Akhil Akkineni: ಅಖಿಲ್ ತನ್ನ ಹೆತ್ತ ತಾಯಿಗೆ ಹೇಗೆ ಹಿಂಸೆ ನೀಡಿದ್ದಾನೆ ಅಂತೇ ಗೊತ್ತೇ?? ತಂದೆ ನಾಗಾರ್ಜುನ ಕಣ್ಣೀರು ಹಾಕಿ ಹೇಳಿದ್ದೇನು ಗೊತ್ತೇ??
Akhil Akkineni: ಅಕ್ಕಿನೇನಿ ಕುಟುಂಬದ ಮೂರನೇ ತಲೆಮಾರಿನ ನಟ ಅಖಿಲ್ ಅಕ್ಕಿನೇನಿ ಅವರು ಚಿತ್ರರಂಗದಲ್ಲಿ ಒಂದು ಸ್ಥಾನಕ್ಕೆ ಏರಬೇಕು ಎಂದು ಬಹಳ ಕಷ್ಟಪಡುತ್ತಿದ್ದಾರೆ. ಅಖಿಲ್ ಅವರಿಗೆ ಇದುವರೆಗೂ ಬ್ಲಾಕ್ ಬಸ್ಟರ್ ಹಿಟ್ ಸಿಕ್ಕಿಲ್ಲ, ಅದರ ಹುಡುಕಾಟದಲ್ಲಿಯೇ ಇದ್ದಾರೆ. ಇದೀಗ ಅಖಿಲ್ ಅಭಿನಯದ ಏಜೆನ್ಟ್ ಸಿನಿಮಾ ತೆರೆಕಾಣುವುದಕ್ಕೆ ಸಿದ್ಧವಾಗಿದೆ, ಏಪ್ರಿಲ್ 28ರಂದು ಈ ಸಿನಿಮಾ ತೆರೆಕಾಣಲಿದೆ.
ಏಜೆನ್ಟ್ (Agent) ಸಿನಿಮಾ ಪ್ರೊಮೋಶನ್ ಗಾಗಿ ಪ್ರೀ ರಿಲೀಸ್ ಇವೆಂಟ್ ಅನ್ನು ವರಂಗಲ್ ನಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಕ್ಕಿನೇನಿ ನಾಗಾರ್ಜುನ ಅವರು ಚೀಫ್ ಗೆಸ್ಟ್ ಆಗಿ ಬಂದಿದ್ದರು. ಕಾರ್ಯಕ್ರಮದಲ್ಲಿ ಮಗನ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ ಕಿಂಗ್ ನಾಗಾರ್ಜುನ (Nagarjuna). ಸ್ಟೇಜ್ ಮೇಲೆ ಅಖಿಲ್ ಬಗ್ಗೆ ಮಾತನಡುವುದಕ್ಕೆ ಶುರು ಮಾಡಿದ ನಾಗಾರ್ಜುನ ಅವರು, “ಅಖಿಲ್ ತುಂಬಾ ಕಷ್ಟಪಡುತ್ತಾ ಇದ್ದಾನೆ..ಅದು ಸಿನಿಮಾದಲ್ಲಿ ಕಾಣಿಸುತ್ತಿದೆ, ಒಬ್ಬ ನಟನಾಗಿ ಒಳ್ಳೆಯ ಹೆಸರು ಮಾಡಬೇಕು ಎನ್ನುವ ಛಲ ಅವನಲ್ಲಿದೆ..
ಅದಕ್ಕಾಗಿ ಅವನು ಇನ್ನು ಮುಂದಕ್ಕೆ ಸಾಗಬೇಕು. ಅಖಿಲ್ ಚಿಕ್ಕ ವಯಸ್ಸಿನಿಂದಲು ಹೈಪರ್ ಆಕ್ಟಿವ್, ಚಿಕ್ಕ ವಯಸ್ಸಿನಲ್ಲಿ ತುಂಟತನದಿಂದ ಅಮಲಾಳನ್ನು ಗೋಳು ಹಾಕಿಕೊಳ್ಳುತ್ತಿದ್ದ. ಅದರಿಂದ ಅಮಲಾ (Amala Akkineni) ಅವನನ್ನು ಒಂದು ದಿನ ಡಾಕ್ಟರ್ ಹತ್ತಿರ ಕರೆದುಕೊಂಡು ಹೋದರು, ಆಗ ಡಾಕ್ಟರ್ ಅಖಿಲ್ ಅನ್ನು ದಿನಕ್ಕೆ ಒಂದು ಗಂಟೆ ಸಮಯ ಮಣ್ಣಿನಲ್ಲಿ ಕೂರಿಸಿ ಎಂದು ಹೇಳಿದರು, ಆಗ ಅಖಿಲ್ ಎನರ್ಜಿ ಭೂಮಿಯೊಳಗೆ ಹೋಗುತ್ತದೆ ಎಂದು ಡಾಕ್ಟರ್ ಹೇಳಿದರು.
ಈಗ ಅಖಿಲ್ ನಲ್ಲಿರುವ ಎಲ್ಲಾ ಎನರ್ಜಿಯನ್ನು ಈ ಸಿನಿಮಾಗಾಗಿ ಡೈರೆಕ್ಟರ್ ಸುರೇಂದರ್ ರೆಡ್ಡಿ ಅವರು ಖರ್ಚು ಮಾಡಿದ್ದಾರೆ. ಅದೇ ಕಾರಣಕ್ಕೆ ಏಜೆನ್ಟ್ ಸಿನಿಮಾ ಇಷ್ಟು ಅದ್ಭುತವಾಗಿ ಮೂಡಿ ಬಂದಿರುವ ಹಾಗೆ ಕಾಣುತ್ತಿದೆ. ಹಾಗಾಗಿ ಈ ಸಿನಿಮಾ ದೊಡ್ಡ ಹಿಟ್ ಆಗಬೇಕು ಎಂದು ಮನಸ್ಸಿನಿಂದ ಕೇಳಿಕೊಳ್ಳುತ್ತೇನೆ..” ಎಂದು ಹೇಳಿದ್ದಾರೆ ನಾಗಾರ್ಜುನ. ಅಖಿಲ್ ಅಕ್ಕಿನೇನಿ ಅವರಿಗೆ ಈ ಸಿನಿಮಾ ಇಂದ ಆದರೂ ಹಿಟ್ ಸಿಗುತ್ತಾ ಎಂದು ಕಾದು ನೋಡಬೇಕಿದೆ.
Comments are closed.