Kichha Sudeep: ಸುದೀಪ್ ಅವರಿಗೆ ಬಂದಿದ್ದ ಬೆದರಿಕೆ ಪತ್ರದ ಪ್ರಕರಣಕ್ಕೆ ರೋಚಕ ಟ್ವಿಸ್ಟ್; ಪೊಲೀಸರು ಮಾಡುತ್ತಿರುವುದೇನು ಗೊತ್ತೇ?? ಬರೆದವರಿಗೆ ಬಿಗ್ ಶಾಕ್.
Kichha Sudeep: ನಟ ಸುದೀಪ್ ಅವರು ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಅವರ ಪರವಾಗಿ ಕ್ಯಾಂಪೇನ್ ಮಾಡುತ್ತಾರೆ ಎನ್ನುವ ವಿಷಯ ಹೊರಬಂದಾಗ, ಬಹಳಷ್ಟು ಟೀಕೆಗಳು ಎದುರಾಗಿದ್ದವು. ಅಷ್ಟೇ ಅಲ್ಲದೆ, ಸುದೀಪ್ ಅವರ ಮನೆ ಅಡ್ರೆಸ್ ಗೆ ನೇರವಾಗಿ ಬೆದರಿಕೆ ಪತ್ರ ಕೂಡ ಬಂದಿತ್ತು. ಅದರ ವಿರುದ್ಧವಾಗಿ ಸುದೀಪ್ ಅವರ ಮ್ಯಾನೇಜರ್ ಜ್ಯಾಕ್ ಮಂಜು ಅವರು ಪೊಲೀಸರ ಬಳಿ ದೂರು ನೀಡಿದ್ದು, ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕೇಸ್ ಈಗ ಎಲ್ಲಿಯವರೆಗೂ ಬಂದಿದೆ ಗೊತ್ತಾ?
ಕಿಚ್ಚ ಸುದೀಪ್ ಅವರಿಗೆ ಬಂದ ಬೆದರಿಕೆ ಪತ್ರದ ಬಗ್ಗೆ ತನಿಖೆ ಶುರು ಮಾಡಿದ ಸಿಸಿಬಿ (CCB) ಪೊಲೀಸರಿಗೆ ಈಗಾಗಲೇ ಕೆಲವು ಮಾಹಿತಿಗಳು ಸಿಕ್ಕಿದೆ. 21 ದಿನಗಳಿಂದ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಯಾವ ಪೋಸ್ಟ್ ಬಾಕ್ಸ್ ಇಂದ ಲೆಟರ್ ಪೋಸ್ಟ್ ಆಗಿದೆ ಎಂದು ಪರಿಶೀಲನೆ ನಡೆಸಿದ್ದಕ್ಕೆ ಉತ್ತರ ಸಿಕ್ಕಿದೆ. ದೊಮ್ಮಲೂರು ಹತ್ತಿರದ ಪೋಸ್ಟ್ ಬಾಕ್ಸ್ ಇಂದ ಲೆಟರ್ ಪೋಸ್ಟ್ ಆಗಿದ್ದು, ಪೋಸ್ಟ್ ಮಾಡಿರುವುದು ಯಾರು ಎಂದು ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ, ಸ್ವಿಫ್ಟ್ ಕಾರ್ ನಲ್ಲಿ ಬಂದಿರುವ ಇಬ್ಬರು ಪೋಸ್ಟ್ ಮಾಡಿ ಹೋಗಿದ್ದಾರೆ. ಇದನ್ನು ಓದಿ..Pavan Kalyan: ಶ್ರೀ ಲೀಲಾ ಅಲ್ಲ, ಪವನ್ ಕಲ್ಯಾಣ್ ಗೆ ಮತ್ತೊಬ್ಬಳು ಬೆಂಗಳೂರಿನ ಹುಡುಗಿ ನಟಿಯಾಗಿ ಆಯ್ಕೆ: ಬೆಣ್ಣೆಯಂತಹ ನಟಿ ಯಾರು ಗೊತ್ತೇ??
ಆದರೆ ಈ ವ್ಯಕ್ತಿಗಳು ಯಾರು ಎಂದು ಇನ್ನು ತಿಳಿದುಬಂದಿಲ್ಲ. ಪೊಲೀಸರಿಗೆ ಈಗ ಅವರ ಮುಖ ಚಹರೆಯ ಮಾಹಿತಿ ಸಿಕ್ಕಿದ್ದು, ಆ ವ್ಯಕ್ತಿಗಳು ಯಾರು ಎಂದು ಪತ್ತೆಹಚ್ಚಲು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ದೂರು ನೀಡಿದ್ದ ಜ್ಯಾಕ್ ಮಂಜು (Jack Manju) ಅವರನ್ನು ಸಹ ಕರೆಸಿ, ವಿಚಾರಣೆ ನಡೆಸಿದ್ದು, ಅವರಿಂದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ, ಯಾರ ಮೇಲಾದರು ಅನುಮಾನ ಇದೆಯಾ ಎನ್ನುವ ಮಾತಿಗೆ ಜ್ಯಾಕ್ ಮಂಜು ಅವರು, ಮೂರು ವರ್ಷಗಳ ಹಿಂದೆ ಸುದೀಪ್ ಅವರ ಕೆಲಸ ಬಿಟ್ಟಿದ್ದ ಡ್ರೈವರ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿಸಿಬಿ ಪೊಲೀಸರು ಆ ಡ್ರೈವರ್ ಅನ್ನು ಸಹ ಕರೆದು, ವಿಚಾರಣೆ ನಡೆಸಿದ್ದಾರೆ. ಆದರೆ ಡ್ರೈವರ್ ಬಗ್ಗೆ ಅನುಮಾನ ಬರುವ ಹಾಗೆ ಯಾವುದೇ ಸಾಕ್ಷಿ ಆಧಾರ ಇಲ್ಲ ಎನ್ನಲಾಗಿದ್ದು, ಇಂಥ ಕೆಲಸ ಮಾಡಿರುವ ಆ ವ್ಯಕ್ತಿ ಯಾರು ಎನ್ನುವುದಕ್ಕೆ ಈಗ ಹುಡುಕಾಟ ನಡೆಸಲಾಗುತ್ತಿದೆ. ಆದಷ್ಟು ಬೇಗ ಹೀಗೆ ಮಾಡಿರುವ ಆ ವ್ಯಕ್ತಿ ಯಾರು ಎಂದು ಸಿಸಿಬಿ ಪೊಲೀಸರು ಕಂಡುಹಿಡಿಯುವ ಭರವಸೆ ಕೊಟ್ಟಿದ್ದಾರೆ. ಇದನ್ನು ಓದಿ..Business Idea: ನೀವು ಹೊಸ ವ್ಯಾಪಾರ ಮಾಡುವ ಆಲೋಚನೆ ಇದ್ದರೇ, ಕಡಿಮೆ ಬಂಡವಾಳದಲ್ಲಿ ಕನಿಷ್ಠ 40 ಸಾವಿರ ಗಳಿಸುವ ಉದ್ಯಮ ಯಾವುದು ಗೊತ್ತೇ?
Comments are closed.