Neer Dose Karnataka
Take a fresh look at your lifestyle.

Pavan Kalyan: ಶ್ರೀ ಲೀಲಾ ಅಲ್ಲ, ಪವನ್ ಕಲ್ಯಾಣ್ ಗೆ ಮತ್ತೊಬ್ಬಳು ಬೆಂಗಳೂರಿನ ಹುಡುಗಿ ನಟಿಯಾಗಿ ಆಯ್ಕೆ: ಬೆಣ್ಣೆಯಂತಹ ನಟಿ ಯಾರು ಗೊತ್ತೇ??

Pavan Kalyan: ನಟ ಪವನ್ ಕಲ್ಯಾಣ್ ಅವರ ಸಿನಿಮಾ ಎಂದರೆ ಎಲ್ಲಾ ಅಭಿಮಾನಿಗಳಲ್ಲಿ ಕುತೂಹಲ ಹಾಗೂ ಕ್ರೇಜ್ ಹೆಚ್ಚಾಗಿರುತ್ತದೆ. ಅವರನ್ನು ತೆಲುಗು ಚಿತ್ರರಂಗದ ಪವರ್ ಸ್ಟಾರ್ ಎಂದೇ ಕರೆಯುತ್ತಾರೆ. ಈಗ ಪವನ್ ಕಲ್ಯಾಣ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಇವರ ಮುಂದಿನ ಸಿನಿಮಾ ಓಜಿ ಗೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎನ್ನಲಾಗಿದ್ದು, ಆದರೆ ಈಗ ಅಧಿಕೃತವಾಗಿ ಬೇರೆ ನಟಿಯ ಘೋಷಣೆ ಆಗಿದ್ದು, ಆಕೆ ಕೂಡ ಕನ್ನಡತಿ ಎನ್ನುವುದು ವಿಶೇಷವಾಗಿದೆ..

ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ (Sreeleela) ಅಂತಹ ಕನ್ನಡದ ಹುಡುಗಿಯರು ತೆಲುಗಿನಲ್ಲಿ ಸ್ಟಾರ್ ಗಳಾಗಿದ್ದು, ಅದೇ ಸಾಲಿಗೆ ಈಗ ಕನ್ನಡದ ಮತ್ತೊಬ್ಬ ನಟಿ ಸೇರಿಕೊಳ್ಳಲಿದ್ದಾರೆ. ಆ ನಟಿ ಮತ್ಯಾರು ಅಲ್ಲ, 2019ರಲ್ಲಿ ಒಂದ್ ಕತೆ ಹೇಳ್ಳಾ ಸಿನಿಮಾ ಮೂಲಕ ನಟನೆ ಶುರು ಮಾಡಿದ ಪ್ರಿಯಾಂಕ ಅರುಲ್ ಮೋಹನ್ (Priyanka Arul Mohan). ಇವರ ತಂದೆ ತಮಿಳಿಗರು, ತಾಯಿ ಕನ್ನಡತಿ ಇವರ ಇಡೀ ಫ್ಯಾಮಿಲಿ ಇರುವುದು ಬೆಂಗಳೂರಿನಲ್ಲಿ.. ಪ್ರಿಯಾಂಕ ಅವರು ಹುಟ್ಟಿ ಬೆಳೆದದ್ದು ಎಲ್ಲವೂ ಇಲ್ಲಿಯೇ, ನಟನೆ ಶುರು ಮಾಡಿದ್ದು ಕೂಡ ಕನ್ನಡ ಸಿನಿಮಾ ಮೂಲಕ. ಇದನ್ನು ಓದಿ..Aaradhya Bachhan: ದಿಡೀರ್ ಎಂದು ಹೈ ಕೋರ್ಟ್ ಮೆಟ್ಟಲೇರಿದ ಐಶ್ವರ್ಯ ರೈ ಮಗಳು. 11 ವರ್ಷ ವಯಸ್ಸಿನಲ್ಲಿಯೇ ಸ್ವತಂತ್ರವಾಗಿ ಹೀಗೆ ಮಾಡಿದ್ದು ಯಾಕೆ ಗೊತ್ತೇ?

2019ರಲ್ಲೇ ತೆಲುಗಿಗೆ ಪಾದಾರ್ಪಣೆ ಮಾಡಿದರು ಪ್ರಿಯಾಂಕ, ನಟ ನಾನಿ (Nani) ಅವರ ನಾನಿಸ್ ಗ್ಯಾಂಗ್ ಲೀಡರ್ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟು, ಬಳಿಕ ತಮಿಳಿನಲ್ಲಿ ಡಾಕ್ಟರ್, ಡಾನ್ ಸೇರಿದಂತೆ ಸೂಪರ್ ಹಿಟ್ ಸಿನಿಮಗಳಲ್ಲಿ ನಟಿಸಿದ್ದಾರೆ. ಇದೀಗ ನಟ ಧನುಷ್ (Dhanush) ಅವರ ಕ್ಯಾಪ್ಟನ್ ಮಿಲ್ಲರ್ ಸಿನಿಮಾಗು ಪ್ರಿಯಾಂಕ ಅವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲದೆ ಡೈರೆಕ್ಟರ್ ರಾಜೇಶ್ (Rajesh) ಅವರ ಸಿನಿಮಾದಲ್ಲೂ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ..

ಇದೀಗ ಪ್ರಿಯಾಂಕ ಅವರಿಗೆ ತೆಲುಗಿನಿಂದ ಭರ್ಜರಿ ಆಫರ್ ಬಂದಿದ್ದು, ಪವನ್ ಕಲ್ಯಾಣ್ ಅವರ ಓಜಿ (OG) ಸಿನಿಮಾಗೆ ಆಯ್ಕೆಯಾಗಿದ್ದಾರೆ. ಈ ಸಿನಿಮಾವನ್ನು ಸಾಹೋ ಖ್ಯಾತಿಯ ಸುಜಿತ್ (Sujith) ಅವರು ನಿರ್ದೇಶನ ಮಾಡುತ್ತಿದ್ದು, ಆರ್.ಆರ್.ಆರ್ (RRR) ಸಿನಿಮಾ ನಿರ್ಮಾಣ ಮಾಡಿದ್ದ ಡಿವಿವಿ (DVV) ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಡಿವಿವಿ ಸಂಸ್ಥೆಯು ಟ್ವಿಟರ್ ನಲ್ಲಿ ಪ್ರಿಯಾಂಕ ಮೋಹನ್ ಅವರಿಗೆ ಓಜಿ ಸಿನಿಮಾ ತಂಡಕ್ಕೆ ಸ್ವಾಗತ ಎಂದು ಟ್ವೀಟ್ ಮಾಡಿದ್ದು, ಇದಕ್ಕೆ ರಿಪ್ಲೈ ಮಾಡಿರುವ ಪ್ರಿಯಾಂಕ ಅವರು ಧನ್ಯವಾದ ತಿಳಿಸಿದ್ದಾರೆ, ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Business Idea: ನೀವು ಕೂಡ ಟ್ರಾವೆಲ್ಸ್ ಉದ್ಯಮವನ್ನು ಮಾಡಬೇಕು ಎಂದರೆ, ಏನು ಮಾಡಬೇಕು ಗೊತ್ತೇ? ಅದೆಷ್ಟು ಸುಲಭ ಗೊತ್ತೇ?? ನೋಡಿ, ಆರಂಭಿಸಿ, ಶ್ರೀಮಂತರಾಗಿ.

Comments are closed.