಂಗೇ.. ಮೈ ಎಲ್ಲಾ ಬೆವರು ಬರುತ್ತದೆ.
ಟಾಪ್ 2 ಸ್ಥಾನದಲ್ಲಿ ಇದ್ದವರು ಪ್ರಗತಿ ಬಡಿಗೇರ್ ಹಾಗೂ ಶಿವಾನಿ (Shivani), ಕೊನೆಗೆ ವಿನ್ನರ್ ಆಗಿದ್ದು ಪ್ರಗತಿ, ಕಾರ್ಯಕ್ರಮಕ್ಕೆ ಪ್ರಗತಿ ಅಪ್ಪ ಅಮ್ಮ, ಸಹೋದರಿಯರು ಎಲ್ಲರೂ ಕೂಡ ಬಂದಿದ್ದರು. ಪ್ರಗತಿ ವಿನ್ನರ್ ಎಂದ ಕೂಡಲೇ ಅವರೆಲ್ಲರೂ ಭಾವಕರಾದರು, ಪ್ರಗತಿಯನ್ನು ಮಹಾಗುರುಗಳು ಹೊಗಳಿದರು, ವಿಜಯ್ ಪ್ರಕಾಶ್ (Vijay Prakash) ಅವರು, ಅರ್ಜುನ್ ಜನ್ಯ (Arjun Janya) ಅವರು ಹಾಗೂ ಎಲ್ಲರೂ ಸಹ ಇನ್ನು ಹೆಚ್ಚಿನ ಯಶಸ್ಸು ಸಿಗಲಿ ಎಂದು ಪ್ರಗತಿ ಅವರಿಗೆ ಹಾರೈಸಿದರು..
ವಿನ್ನರ್ ಆದ ಪ್ರಗತಿ ಅವರಿಗೆ ಏನೆಲ್ಲಾ ಬಹುಮಾನ ಸಿಕ್ಕಿದೆ ಎಂದು ನೋಡುವುದಾದರೆ, 21 ಲಕ್ಷ ರೂಪಾಯಿ ಬೆಲೆ ಬಾಳುವಂಥ 30-40 ಸೈಟ್ ಸಿಕ್ಕಿದೆ, ಜೊತೆಗೆ 4 ಲಕ್ಷ ರೂಪಾಯಿ ಕ್ಯಾಶ್ ಪ್ರೈಜ್, ದಕ್ಷಿಣ ಭಾರತ ಚಿತ್ರರಂಗದ ಶ್ರೇಷ್ಠ ಸಿಂಗರ್ ಕೆ.ಎಸ್.ಚಿತ್ರ (K S Chitra) ಅವರ ಹ್ಯಾಂಡ್ ಪ್ರಿಂಟ್ ಇರುವ ನೆನಪಿನ ಕಾಣಿಕೆ ಹಾಗೂ ಸರಿಗಮಪಾ ಟ್ರೋಫಿ ಪ್ರಗತಿ ಅವರಿಗೆ ಸಿಕ್ಕಿದ್ದು, ಚಾನೆಲ್ ನ ಕ್ರಿಯೇಟಿವ್ ಹೆಡ್ ರಾಘವೇಂದ್ರ ಹುಣಸೂರು ಅವರು ಟ್ರೋಫಿಯನ್ನು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಪ್ರಗತಿ ಅವರಿಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರಿಂದ ಮೆಚ್ಚುಗೆ ಸಿಗುತ್ತಿದೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.