Jr NTR: ಇಂದು ಸಾವಿರಾರು ಕೋಟಿ ಅಸ್ತಿ ಮಾಡಿರುವ Jr ಎನ್ಟಿಆರ್, ತನ್ನ ತಾತ ಸೀನಿಯರ್ ಎನ್ಟಿಆರ್ ರವರಿಂದ ಪಡೆದ ಆಸ್ತಿ ಎಷ್ಟು ಗೊತ್ತೇ?? ಈ ರೀತಿ ತಾತ ಬೇಕೇ??
Jr NTR: ನಟ ಜ್ಯೂನಿಯರ್ ಎನ್ಟಿಆರ್ (Jr NTR) ಅವರು ನಂದಮೂರಿ ಕುಟುಂಬದ ಮೂರನೇ ತಲೆಮಾರಿನ ಕಲಾವಿದ. ಸೀನಿಯರ್ ಎನ್ಟಿಆರ್ (Sr NTR) ಅವರು ಹಾಗೂ ಬಾಲಯ್ಯ (Balayya) ಅವರ ನಂತರ ಅವರ ಸ್ಥಾನವನ್ನು ತುಂಬಬಲ್ಲ, ಭರವಸೆ ಮೂಡಿಸಿದವರು ಜ್ಯೂನಿಯರ್ ಎನ್ಟಿಆರ್. ನಂದಮೂರಿ ಕುಟುಂಬದಿಂದ ಬಂದ ನಟ ಎಂದು ಹೆಸರು ಇದ್ದರು ಕೂಡ, ಜ್ಯೂನಿಯರ್ ಎನ್ಟಿಆರ್ ಅವರು ಕಷ್ಟ ಮತ್ತು ಪರಿಶ್ರಮದಿಂದ ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ..

ಅದರಲ್ಲು ಆರ್.ಆರ್.ಆರ್ (RRR) ಸಿನಿಮಾ ನಂತರ ಜ್ಯೂನಿಯರ್ ಎನ್ಟಿಆರ್ ಅವರು ಗ್ಲೋಬಲ್ ಸ್ಟಾರ್ ಎನ್ನಿಸಿಕೊಂಡಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಸಹ ಒಪ್ಪಿಕೊಂಡಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ಎನ್ಟಿಆರ್ ಅವರ ಆಸ್ತಿ ಬಗ್ಗೆ ಕೆಲವು ವಿಚಾರಗಳು ಭಾರಿ ಸದ್ದು ಮಾಡುತ್ತಿದೆ. ಅದೇನೆಂದರೆ, ಜ್ಯೂನಿಯರ್ ಎನ್ಟಿಆರ್ ಅವರ ಒಟ್ಟು ಆಸ್ತಿ ಸುಮಾರು 440 ಕೋಟಿ ರೂಪಾಯಿಗಿಂತ ಹೆಚ್ಚು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Suma Kanakala: ನಿರೂಪಕಿ ಸುಮಾ ಜೀವನದಲ್ಲಿ ಬಿರುಗಾಳಿ; ಮದುವೆಯಾಗುವ ಮುನ್ನ ಆ ಡೈರೆಕ್ಟರ್ ಜೊತೆ ಮಾಡಿದ ಕೆಲಸ ಬಯಲಿಗೆ. ವಿಚ್ಛೇದನ ಫಿಕ್ಸ್ ಹಾ??
ಇವರು ಈಗ ಒಂದು ಸಿನಿಮಾಗೆ ಭಾರಿ ಸಂಭಾವನೆಯನ್ನೇ ಪಡೆಯುತ್ತಾರೆ. ಒಂದು ಸಿನಿಮಾಗೆ 80 ರಿಂದ 100 ಕೋಟಿ ಸಂಭಾವನೆ ಪಡೆಯುತ್ತಾರೆ, ಇದೆಲ್ಲಾ ಒಂದು ಕಡೆಯಾದರೆ, ಸೀನಿಯರ್ ಎನ್ಟಿಆರ್ ಅವರಿಂದ ಜ್ಯೂನಿಯರ್ ಎನ್ಟಿಆರ್ ಅವರಿಗೆ ಎಷ್ಟು ಆಸ್ತಿ ಬಂದಿದೆ ಎನ್ನುವ ಚರ್ಚೆ ಕೂಡ ಈಗ ಶುರುವಾಗಿದೆ, ಸೀನಿಯರ್ ಎನ್ಟಿಆರ್ ಅವರು ಸಂಪಾದನೆ ಮಾಡಿದ ಆಸ್ತಿಯಲ್ಲಿ ಹರಿಕೃಷ್ಣ (Harikrishna) ಅವರಿಗೆ ನಿಮ್ಮಕೂರುಲು ಎನ್ನುವ ಊರಿನಲ್ಲಿ ಭೂಮಿ ನೀಡಲಾಯಿತು, ಅದರಲ್ಲಿ 5 ಎಕರೆ ಭೂಮಿ ಜ್ಯೂನಿಯರ್ ಎನ್ಟಿಆರ್ ಅವರಿಗೆ ಬಂದಿದೆಯಂತೆ.
2005ರಲ್ಲಿ ನಿಮ್ಮಕೂರುಲು ಊರಿನಲ್ಲಿ ಒಂದು ಎಕರೆ ಭೂಮಯ ಬೆಲೆ 5 ಲಕ್ಷ ರೂಪಾಯಿ ಆಗಿತ್ತು. ಆದರೆ ಈಗ ನಿಮ್ಮಕೂರುಲುನಲ್ಲಿ ಭೂಮಿಯ ಬೆಲೆ ಭಾರಿ ಹೆಚ್ಚಾಗಿದೆ, ಒಂದು ಎಕರೆ ಭೂಮಿಗೆ 3ಕೋಟಿಗಿಂತ ಹೆಚ್ಚು ಬೆಲೆ ಇದೆ. 5 ಎಕರೆಗೆ ಒಟ್ಟಾರೆಯಾಗಿ 15ಕೋಟಿ ರೂಪಾಯಿವರೆಗು ಇರುತ್ತದೆ ಎಂದು ಅಂದಾಜು ಮಾಡಲಾಗಿದೆ. ಈ ವಿಚಾರದ ಬಗ್ಗೆ ಈಗ ನೆಟ್ಟಿಗರ ವಲಯದಲ್ಲಿ ಚರ್ಚೆ ಉಂಟಾಗುತ್ತಿದೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??