Chris Gayle: ವಿರಾಟ್ ಹಾಗೂ ಎಬಿಡಿ ಇಬ್ಬರ ಜೊತೆಗೆ ಬ್ಯಾಟಿಂಗ್ ಮಾಡಿರುವ ಗೆಲ್, ಇವರಿಬ್ಬರಲ್ಲಿ ಯಾರ ಜೊತೆ ಬ್ಯಾಟಿಂಗ್ ಮಾಡಲು ಇಷ್ಟ ಅಂತೇ ಗೊತ್ತೇ?
Chris Gayle: ವಿಶ್ವಕ್ರಿಕೆಟ್ ನಲ್ಲಿ ಶ್ರೇಷ್ಠ ಆಟಗಾರರಾಗಿ ಗುರುತಿಸಿಕೊಂಡಿರುವವರ ಪೈಕಿ ಭಾರತದ ಆಟಗಾರ ವಿರಾಟ್ ಕೊಹ್ಲಿ (Virat Kohli), ಸೌತ್ ಆಫ್ರಿಕಾ ತಂಡದ ಆಟಗಾರ ಎಬಿ ಡಿ ವಿಲಿಯರ್ಸ್ (AB de Villiers) ಹಾಗೂ ವೆಸ್ಟ್ ಇಂಡೀಸ್ ತಂಡದ ಕ್ರೀಸ್ ಗೇಯ್ಲ್ (Chris Gayle) ಈ ಮೂವರು ಬರುತ್ತದೆ. ತಮ್ಮ ತಮ್ಮ ರಾಷ್ಟ್ರ ತಂಡಗಳಿಗೆ ಇವರಿಬ್ಬರ ಕೊಡುಗೆ ಅನಂತವಾದದ್ದು, ಈ ಮೂವರು ಆಟಗಾರರು ಕೂಡ ಐಪಿಎಲ್ (IPL) ನಲ್ಲಿ ನಮ್ಮ ಆರ್ಸಿಬಿ (RCB) ತಂಡದ ಪರವಾಗಿ ಅಡಿರುವುದು ವಿಶೇಷ.
ಆರ್ಸಿಬಿ ತಂಡಕ್ಕೆ ಈ ಮೂವರ ಕಾಂಬಿನೇಷನ್ ಅದ್ಭುತವಾಗಿತ್ತು. ಈಗ ಐಪಿಎಲ್ ನಲ್ಲಿ ಆಡುತ್ತಿರುವುದು ವಿರಾಟ್ ಕೊಹ್ಲಿ ಅವರು ಮಾತ್ರ. ಇನ್ನಿಬ್ಬರು ಕೂಡ ನಿವೃತ್ತಿ ಹೊಂದಿದ್ದಾರೆ. ಕ್ರೀಸ್ ಗೇಯ್ಲ್, ಎಬಿಡಿ ಹಾಗೂ ವಿರಾಟ್ ಮೂವರು ಜೊತೆಯಾಗಿ 2017ರವರೆಗೂ ಆರ್ಸಿಬಿ ತಂಡದ ಪರವಾಗಿ ಆಡಿದರು. 2018ರಲ್ಲಿ ಆರ್ಸಿಬಿ ತಂಡವು ಕ್ರೀಸ್ ಗೇಯ್ಲ್ ಅವರನ್ನು ಬಿಡುಗಡೆ ಮಾಡಿತು, ನಂತರ ಅವರನ್ನು ಪಂಜಾಬ್ ತಂಡ ಖರೀದಿ ಮಾಡಿತು.
ಕ್ರಿಸ್ ಗೇಯ್ಲ್ ಅವರು ಕಳೆದ ವರ್ಷ ಐಪಿಎಲ್ ಇಂದಲೂ ನಿವೃತ್ತಿ ಪಡೆದರು..ಎಬಿಡಿ ಅವರು 2021ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಗು ವಿದಾಯ ಹೇಳಿದರು. ಈ ವರ್ಷ ಆರ್ಸಿಬಿ ಅನ್ ಬಾಕ್ಸಿಂಗ್ ಇವೆಂಟ್ ನಲ್ಲಿ ಎಬಿಡಿ ಹಾಗೂ ಕ್ರಿಸ್ ಗೇಯ್ಲ್ ಅವರನ್ನು ಕರೆಸಿ, ಅವರಿಗೆ ಗೌರವ ಸಲ್ಲಿಸಿ, ಅವರಿಬ್ಬರನ್ನು ವಾಲ್ ಆಫ್ ಫೇಮ್ ಗೆ ಸೇರಿಸಲಾಯಿತು. ಆ ಕ್ಷಣ ಎಲ್ಲರಿಗೂ ಭಾವುಕವಾದ ಕ್ಷಣವಾಗಿತ್ತು. ಇನ್ನು ಇತ್ತೀಚೆಗೆ ಕ್ರಿಸ್ ಗೇಯ್ಲ್ ಅವರಿಗೆ ಒಂದು ಪ್ರಶ್ನೆಯನ್ನು ಕೇಳಲಾಗಿದೆ.
ಆರ್ಸಿಬಿಗಾಗಿ ಆಡಿರುವ ಇಷ್ಟು ವರ್ಷಗಳಲ್ಲಿ ಕ್ರಿಸ್ ಗೇಯ್ಲ್ ಅವರಿಗೆ ಬೆಸ್ಟ್ ಪಾರ್ಟ್ನರ್ಶಿಪ್ ಹಾಗೂ ಫೇವರೆಟ್ ಪಾರ್ಟ್ನರ್ಶಿಪ್ ಎಂದು ಅನ್ನಿಸಿರುವುದು ಯಾರ ಜೊತೆಗೆ ಎಂದು ಕೇಳಲಾಯಿತು. ಅದಕ್ಕೆ ಉತ್ತರ ಕೊಟ್ಟಿರುವ ಕ್ರಿಸ್ ಗೇಯ್ಲ್ ಅವರು, “ನಾನು ಹೆಚ್ಚಾಗಿ ಬ್ಯಾಟಿಂಗ್ ಮಾಡಿರುವುದು ವಿರಾಟ್ ಅವರ ಜೊತೆಗೆ, ಹಾಗಾಗಿ ನಾನು ವಿರಾಟ್ ಅವರನ್ನು ನನ್ನ ಬೆಸ್ಟ್ ಪಾರ್ಟ್ನರ್ ಆಗಿ ಆಯ್ಕೆ ಮಾಡುತ್ತೇನೆ..” ಎಂದು ಹೇಳಿದ್ದಾರೆ ಲೆಜೆಂಡ್, ಯೂನಿವರ್ಸಲ್ ಬಾಸ್ ಕ್ರಿಸ್ ಗೇಯ್ಲ್.
Comments are closed.