Pooja Hegde: ಮಹೇಶ್ ಬಾಬು ಚಿತ್ರದ ಕಡೆಯಿಂದ ಬಂತು ಷಾಕಿಂಗ್ ಸುದ್ದಿ: ನಡುಗಿದ ಪೂಜಾ ಹೆಗ್ಡೆ: ಕನ್ನಡತಿಯ ಸಿನಿ ಜೀವನ ಮುಗಿಯಿತೇ??
Pooja Hegde: ಒಂದೆರಡು ವರ್ಷಗಳ ಹಿಂದೆ ನಟಿ ಪೂಜಾ ಹೆಗ್ಡೆ ಅವರನ್ನು ಗೋಲ್ಡನ್ ಲೆಗ್ ಎಂದೇ ಕರೆಯಲಾಗುತ್ತಿತ್ತು, ಇವರು ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗುತ್ತಿದ್ದವು. ಅಲ್ಲು ಅರ್ಜುನ್ (Allu Arjun) ಅವರ ಜೊತೆಗೆ ನಟಿಸಿದ ಅಲಾ ವೈಕುಂಠಪುರಮುಲೋ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಆ ಸಿನಿಮಾ ಸಕ್ಸಸ್ ಇಂದ ಪೂಜಾ ಹೆಗ್ಡೆ ಅವರಿಗೆ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಅವಕಾಶಗಳು ಸಿಕ್ಕಿದೆ.

ಆದರೆ ನಂತರದಲ್ಲಿ ಬಿಡುಗಡೆಯಾದ ಯಾವ ಸಿನಿಮಾ ಕೂಡ ಹಿಟ್ ಲಿಸ್ಟ್ ಸೇರಿಲ್ಲ, ಎಲ್ಲಾ ಸಿನಿಮಾಗಳು ಕೂಡ ಫ್ಲಾಪ್ ಆಗಿರುವುದರಿಂದ ಈಗ ಪೂಜಾ ಹೆಗ್ಡೆ ಅವರ ಕೆರಿಯರ್ ಚಿಂತೆಯಲ್ಲಿದೆ ಎಂದರೆ ತಪ್ಪಾಗುವುದಿಲ್ಲ. ಅಕ್ಕಿನೇನಿ ಫ್ಯಾಮಿಲಿ ಹೀರೋ ಅಖಿಲ್ (Akhil Akkineni) ಅವರೊಡನೆ ನಟಿಸಿದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್ (Vijay Devarakonda) ಅವರೊಡನೆ ನಟಿಸಿದ ಬೀಸ್ಟ್, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅವರ ಜೊತೆಗೆ ನಟಿಸಿದ ರಾಧೆ ಶ್ಯಾಮ್..
ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಆಚಾರ್ಯ, ಇತ್ತೀಚೆಗೆ ಬಾಲಿವುಡ್ ನ ಸ್ಟಾರ್ ಹೀರೋ ಸಲ್ಮಾನ್ ಖಾನ್ (Salman Khan) ಅವರ ಕಿಸಿ ಕಾ ಭಾಯ್, ಕಿಸಿ ಕಾ ಜಾನ್ ಈ ಎಲ್ಲಾ ಸಿನಿಮಾಗಳು ಕೂಡ ಫ್ಲಾಪ್ ಆಗಿದೆ. ಇದನ್ನು ಬಿಟ್ಟರೆ ಪೂಜಾ ಹೆಗ್ಡೆ ಅವರು ತ್ರಿವಿಕ್ರಂ ಶ್ರೀನಿವಾಸ್ (Trivikram Srinivas Rao) ಅವರು ನಿರ್ದೇಶನ ಮಾಡುತ್ತಿರುವ ಮಹೇಶ್ ಬಾಬು (Mahesh Babu) ಅವರ SSMB28 ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ತಮಗೆ ಹಿಟ್ ನೀಡಿದ ನಿರ್ದೇಶಕ ತ್ರಿವಿಕ್ರಂ ಅವರಿಂದ ಮತ್ತೊಮ್ಮೆ ಕೆರಿಯರ್ ಟ್ರ್ಯಾಕ್ ಗೆ ಬರಬಹುದು ಎಂದು ನಿರೀಕ್ಷೆಯಲ್ಲಿದ್ದಾರೆ.
ಆದರೆ ತ್ರಿವಿಕ್ರಂ ಹಾಗೂ ಮಹೇಶ್ ಬಾಬು ಅವರ ಕಾಂಬಿನೇಷನ್ ಸಿನಿಮಾ ಕಾರಣಾಂತರಗಳಿಂದ ಶೂಟಿಂಗ್ ನಿಂತು ಹೋಗಿದೆ. ಇದರಿಂದ ಪೂಜಾ ಹೆಗ್ಡೆ ಅವರ ಚಿಂತೆ ಇನ್ನು ಜಾಸ್ತಿಯಾಗಿದೆ ಎಂದೇ ಹೇಳಬಹುದು. ಇವರ ಕೈಯಲ್ಲಿ ಈಗ ಬೇರೆ ಸಿನಿಮಾಗಳು ಇದೆಯೋ ಇಲ್ಲವೋ ಎಂದು ಕೂಡ ಗೊತ್ತಿಲ್ಲ. ಒಟ್ಟಿನಲ್ಲಿ ಮಹೇಶ್ ಬಾಬು ಅವರ ಕಡೆಯಿಂದ ಪೂಜಾ ಹೆಗ್ಡೆ ಅವರಿಗೆ ದೊಡ್ಡ ಶಾಕ್ ಸಿಕ್ಕಿದೆ.
Comments are closed.