Rajani Praveen: ಭಾಗ್ಯಲಕ್ಷ್ಮಿ ಖಡಕ್ ವಿಲ್ಲನ್, ರಜನಿ ರವರು ನಟನೆಗೂ ಬರುವ ಮುನ್ನ ಮಾಡುತ್ತಿದ್ದ ಕೆಲಸ ಏನು ಗೊತ್ತೇ?? ತಿಳಿಯದ ಆಸಕ್ತಿರ ಮಾಹಿತಿ
Rajani Praveen: ಕಲರ್ಸ್ ಕನ್ನಡ (Colors Kannada) ವಾಹಿನಿಯ ಭಾಗ್ಯಲಕ್ಷ್ಮಿ (Bhagyalakshmi) ಧಾರವಾಹಿ ಜನರಿಗೆ ಬಹಳ ಇಷ್ಟವಾಗಿದೆ. ಇತ್ತೀಚೆಗೆ ಈ ಧಾರವಾಹಿ ಎರಡು ಕಥೆಗಳಾಗಿದ್ದು, ಅಕ್ಕನ ಕಥೆ ಭಾಗ್ಯಲಕ್ಷ್ಮಿ, ತಂಗಿ ಕಥೆ ಲಕ್ಷ್ಮಿ ಬಾರಮ್ಮ ಎಂದು ಶುರುವಾಗಿದೆ. ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ವಿಲ್ಲನ್ ಸುಪ್ರೀತಾ ಪಾತ್ರ ಎಲ್ಲರಿಗೂ ಗೊತ್ತಿದೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಖಡಕ್ ವಿಲ್ಲನ್ ಇವರು. ಕಾವೇರಿ ಮಾಡುವ ಎಲ್ಲಾ ಕುತಂತ್ರಗಳನ್ನ ಹೇಗಾದರೂ ಮಾಡಿ ಪತ್ತೆ ಮಾಡುತ್ತಾರೆ. ಈ ಪಾತ್ರದಲ್ಲಿ ನಟಿಸುತ್ತಿರುವವರ ಬಗ್ಗೆ ನಿಮಗೆ ಗೊತ್ತಾ?
ಸುಪ್ರೀತಾ ಪಾತ್ರದ ಡ್ರೆಸಿಂಗ್ ಬಹಳ ಸ್ಪೆಷಲ್ ಹಾಗೆಯೇ ಸ್ಟೈಲಿಶ್ ಆಗಿಯು ಇದೆ. ಈಗಿನ ಸ್ಟೈಲಿಶ್ ವಿಲ್ಲನ್ ಗಳ ಪೈಕಿ ಇವರು ಕೂಡ ಒಬ್ಬರು. ಸುಪ್ರೀತಾ ಪಾತ್ರದಲ್ಲಿ ನಟಿಸುತ್ತಿರುವ ಇವರ ನಿಜವಾದ ಹೆಸರು ರಜನಿ ಪ್ರವೀಣ್ (Rajani Praveen). ಇವರು ನಟನೆಗೆ ಅಚಾನಕ್ ಆಗಿ ಬಂದವರು, ಉಷಾ ಭಂಡಾರಿ ಅವರ ತಂಡದಲ್ಲಿ ನಾಟಕಗಳನ್ನು ಮಾಡುತ್ತಿದ್ದ ರಜನಿ ಅವರಿಗೆ ನಟನೆಯ ವಿಷಯವಾಗಿ ಪ್ರೋತ್ಸಾಹ ಕೊಟ್ಟಿದ್ದು ಅವರ ಪತಿ. ಗಂಡನ ಮೇಲೆ ಬಹಳ ಪ್ರೀತಿ ಇರುವ ಇವರಿಗೆ ಮದುವೆಯಾಗಿ 12 ವರ್ಷ ಆಗಿದೆ..
ಇದನ್ನು ಓದಿ: Janhvi Kapoor: ನನ್ನನ್ನು ಮದುವೆಯಾಗುವ ಹುಡುಗನಿಗೆ ಅದು ಜಾಸ್ತಿ ಇದ್ದರೇ ಸಾಕು ಎಂದ ಜಾಹ್ನವಿ: ಹೇಳಿದ್ದೇನು ಗೊತ್ತೇ? ಇವೆಲ್ಲ ಇವಾಗ ಬೇಕಿತ್ತಾ?? ನೋಡಿ ಟ್ರೈ ಮಾಡ್ತೀರಾ.
10 ವರ್ಷದ ಮಗ ಕೂಡ ಇದ್ದಾನೆ. ರಜನಿ ಅವರು ಮೊದಲು ಐಟಿ ಕಂಪನಿಯಲ್ಲಿ ಕೆಲಸ ಮಾಡಬೇಕು ಅಂದುಕೊಂಡಿದ್ದರು. ಆದರೆ ಐಟಿ ಕೆಲಸ ಅವರಿಗೆ ಸರಿ ಹೊಂದಲಿಲ್ಲ, ನಂತರ ಟೀಚರ್ ಆಗಿ ಒಂದಷ್ಟು ಸಮಯ ಕೆಲಸ ಮಾಡುತ್ತಿದ್ದರು. ಬಳಿಕ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟರು..ರಜನಿ ಅವರು ನಟಿಸಿದ ಮೊದಲ ಧಾರವಾಹಿ ಹರ ಹರ ಮಹಾದೇವ. ಅದಾದ ನಂತರ ರಂಗನಾಯಕಿ, ಮಹಾದೇವಿ, ತಮಿಳಿನಲ್ಲಿ ಅಮ್ಮನ್ ಧಾರವಾಹಿಯಲ್ಲಿ ನಟಿಸಿದ್ದಾರೆ..
ಚಂದನವನದ ಕೆಲವು ಸಿನಿಮಾಗಳಲ್ಲಿ ಕೂಡ ವಿಲ್ಲನ್ ಪಾತ್ರಗಳಲ್ಲಿ ನಟಿಸಿದ್ದಾರೆ ರಜನಿ. ಒಟ್ಟು 7 ಧಾರವಾಹಿಗಳಲ್ಲಿ ನಟಿಸಿದ್ದು ಈಗ ಲಕ್ಷ್ಮೀ ಬಾರಮ್ಮ ಧಾರವಾಹಿಯ ಸುಪ್ರೀತಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಪ್ರೆಗ್ನೆನ್ಸಿ ಸಮಯದಲ್ಲಿ ಇವರ ದೇಹದ ತೂಕ 120 ಕೆಜಿ ವರೆಗು ಹೆಚ್ಚಾಗಿತ್ತಂತೆ. ನಂತರ ವರ್ಕೌಟ್ ಮಾಡಿ ಸಣ್ಣ ಆಗಿದ್ದು, ಈಗ ಯಾವುದೇ ಮಾಡೆಲ್ ಗು ಕಮ್ಮಿ ಇಲ್ಲ ಎನ್ನುವ ಹಾಗೆ ಕಾಣುತ್ತಾರೆ ರಜನಿ…
Comments are closed.