Kannada News: ಇಂದು ಚಿಟಿಕೆ ಹೊಡೆದರೆ ದೇಶವನ್ನೇ ನಿಲ್ಲಿಸುವಷ್ಟು ಶಕ್ತಿ ಹೊಂದಿರುವ ಈ ನಟಿ ಯಾರು ಗೊತ್ತೇ? ಈ ಚಿಕ್ಕ ವಯಸ್ಸಿನ ಫೋಟೋ ಯಾರದ್ದು ಗೊತ್ತೇ??
Kannada News: ಈಗ ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಚೈಲ್ಡ್ ಹುಡ್ ಫೋಟೋಗಳು ಹೊಸ ಟ್ರೆಂಡ್ ಮತ್ತು ಸೆನ್ಸೇಷನ್ ಸೃಷ್ಟಿಸುತ್ತಿದೆ. ನಟ ನಟಿಯರು ತಮ್ಮ ಚಿಕ್ಕ ವಯಸ್ಸಿನ ಫೋಟೋಗಳನ್ನು ಶೇರ್ ಮಾಡಿ, ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿದ್ದಾರೆ. ಇದೀಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹಳ ಸದ್ದು ಮಾಡಿರುವ ಹೀರೋಯಿನ್ ಒಬ್ಬರ ಚೈಲ್ಡ್ ಹುಡ್ ಫೋಟೋ ಭಾರಿ ಸೌಂಡ್ ಮಾಡುತ್ತಿದೆ. ಈ ನಟಿ ಯಾರು ಅಂತ ನಿಮಗೆ ಗೊತ್ತಾಯ್ತಾ?
ನಿಮಗೆ ಈ ಫೋಟೋದಲ್ಲಿ ಕಾಣುತ್ತಿರುವ ಮುದ್ದು ಹುಡುಗಿಯ ಬಗ್ಗೆ ತಿಳಿಸುತ್ತೇವೆ. ಪುಟ್ಟ ಹೇರ್ ಸ್ಟೈಲ್ ನಲ್ಲಿ ಕ್ಯೂಟ್ ಆಗಿ ಕಾಣುತ್ತಿರುವ ಹುಡುಗಿ ಮತ್ಯಾರು ಅಲ್ಲ, ಭಾರತ ಚಿತ್ರರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದು ಹೆಸರು ಮಾಡಿರುವ ನಟಿ ತಮನ್ನಾ ಭಾಟಿಯಾ (Tamannah Bhatia). ಇವರ ಬಗ್ಗೆ ಯಾರಿಗೂ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. 18 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.
ದಕ್ಷಿಣ ಭಾರತ ಚಿತ್ರರಂಗದಲ್ಲಿ ತೆಲುಗು ಚಿತ್ರರಂಗದಲ್ಲಿ ಹ್ಯಾಪಿಡೇಸ್ ಸಿನಿಮಾ ಮೂಲಕ ನಟನೆ ಶುರು ಮಾಡಿದರು. ಬಳಿಕ ತೆಲುಗು ಮತ್ತು ತಮಿಳು ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿ ಬಹಳ ಬೇಗ ಸ್ಟಾರ್ ಪಟ್ಟಕ್ಕೆ ಏರಿದರು. ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಎಲ್ಲಾ ಸ್ಟಾರ್ ಕಲಾವಿದರ ಜೊತೆಗೆ ತೆರೆಹಂಚಿಕೊಂಡು, ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆಯೇ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಕೂಡ ಸಂಪಾದಿಸಿಕೊಂಡಿದ್ದಾರೆ ನಟಿ ತಮನ್ನಾ.
ಈಗ ಸೌತ್ ಇಂಡಿಯಾ ಮಾತ್ರವಲ್ಲದೆ, ಹಿಂದಿ ಚಿತ್ರರಂಗದಲ್ಲಿ ಕೂಡ ಒಳ್ಳೆಯ ಹೆಸರು ಮಾಡುತ್ತಾ, ಹಿಂದಿಯಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ, ಈಗಲೂ ಅದೇ ಸ್ಟಾರ್ ಸ್ಟೇಟಸ್ ಉಳಿಸಿಕೊಂಡು ಬಂದಿದ್ದಾರೆ. ಕನ್ನಡದಲ್ಲಿ ಯಶ್ ಅವರ ಕೆಜಿಎಫ್ ಚಾಪ್ಟರ್1 ಸಿನಿಮಾದ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಇವರ ಚೈಲ್ಡ್ ಹುಡ್ ಫೋಟೋ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
Comments are closed.