Rajanikanth: ಐಪಿಎಲ್ ನಲ್ಲಿ ಮಿಂಚುತ್ತಿರುವ ಯುವ ಆಟಗಾರನ ಆಟಕ್ಕೆ ಫಿದಾ ಆದ ರಜನಿಕಾಂತ್: ಭೇಟಿ ಮಾಡಲು ಕರೆದಿದ್ದು ಯಾಕೆ ಗೊತ್ತೇ? ಇದಪ್ಪ ಅದೃಷ್ಟ ಅಂದ್ರೆ.
Rajanikanth: ಐಪಿಎಲ್ (IPL) ನಲ್ಲಿ ಈಗ ಶೈನ್ ಆಗುತ್ತಿರುವುದು ಬ್ಯಾಟ್ಸ್ಮನ್ ರಿಂಕು ಸಿಂಗ್ (Rinku Singh). ಕೆಕೆಆರ್ (KKR) ತಂಡದ ಆಟಗಾರ ಆಗಿರುವ ಇವರು, ಗುಜರಾತ್ ಟೈಟನ್ಸ್ (Gujarat Titans) ವಿರುದ್ಧದ ಪಂದ್ಯದಲ್ಲಿ ನೀಡಿದ ಇನ್ನಿಂಗ್ಸ್ ಎಲ್ಲರ ಗಮನ ಸೆಳೆದಿದೆ..ಏಪ್ರಿಲ್ 5ರಂದು ನಡೆದ ಈ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಕೆಕೆಆರ್ ಗೆಲ್ಲಲು 29 ರನ್ಸ್ ಬೇಕಿತ್ತು. ಈ ಪಂದ್ಯದಲ್ಲಿ ಕೆಕೆಆರ್ ಸೋಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು.

ಓವರ್ ನ ಮೊದಲ ಬಾಲ್ ನಲ್ಲಿ ಸಿಂಗಲ್ ಪಡೆದು ಉಮೇಶ್ ಯಾದವ್ (Umesh Yadav) ಅವರು ರಿಂಕು ಸಿಂಗ್ ಅವರಿಗೆ ಸ್ಟ್ರೈಕ್ ಬಿಟ್ಟುಕೊಟ್ಟರು. ಕೊನೆಯ 5 ಬಾಲ್ ಗಳಲ್ಲಿ, 5 ಸಿಕ್ಸರ್ ಭಾರಿಸಿ ಕೆಕೆಆರ್ ತಂಡಕ್ಕೆ ಅನಿರೀಕ್ಷಿತ ಗೆಲುವು ತಂದುಕೊಟ್ಟಿದ್ದು ರಿಂಕು ಸಿಂಗ್. ಅಂದಿನ ಆ ಇನ್ನಿಂಗ್ಸ್ ಅನ್ನು ಈಗಲೂ ಜನರು, ಕ್ರಿಕಟ್ ಪ್ರಿಯರು, ಹಿರಿಯ ಆಟಗಾರರು ಎಲ್ಲರೂ ಕೂಡ ಕೊಂಡಾಡುತ್ತಿದ್ದಾರೆ. ರಿಂಕು ಅವರ ಈ ಬ್ಯಾಟಿಂಗ್ ಪ್ರದರ್ಶನವನ್ನು ಕಿಂಗ್ ಖಾನ್ ಸಹ ಹೊಗಳಿದ್ದರು.
ಮತ್ತೊಬ್ಬ ಶ್ರೇಷ್ಠ ವ್ಯಕ್ತಿ ಕೂಡ ರಿಂಕು ಸಿಂಗ್ ಅವರನ್ನು ಹೊಗಳಿದ್ದು, ಅವರು ಮತ್ಯಾರು ಅಲ್ಲ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು. ರಜನಿಕಾಂತ್ ಅವರು ಕೂಡ ರಿಂಕು ಸಿಂಗ್ ಅವರ ಆಟಕ್ಕೆ ಫ್ಯಾನ್ ಆಗಿದ್ದು, ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯ ಮುಗಿದ ನಂತರ ರಿಂಕು ಸಿಂಗ್ ಅವರಿಗೆ ಕರೆ ಮಾಡಿ ಮಾತನಾಡಿದ್ದರಂತೆ. ಈ ಬಗ್ಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ರಿಂಕು ಸಿಂಗ್ ಅವರು ಜಹೀರ್ ಖಾನ್ (Zaheer Khan) ಅವರೊಡನೆ ಮಾತನಾಡಿದ್ದಾರೆ.
“ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯ ಮುಗಿದ ನಂತರ ರಜನಿಕಾಂತ್ ಸರ್ ನನಗೆ ಕಾಲ್ ಮಾಡಿದ್ದರು. ನೀವು ಚೆನ್ನೈಗೆ ಬಂದಾಗ ನಿಮ್ಮನ್ನು ಭೇಟಿ ಮಾಡುತ್ತೇನೆ.. ಮೇ 14ರಂದು ನಿಮ್ಮ ಜೊತೆ ಮಾತನಾಡುತ್ತೇನೆ ಅಂತ ಹೇಳಿದ್ದಾರೆ ಮೇ 14ರಂದು ಚೆನ್ನೈನಲ್ಲಿ ಸಿ.ಎಸ್.ಕೆ ವರ್ಸಸ್ ಕೆಕೆಆರ್ (CSK vs KKR) ಪಂದ್ಯವಿದೆ. ಆ ದಿನ ನಾನು ರಜನಿಕಾಂತ್ ಅವರನ್ನು ಭೇಟಿ ಮಾಡಬಹುದು..” ಎಂದು ರಿಂಕು ಸಿಂಗ್ ಅವರು ಹೇಳಿದ್ದಾರೆ.
ಇದನ್ನು ಓದಿ: Business: ಜುಜುಬಿ 150 ರೂಪಾಯಿ ಅಂತೇ ಹೂಡಿಕೆ ಮಾಡಿ, 1 ಕೋಟಿ ಗಳಿಸುವುದು ಹೇಗೆ ಗೊತ್ತೇ?? ಬೆಸ್ಟ್ ಯೋಜನೆ ಯಾವುದು ಗೊತ್ತೇ??https://newsofninja.com/7995/